ಇತ್ತೀಚಿನ ಸುದ್ದಿ
ಪಳ್ಳಿಕೆರೆ ಬಳಿ ಮಂಗಳೂರಿಗೆ ತೆರಳುತ್ತಿದ್ದ ರೈಲಿನಿಂದ ಬಿದ್ದು ಯುವತಿ ಸಾವು: ರೈಲ್ವೆ ಟ್ರ್ಯಾಕ್ ನಲ್ಲಿ ಮೃತದೇಹ ಪತ್ತೆ
08/01/2024, 17:42

ಕಾಸರಗೋಡು(reporterkarnataka.com): ಪಳ್ಳಿಕೆರೆ ಸಮೀಪದ ಮಾಸ್ತಿಗುಡ್ಡೆ ಬಳಿ ರೈಲಿನಿಂದ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಗಳೂರಿಗೆ ತೆರಳುತ್ತಿದ್ದ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಿಂದ ರಾತ್ರಿ ವೇಳೆ ಈಕೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಮೃತ ಯುವತಿಯನ್ನು ಐಶ್ವರ್ಯ ಜೋಸೆಫ್(30) ಎಂದು ಗುರುತಿಸಲಾಗಿದೆ. ಪಳ್ಳಿಕೆರೆ ಸಮೀಪದ ಮಾಸ್ತಿಗುಡ್ಡೆಯ ಬಳಿಯ ರೈಲ್ವೆ ಟ್ರ್ಯಾಕ್ ನಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಬಳಿ ದೊರೆತ ಪರ್ಸ್ ನಲ್ಲಿ ಗುರುತು ಚೀಟಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ಗುರುತಿಸಲಾಗಿದೆ. ಕಲ್ಲಿಕೋಟೆಯಲ್ಲಿ ಖಾಸಗಿ ಸಂಸ್ಥೆ ಯೊಂದರಲ್ಲಿ ಐಶ್ವರ್ಯ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಕಾಸರಗೋಡು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹವನ್ನು ಇರಿಸಲಾಗಿದೆ.