ಇತ್ತೀಚಿನ ಸುದ್ದಿ
ಪಣಂಬೂರು ವಿಷ್ಣುಮೂರ್ತಿ ದೇವಸ್ಥಾನ ಕೆರೆ ಅಭಿವೃದ್ಧಿಗೆ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ
10/03/2023, 19:50

ಸುರತ್ಕಲ್ (reporterkarnataka.com): ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಪಣಂಬೂರು 11ನೇ ವಾರ್ಡಿನ ಪಣಂಬೂರು ನಂದನೇಶ್ವರ ಬಳಿ ವಿಷ್ಣುಮೂರ್ತಿ ದೇವಸ್ಥಾನದ ಪಣಂಬೂರು ಕೆರೆ ಅಭಿವೃದ್ಧಿಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೊರೇಟರ್ ಸುನೀತಾ ಸಾಲಿಯಾನ್, ನಾಮನಿರ್ದೇಶಿತ ಕಾರ್ಪೊರೇಟರ್ ರಾಜೇಶ್ ಸಾಲಿಯಾನ್, ಹಿಂದುಳಿದ ವರ್ಗಗಳ ಉತ್ತರ ಮಂಡಲ ಉಪಾಧ್ಯಕ್ಷರಾದ
ಅರವಿಂದ್ ಬೆಂಗ್ರೆ, ಸಹಪ್ರಮುಖ್ ಸತೀಶ್ ಕರ್ಕೇರ, ಬೂತ್ ಕಾರ್ಯದರ್ಶಿ ನಿತಿನ್ ಮೆಂಡನ್, ಒಬಿಸಿ ಉತ್ತರ ಮಂಡಲದ ಸದಸ್ಯೆ ಸುಮತಿ ಬೈಕಂಪಾಡಿ, ಬಿಜೆಪಿ ಉತ್ತರ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಪ್ರಮೀಳಾ ಕೋಟ್ಯಾನ್, ಧನಂಜಯ ಸಾಲಿಯಾನ್, ಸುಶಾಂತ್ ಸುವರ್ಣ ಗಣಪತಿ ಭಟ್, ಅನಂತ ಐತಾಳ್, ರಾಘವೇಂದ್ರ, ಸಂತೋಷ್ ಗುರ್ಕಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.