11:50 AM Sunday30 - November 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ… ಶಾಲೆಯಂಗಳದಲ್ಲಿ ತಾರಾಲಯ: ಗ್ರಾಮೀಣ ಮಕ್ಕಳಲ್ಲಿ ಖಗೋಳ ವಿಜ್ಞಾನ ಕೌತುಕ ಬಿತ್ತುವ ಗುರಿ; ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಪತಿ-ಪತ್ನಿ ಮಧ್ಯೆ ಮನಸ್ತಾಪ: ಗಂಡ ನೇಣಿಗೆ ಶರಣು; ಅಂತ್ಯ ಸಂಸ್ಕಾರಕ್ಕೂ ಬಾರದ ಸತಿ!!

05/03/2022, 09:30

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಗಂಡ ಹೆಂಡಿರು ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲೊಬ್ಬ ಗಂಡ ಪತ್ನಿಯ ವಿಷಯದಲ್ಲಿ ಮನನೊಂದ ನೇಣಿಗೆ ಶರಣಾದ ದಾರುಣ ಘಟನೆ ನಡೆದಿದೆ.

ಅಥಣಿ ತಾಲೂಕಿನ ತಾಂವಶಿ ಗ್ರಾಮದ ಸುನೀಲ ಅರ್ಜುನ್ ಹೊಕ್ಕುಂಡಿ”(26) ಆತ್ಮಹತ್ಯೆಗೆ ಶರಣಾದ ಯುವಕ.

ಒಂದು ವರ್ಷದ ಹಿಂದೆ ಅಷ್ಟೇ ಮಹಾರಾಷ್ಟ್ರದ ಸಾಂಗ್ಲಿ ನಗರದ ಯೋಗೀತಾ ಜೋತೆ ಸುನೀಲ ವಿವಾಹವಾಗಿತ್ತು. ಮದುವೆಯ ನಂತರ ಆರು ತಿಂಗಳ ವರೆಗೆ ದಾಂಪತ್ಯ ಜೀವನ ಚನ್ನಾಗಿಯೇ ನಡೆದಿತ್ತು. ಸುನೀಲ ತನ್ನ ದಿನನಿತ್ಯದ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡು ತಂದೆ,ತಾಯಿ ಹಾಗೂ ಒಬ್ಬ ಸಹೋದರನ ಜತೆ ಒಂದೇ ಕುಟುಂಬದಲ್ಲಿ ವಾಸವಿದ್ದರೂ.

ಎರಡು ತಿಂಗಳ ಹಿಂದೆ ಸುನೀಲ ಪತ್ನಿ ಯೋಗೀತಾ  ತವರಮನೆಗೆ ಹೋಗಿ ಬರುತ್ತೇನೆ ಅಂತಾ ಹೋದವಳು ನಂತರ ಮರಳಿ ಗಂಡನ ಮನೆಗೆ ಬರಲು ನಿರಾಕರಿಸಿದ್ದಾಳೆ. ಸುನೀಲ ತಂದೆ ತಾಯಿ ಕೂಡಾ ಯೋಗೀತಾ ಬರಲು ಮನವಲಿಸಿದರು ಕೂಡಾ ಬಾರಲು ನಿರಾಕರಿದದಕ್ಕೆ ಮನ ನೊಂದು ಸುನೀಲ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. 

ಮೃತನ ಪತ್ನಿ ಯೋಗೀತಾ ಕೊನೆಯ ಪಕ್ಷ ಅಂತ್ಯ ಸೌಂಸ್ಕಾರಕ್ಕೂ ಬಾರದೆ ಇರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು ಮೃತ ಸುನೀಲ ತಂದೆ ಅರ್ಜುನ್ ಹೊಕ್ಕುಂಡಿ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು