2:04 PM Tuesday30 - December 2025
ಬ್ರೇಕಿಂಗ್ ನ್ಯೂಸ್
ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಇತ್ತೀಚಿನ ಸುದ್ದಿ

ಪರಿಸರ ರಕ್ಷಣೆಗೆ ಕೆರೆ, ಪಾರ್ಕ್ ಅಭಿವೃದ್ಧಿಗೆ ಹಚ್ಚಿನ ಆದ್ಯತೆ: ಶಾಸಕ ಡಾ.ಭರತ್ ಶೆಟ್ಟಿ

26/12/2022, 17:39

ಸುರತ್ಕಲ್(reporterkarnataka.com): ಕೆರೆ, ಪಾರ್ಕ್ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿ ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ಕಾರ್ಯ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದರು.

ಅವರು ಮನಪಾ ವಾರ್ಡ್ ನಂ..7ರಲ್ಲಿ 54 ಲಕ್ಷ ರೂ.ವೆಚ್ಚದಲ್ಲಿ 7 ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕಾವೂರು ಕೆರೆ ಅಭಿವೃದ್ಧಿಯಾಗುತ್ತಿದೆ. ಬಗ್ಗುಂಡಿ ಕೆರೆಯನ್ನು ಪುನರ್ ನಿರ್ಮಿಸಲು ಬೃಹತ್ ಕಂಪನಿಗಳಿಂದ ನೆರವು ಕೋರಲಾಗಿದೆ. ಕೆರೆಯ ವಿಸ್ತೀರ್ಣ ಗುರುತಿಸಲು ಡೋನ್ ಸರ್ವೆ ಮಾಡಲಾಗುತ್ತಿದೆ. ಇಲ್ಲಿಗೆ ಹರಿದು ಬರುವ ಮಾಲಿನ್ಯ ನೀರನ್ನು ತಡೆಯಲು ಸೂಕ್ತ ಪರಿಹಾರೋಪಾಯ ಮತ್ತು ಕುಡುಂಬೂರು ಸುತ್ತಮುತ್ತಲಿನ ಕಾಲುವೆಗಳ ಮಾಲಿನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಮೇಯರ್‌ ಜಯಾನಂದ ಅಂಚನ್, ಸ್ಥಳೀಯ ಕಾರ್ಪೊರೇಟರ್ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷೆ ನಯನಾ ಕೋಟ್ಯಾನ್,ಮನಪಾ ಸದಸ್ಯ ವರುಣ್ ಚೌಟ, ಬಿಜೆಪಿ ಮಂಡಲ ಉಪಾಧ್ಯಕ್ಷ ವಿಠಲ್ ಸಾಲ್ಯಾನ್‌, ಮಹಾ ಶಕ್ತಿಕೇಂದ್ರ ಕಾರ್ಯದರ್ಶಿ ಸುನಿಲ್ ಕುಳಾಯಿ, ಯುವಮೋರ್ಚಾ ಮಂಡಲ ಅಧ್ಯಕ್ಷ ಭರತ್‌ ರಾಜ್ ಕೃಷ್ಣಾಪುರ, ಶಕ್ತಿಕೇಂದ್ರ ಪ್ರಮುಖ್ ಸತೀಶ್ ದೇವಾಡಿಗ, ಮನೀಶ್, ಸಹ ಪ್ರಮುಖ್ ಸುರೇಶ್ ಸಾಲ್ಯಾನ್, ಬಿಜೆಪಿ ಪ್ರಮುಖರಾದ ಜಯಂತ್‌ ಸಾಲ್ಯಾನ್, ಜಯಂತ್ ಕರ್ಕೇರ ಆನಂದ ಭಂಡಾರಿ, ಬಾಲಕೃಷ್ಣ ಕೆಂಚನೂರ್, ಸ್ಥಳೀಯರಾದ ದೇವದಾಸ್, ಮಾಧವ, ಗೋಪಿನಾಥ್, ಶ್ರೀನಿವಾಸ್‌, ಲೋಕೋಪಯೋಗಿ ಇಲಾಖೆ
ಗುತ್ತಿಗೆದಾರರಾದ ಡೆನ್ನಿಸ್ ಲೋಬೋ ಮತ್ತಿತರರು ಉಪ ತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು