4:01 PM Monday22 - September 2025
ಬ್ರೇಕಿಂಗ್ ನ್ಯೂಸ್
ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ…

ಇತ್ತೀಚಿನ ಸುದ್ದಿ

ಪಂಜಿಮೊಗರು ಸರಕಾರಿ ಶಾಲೆ ಆವರಣ ಗೋಡೆಗೆ ತಡೆ: ಎಸ್ಡಿಎಂಸಿ ಅಧ್ಯಕ್ಷ, ಮಾಜಿ ಕಾರ್ಪೊರೇಟರ್ ವಿರುದ್ಧ ಸಾರ್ವಜನಿಕರ ಆಕ್ರೋಶ

19/03/2024, 21:07

ಮಂಗಳೂರು(reporterkarnataka.com):ನಗರದ ಕಾವೂರು ಬಳಿಯ ಪಂಜಿಮೊಗರು ಸರ್ಕಾರಿ ಶಾಲೆ ಆವರಣ ಗೋಡೆ ರಚನೆಗೆ ಅಡ್ಡಿ ಮಾಡಿದ ಎಸ್ಡಿಎಂಸಿ ಅಧ್ಯಕ್ಷರೂ ಆಗಿರುವ ಮಾಜಿ ಕಾರ್ಪೊರೇಟರ್ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಿಮೊಗರು ದ.ಕ.ಜಿಪಂ ಶಾಲೆಯ ಆವರಣ ಗೋಡೆ ತೀರ ಶಿಥಿಲಾವಸ್ತೆಗೊಂಡಿದ್ದು, ಇದಕ್ಕೆ ಪಿಡಬ್ಲ್ಯು ಡಿ ಅನುದಾನ ಮಂಜೂರಾಗಿದೆ. ಈ ಮೂಲಕ ಸ್ಥಳೀಯ ಮನಪಾ ಸದಸ್ಯರು ಸಾರ್ವಜನಿಕರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಬೇಡಿಕೆಯ ಪ್ರಕಾರ ಶಾಲಾ ಆವರಣ‌ ಗೋಡೆಯ ಮುಂಭಾಗದಲ್ಲಿ ಬಹಳಷ್ಟು ಜಾಗವಿದ್ದು, ಕೆಳಭಾಗದಿಂದ, ಮೇಲೆ ಬರುವ ಸಂದರ್ಭ ಆವರಣ ಗೋಡೆ ಸ್ವಲ್ಪ ತಿರುವು ಆಕಾರದಲ್ಲಿದ್ದು ಇದನ್ನು ಸ್ವಲ್ಪ ಮಟ್ಟಿಗೆ ನೇರವಾಗಿ ನಿರ್ಮಿಸಿ, ಸ್ಥಳೀಯರಿಗೆ ಮೇಲ್ಗಡೆಯಿಂದ ಕೆಳಗೆ ಹಾಗೂ ಕೆಳಗಡೆಯಿಂದ ಮೇಲೆಗೆ ಹೋಗುವ ರಸ್ತೆಯು ತಿರುವಿದ್ದು ಗೋಚರಿಸದ ಕಾರಣ ಈ ನಿಟ್ಟಿನಲ್ಲಿ, ಸ್ಥಳೀಯರಿಗೆ ವಾಹನ ಸಂಚಾರದ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ, ಸ್ಥಳೀಯರ ಬೇಡಿಕೆಯ ಪ್ರಕಾರ ಮನಪಾ ಸದಸ್ಯರು ಶಿಥಿಲ ಗೊಂಡ ತಡೆಗೋಡೆಯನ್ನು ಮರು ನಿರ್ಮಾಣಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಇದೇ ಸರ್ಕಾರಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಸ್ಥಳೀಯ ಮಾಜಿ ಮನಪಾ‌ ಸದಸ್ಯರು, ರಾಜಕೀಯ ಪಿತೂರಿ ಎಸಗಿ, ಸಾರ್ವಜನಿಕ ಹಿತ ದೃಷ್ಟಿಯಿಂದ ಅಗಲೀಕರಣ ಮಾಡುವುದನ್ನ ವಿರೋಧಿಸಿ, ತಡೆಯೊಡ್ಡಿ, ತಡೆಗೋಡೆಯನ್ನು ಮಾಡದ ರೀತಿಯಲ್ಲಿ ರಾಜಕೀಯ ಪಿತೂರಿಯನ್ನು ಮಾಡಿರುತ್ತಾರೆ, ಸಾರ್ವಜನಿಕ ಹಿತದೃಷ್ಟಿಯಿಂದ ಸ್ವಲ್ಪಮಟ್ಟಿಗೆ ಆ ರಸ್ತೆಯನ್ನು ಅಗಲೀಕರಣ ಮಾಡಿ ಸಾರ್ವಜನಿಕ ಉಪಯೋಗ ಹಾಗೂ ಆ ರೀತಿಯಲ್ಲಿ ಕೆಲಸ ಆಗಬೇಕು ಎಂದು ಇಲ್ಲಿಯ ಈ ಭಾಗದ ಸಾರ್ವಜನಿಕರು , ಸಂಘ ಸಂಸ್ಥೆಗಳು ಕಾರ್ಪೊರೇಟರ್ ಹಾಗೂ ಶಾಸಕರಲ್ಲಿ ಮನವಿಯನ್ನು ಕೂಡ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷರು ಮಾಜಿ ಕಾರ್ಪೊರೇಟರ್ ವಿರುದ್ಧ ಸ್ಥಳೀಯರು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ತೀರ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪಂಜಿಮೊಗರು ಕಾರ್ಪೋರೇಟರ್ ಅನಿಲ್ ಕುಮಾರ್ ಅವರು ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿ,
ಸಾರ್ವಜನಿಕರ ಹಿತದೃಷ್ಟಿಯಿಂದ ತಡೆಗೋಡೆ ಕಟ್ಟಲು ಮುಂದಾಗಿದ್ದೆ. ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ವಿರೋಧ ವ್ಯಕ್ತ ವಾಗಿದ್ದರಿಂದ ತಡೆಗೋಡೆ ನಿಲ್ಲಿಸಿದ್ದೇನೆ. ಯಾರ ಮನಸ್ಸು ನೋಯಿಲು ಇಷ್ಟ ಇಲ್ಲ. ನಾನು ಕೂಡ ಶಾಲಾಭಿವೃದ್ದಿ ಮಂಡಳಿ ಸದಸ್ಯ, ತಡೆಗೋಡೆಯನ್ನು 2 ಸೆಂಟ್ಸ್ ನಷ್ಟು ಶಾಲೆಯ ಒಳ ಭಾಗದಿಂದ ಕಟ್ಟಬೇಕಾಗುತ್ತೆ. ಕೆಳಗಿನಿಂದ ಬರೋ ವಾಹನ ಕಾಣುವುದಿಲ್ಲ. ಅಪಘಾತ ತಡೆಯಲು ಸಾರ್ವಜನಿಕರ ಅಹವಾಲಿನ ಮೇರೆಗೆ ಮುಂದಾಗಿದ್ದೆ. ಆದರೆ ಎಸ್ ಡಿಎಂಸಿ ಅಧ್ಯಕ್ಷರು ಶಾಲೆಯ ಒಳ ಭಾಗಕ್ಕೆ ತಡೆಗೋಡೆ ಆಗೋದಾದರೆ, ರಸ್ತೆ ಉದ್ದಕ್ಕೂ ಅಗಲೀಕರಣ ಆಗಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ರಸ್ತೆ ಉದ್ದಕ್ಕೂ ಅಗಲೀಕರಣ ಮಾಡಿಬೇಕಾದರೆ 2 ಸೆಂಟ್ಸ್ ನಷ್ಟು ಜಾಗಗಳಲ್ಲಿ ಬರುವ ಮನೆಗಳನ್ನು ಕೆಡಹಿದರೆ ಅವರು ಬದುಕುವುದು ಹೇಗೆ?. ಅದಕ್ಕೆ ಸುಮ್ಮನಾದೆ ಎಂದರು.
ಆದರೆ ಸಾರ್ವಜನಿಕರ ಒತ್ತಡ ಮೇರೆಗೆ ಈ ವಿಷಯವನ್ನು ಜಿಪಂ ಸಿಇಒ ಅವರ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ ಎಂದು ಅನಿಲ್ ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು