12:34 AM Tuesday13 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಪಟಾಕಿ ಸಿಡಿಸದೆ ಎಲೆಕ್ಷನ್ ವಿಜಯೋತ್ಸವ: ಕ್ರಮ ಕೈಗೊಳ್ಳಲು ಪರಿಸರಕ್ಕಾಗಿ ನಾವು ಸಂಘಟನೆ ಆಗ್ರಹ

31/05/2024, 18:20

ಮಂಗಳೂರು(reporterkarnataka.com): ಚುನಾವಣಾ ಫಲಿತಾಂಶವನ್ನು ಪಟಾಕಿ ಸಿಡಿಸದೆ ಸಂಭ್ರಮಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಪರಿಸರಕ್ಕಾಗಿ ನಾವು ಸಂಘಟನೆ ಮನವಿ ಮಾಡಿದೆ.
ಈ ವರ್ಷದ ಬೇಸಿಗೆಯಲ್ಲಿ, ಹವಾಮಾನ ವೈಪ್ಯರೀತ್ಯ ಮತ್ತು ಭೂತಾಪಮಾನದ ಬಿಸಿಯನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಕರ್ನಾಟಕದಾದ್ಯಂತ ನೀರಿನ ಬವಣೆಯನ್ನು ಕಂಡಿದ್ದೇವೆ. ಸಾರ್ವಜನಿಕರ ಸಹಕಾರ ಮತ್ತು ಸರ್ಕಾರದ ಆಡಳಿತ ಯಂತ್ರದಿಂದ ಮಾತ್ರ ಸರಕಾರ ಹಮ್ಮಿಕೊಂಡ ಪರಿಹಾರ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ‌. ಸದ್ಯದಲ್ಲೇ ಚುನಾವಣೆಗಳು ಮುಕ್ತಾಯವಾಗಿ, ಜೂನ್ 4ರಂದು ಮತ ಎಣಿಕೆಯಾಗಿ, ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಹರ್ಷೋದ್ಗಾರವನ್ನು ವ್ಯಕ್ತಪಡಿಸುವುದು ಸಹಜ. ಈ ಸಂದರ್ಭದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವುದು ರೂಢಿಯಾಗಿದೆ. ಆದರೆ, ಪಟಾಕಿಯಲ್ಲಿರುವ ಸಿಡಿಮದ್ದು, ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ ನಂತಹ ಅನೇಕ ವಿಷ ರಾಸಾಯನಿಕಗಳನ್ನು ಹೊರಸೂಸುತ್ತವೆ. ಇವು ಮಾನವರಿಗೆ ಹಾನಿಕಾರಕವಷ್ಟೇ ಅಲ್ಲ, ಪರಿಸರ ಹಾಗೂ ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತವೆ. ಹಾಗಾಗಿ ಈ ಸಂದರ್ಭಗಳಲ್ಲಿ ನಾವು ಪಟಾಕಿ ಸಿಡಿಸದೇ ಸಂಭ್ರಮಿಸುವುದು ಉತ್ತಮ ವಿಧಾನ.
ಈ ಸಂಬಂಧದಲ್ಲಿ, ಪಟಾಕಿಯನ್ನು ಸಿಡಿಸುವುದರಿಂದ ಉಂಟಾಗುವ ಪರಿಸರ ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವುದು ಅಗತ್ಯವೆಂದು, ನ್ಯಾಯಮೂರ್ತಿ ಬೋಪಣ್ಣ ಅವರನ್ನು ಒಳಗೊಂಡ ಸುಪ್ರೀಂಕೋರ್ಟಿನ ನ್ಯಾಯಪೀಠ, ನವೆಂಬರ್ , ೨೦೨೩ ರಲ್ಲಿ ತೀರ್ಪು ನೀಡಿದೆ.
ಈ ಹಿನ್ನೆಲೆಯಲ್ಲಿ, ಈ ಬಾರಿಯ ಚುನಾವಣಾ ಫಲಿತಾಂಶದ ಸಂಭ್ರಮವನ್ನು, ಸಂಬಂಧಪಟ್ಟವರು ಪಟಾಕಿಗಳನ್ನು ಸಿಡಿಸದೇ ಆಚರಿಸುವಂತೆ ಮಾಡಲು, ತಾವು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ.
ಜೂನ್ 5ರಂದು ವಿಶ್ವ ಪರಿಸರ ದಿನವಾದ್ದರಿಂದ ಅಭ್ಯರ್ಥಿಗಳು, ಚುನಾವಣೆಯ ತಮ್ಮ ಗೆಲುವನ್ನು, ಅವರ ಕ್ಷೇತ್ರದಲ್ಲಿ ಯೋಗ್ಯ ಮರವಾಗಬಲ್ಲ 5 ಸಸಿಗಳನ್ನು ನೆಟ್ಟು ಪೋಷಿಸುವುದರ ಮೂಲಕ ತಮ್ಮ ಸಂಭ್ರಮ ಹಂಚಿಕೊಳ್ಳಲಿ ಹಾಗೂ ಪರಿಸರ ಸಂರಕ್ಷಣೆಗೆ ಕೂಡ ನಾಂದಿ ಹಾಡಬಹುದು ಎಂದು ಸಂಘಟನೆ ಸಲಹೆ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು