9:53 PM Monday17 - March 2025
ಬ್ರೇಕಿಂಗ್ ನ್ಯೂಸ್
Legislative Council | ನಕಲಿ ಔಷಧಿ ನಿಯಂತ್ರಣಕ್ಕೆ ಅಗತ್ಯ ಕ್ರಮ: ಆರೋಗ್ಯ ಸಚಿವ… KSRTC | ಬಿಜೆಪಿ ಸರಕಾರ ಶೇ 47ರಷ್ಟು ಬಸ್ ದರ ಏರಿಕೆ ಮಾಡಿತ್ತು,… Education Department | ಕನ್ನಡ ಬೋಧಿಸದ ಕೇಂದ್ರ ಪಠ್ಯಕ್ರಮ ವಿರುದ್ಧ ಕ್ರಮಕ್ಕೆ ಮುಂದಾಗಿ:… ಬಿಜೆಪಿ ತರಹ ಕೇವಲ 10% ಜನರ ಕೈಹಿಡಿದು ಶೇ. 90% ಜನರನ್ನು ಕೈಬಿಟ್ಟಿಲ್ಲ:… ಕೇಂದ್ರ ಸರಕಾರ ಕೊಟ್ಟಿರುವುದು ಸಾಲ, ನಮ್ಮ ಪಾಲಿನ ಅನುದಾನವಲ್ಲ: ಸದನದಲ್ಲಿ ಸಿಎಂ ಸಿದ್ದರಾಮಯ್ಯ… ಲೋಕಸಭೆ ಚುನಾವಣೆ ನಂತ್ರ ಗ್ಯಾರಂಟಿ ಯೋಜನೆ ನಿಂತೋಗುತ್ತೆ ಎಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ:… Ex CM | ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನು ಸಮೀಕ್ಷೆ ಮಾಡಿ:… ಮಳವಳ್ಳಿಯಲ್ಲಿ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿ ಸಾವು: ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ… ಬಂಟ್ವಾಳದಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶ ಶಂಖನಾದದೊಂದಿಗೆ ಆರಂಭ ನಿಡುವಾಳೆ ರಾಮೇಶ್ವರ ದೇವಾಲಯಕ್ಕೆ ನಟ ರಮೇಶ್ ಅರವಿಂದ್ ಕುಟುಂಬ ಸಮೇತ ಭೇಟಿ: ವಿಶೇಷ…

ಇತ್ತೀಚಿನ ಸುದ್ದಿ

ಪಂಡರಾಪುರದಲ್ಲಿ ಕಾಶೀ ಶ್ರೀಗಳಿಂದ ಶಾಖಾ ಮಠಕ್ಕೆ ಶಿಲಾನ್ಯಾಸ: ಚಂದ್ರಭಾಗ ನದಿ ತೀರದಲ್ಲಿ ನಿಧಿಕಲಶ ಸ್ಥಾಪನೆ

10/03/2023, 19:09

ಮಂಗಳೂರು(reporterkarnataka.com): ದೇವರ ಅನುಗ್ರಹ, ಗುರು ಪರಂಪರೆಯ ಆಶೀರ್ವಾದದಿಂದ ಭಕ್ತಜನರ ಎರಡು ದಶಕಗಳ ಆಶಯ ಈಡೇರಿದೆ ಎಂದು ಕಾಶೀ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀಗಳು ಮಹಾರಾಷ್ಟ್ರದ ಪಂಡರಾಪುರದಲ್ಲಿ ಕಾಶೀಮಠದ ನೂತನ ಶಾಖಾ ಮಠಕ್ಕೆ ನಿಧಿಕಲಶ ಸ್ಥಾಪನೆ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಶಿಲಾನ್ಯಾಸದ ಬಳಿಕ ಆಶೀರ್ವಚನ ನೀಡಿದರು.
ಪ್ರಸಿದ್ಧ ಪುಣ್ಯಕ್ಷೇತ್ರ ಪಂಡರಾಪುರದಲ್ಲಿ ಶಾಖಾ ಮಠವನ್ನು ಸ್ಥಾಪಿಸಬೇಕೆನ್ನುವ ಆಶಯ ಭಕ್ತವರ್ಗ ಮಾಡುತ್ತಾ ಬಂದಿದೆ. ಚಂದ್ರಭಾಗ ನದಿ ತೀರದಲ್ಲಿಯೇ ಮಠ ನಿರ್ಮಾಣವಾಗುತ್ತಿದೆ. ಭಜನಾ ಪ್ರಿಯ ವಿಠಲ ದೇವರ ಕ್ಷೇತ್ರ ಮತ್ತು ಭಗವಂತ ಕೃಷ್ಣ ಪಾದುಕೆ ಇರುವ ವಿಷ್ಣುಪಾದದ ಬಳಿ ಮಠ ಸ್ಥಾಪನೆಯಾಗುತ್ತಿರುವುದು ಸುಯೋಗ. ಕಾಶಿಮಠದ ಹಿರಿಯ ಯತಿವರ್ಯರಾದ ಕೇಶವೇಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿಯಂದು ನೂತನ ಮಠದ ಸ್ಥಾಪನೆಗೆ ಕಾಲ ಕೂಡಿ ಬಂದಿರುವುದು ದೇವರ, ಗುರುಗಳ ಅನುಗ್ರಹ ಎಂದು ಹೇಳಿದರು.
ಪುಣ್ಯ ಕ್ಷೇತ್ರದಲ್ಲಿ ಶಾಖಾ ಮಠ ನಿರ್ಮಾಣವಾಗುವುದರಿಂದ ಭಕ್ತರ ಭೇಟಿಗೆ, ವಾಸ್ತವ್ಯಕ್ಕೆ ಅನುಕೂಲವಾಗುತ್ತದೆ. ಹರಿದ್ವಾರ, ತಿರುಪತಿಯಲ್ಲಿಯೂ ಶಾಖಾಮಠದ ಸ್ಥಾಪನೆಯಲ್ಲಿಯೂ ತಮ್ಮ ಗುರುಗಳಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಚಿಂತನೆ ಇತ್ತು. ಅವರ ಆರ್ಶೀವಾದದಿಂದ ಈಗ ಪಂಡರಾಪುರದಲ್ಲಿಯೂ ಶಾಖಾ ಮಠ ನಿರ್ಮಾಣವಾಗಲಿದೆ ಎಂದು ಹೇಳಿದರು.
ವೇದಮಂತ್ರ ಘೋಷಗಳೊಂದಿಗೆ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ನೂತನ ಶಾಖಾ ಮಠಕ್ಕಾಗಿ ಯೋಗ್ಯ ಸ್ಥಳವನ್ನು ಆಯ್ಕೆ ಮಾಡುವಾಗ ಎದುರಾದ ಸವಾಲುಗಳು ಮತ್ತು ದೇವರ, ಗುರುಗಳ ಆರ್ಶೀವಾದದಿಂದ ಎಲ್ಲಾ ಕಾರ್ಯ ಸುಲಲಿತವಾಗಿ ನಡೆದದ್ದನ್ನು ದೀಪಕ್ ಭಾಸ್ಕರ್ ಶೆಣೈ ಮುಂಬೈ ವಿವರಿಸಿದರು.


ಸಿಎ ಜಗನ್ನಾಥ ಕಾಮತ್ ಸ್ವಾಗತಿಸಿದರು. ವೇದಮೂರ್ತಿ ಯೋಗೀಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಘುವೀರ್ ಭಂಡಾರಕಾರ್, ಅಜಿತ್ ಕಾಮತ್, ಜಯಂತ್ ಪ್ರಭು, ದಿನೇಶ್ ಕಾಮತ್ ಕೋಟೇಶ್ವರ್, ರಾಜೇಶ್ ಪ್ರಭು ಎರ್ನಾಕುಲಂ, ರಮೇಶ್ ಭಂಡಾರಕಾರ್, ನಿತಿನ್ ಪ್ರಭು, ಗುರುಪ್ರಸಾದ ಕಾಮತ್ ಕಾನೆಗಾಡ್, ಗಣೇಶ್ ಹೆಗ್ಡೆ ಪಂಡರಾಪುರ, ಪ್ರವೀಣ್ ಪೈ ಪಂಡರಾಪುರ, ಚೇತನ್ ಕಾಮತ್, ನರೇಶ್ ಪ್ರಭು ಹಾಗೂ ಮಹಾರಾಷ್ಟ್ರ, ಕರ್ನಾಟಕ, ಕೇರಳ ಸಹಿತ ದೇಶದ ವಿವಿಧೆಡೆಯ ಭಕ್ತರು ಆಗಮಿಸಿದ್ದರು. ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನ ಕಾರ್ಯಕ್ರಮ ಆಯೋಜಿಸಿತ್ತು. ಯೂತ್ ಆಫ್ ಜಿಎಸ್ ಬಿ ವಾಹಿನಿಯ ಮೂಲಕ ಕಾರ್ಯಕ್ರಮವನ್ನು ದೇಶ, ವಿದೇಶದ ಭಕ್ತರು ವೀಕ್ಷಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು