ಇತ್ತೀಚಿನ ಸುದ್ದಿ
ಪಣಂಬೂರು ಬೀಚ್ ನಲ್ಲಿ 3 ಮಂದಿ ಯುವಕರು ನೀರು ಪಾಲು: ಜೀವ ರಕ್ಷಕ ತಂಡದಿಂದ ಶೋಧ ಕಾರ್ಯಾಚರಣೆ
04/03/2024, 13:23
ಮಂಗಳೂರು(reporterkarnataka.com): ಪಣಂಬೂರು ಬೀಚ್ ನಲ್ಲಿ ಮೂವರು ಯುವಕರು ನೀರುಪಾಲಾದ ದಾರುಣ ಘಟನೆ ಭಾನುವಾರ ನಡೆದಿದೆ.
ನೀರು ಪಾಲಾದವರನ್ನು ಲಿಖಿತ್(18), ಮಿಲನ್(20) ಹಾಗೂ ನಾಗರಾಜ್(24) ಎಂದು ಗುರುತಿಸಲಾಗಿದೆ. ಜೀವ ರಕ್ಷಕ ದಳ ಸಿಬ್ಬಂದಿಗಳು ಹಾಗೂ ಸ್ಥಳೀಯರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಲಿಖಿತ್ ಕೈಕಂಬದ ಖಾಸಗಿ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಮಿಲನ್ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ನಾಗರಾಜ್ ಬೈಕಂಪಾಡಿಯ ಫ್ಯಾಕ್ಟರಿ ಯೊಂದರಲ್ಲಿ ಕೆಲಸಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.