ಇತ್ತೀಚಿನ ಸುದ್ದಿ
ಪಂಚ ರಾಜ್ಯ ಚುನಾವಣೆ: ಕಾಂಗ್ರೆಸ್ ಗೆ ಮತ್ತೆ ಹೀನಾಯ ಸೋಲು: 3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ; ಗೋವಾ ಅತಂತ್ರ
10/03/2022, 11:40
ಹೊಸದಿಲ್ಲಿ(reporterkarnataka.com): ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಐದು ರಾಜ್ಯಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಂಡಿದ್ದು, ಈ ಬಾರಿಯೂ ಕಾಂಗ್ರೆಸ್ ಗೋವಾ ಹೊರತುಪಡಿಸಿ ಇತರ ಕಡೆಗಳಲ್ಲಿ pಹೀನಾಯ ಸೋಲು ಅನುಭವಿಸಿದೆ.
ಉತ್ತರ ಪ್ರದೇಶ, ಉತ್ತರಾಖಂಡ್ ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಮಣಿಪುರದಲ್ಲಿ ಸರಳ ಬಹುಮತ ಪಡೆದಿದೆ. ಗೋವಾದಲ್ಲಿ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದರೂ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಗೋವಾದ 40 ಸ್ಥಾನಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 16, ಎಎಪಿ 2 ಮತ್ತು ಇತರರು 3 ಸ್ಥಾನಗಳನ್ನು ಪಡೆದಿದ್ದಾರೆ. ಇಲ್ಲಿ ಸರಕಾರ ರಚನೆ ಇತರರನ್ನು ಅವಲಂಬಿಸಿದೆ.
ಉತ್ತರಾಖಂಡ್ ನ 70 ಸ್ಥಾನಗಳ ಪೈಕಿ ಬಿಜೆಪಿ 44 ಸ್ಥಾನಗಳನ್ನು ಬಾಚಿಕೊಂಡಿದೆ. ಕಾಂಗ್ರೆಸ್ 21 ಹಾಗೂ ಇತರರು 5 ಸ್ಥಾನಗಳನ್ನು ಪಡೆದಿದ್ದಾರೆ. ಪಂಜಾಬ್ ನಲ್ಲಿ 117 ಸ್ಥಾನಗಳ ಪೈಕಿ ಆಮ್ ಆದ್ಮಿ ಪಾರ್ಟಿ 85 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ದಾಖಲಿಸಿದೆ. ಕಾಂಗ್ರೆಸ್ 16, ಬಿಜೆಪಿ 6 ಮತ್ತು ಎಸ್ ಎಡಿ 9 ಸ್ಥಾನಗಳನ್ನು ಪಡೆದಿದೆ. ಮಣಿಪುರದ 60 ಸ್ಥಾನಗಳ ಪೈಕಿ 44 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 21, ಎನ್ ಪಿಪಿಇ 8, ಎನ್ ಪಿಎಫ್ 4ಮತ್ತು ಇತರರು 6 ಸ್ಥಾನಗಳನ್ನು ಪಡೆದಿದ್ದಾರೆ.