ಇತ್ತೀಚಿನ ಸುದ್ದಿ
ಪಾಲಿಕೆಯ ಇಂಟರ್‍ಪೇಸ್ ತಂತ್ರಾಂಶಕ್ಕೆ ಶಾಸಕ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಚಾಲನೆ
07/09/2022, 23:11

ಮಂಗಳೂರು(reporterkarnataka.com):ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತೆ ನಿರ್ವಹಣೆಯನ್ನು ಜನಸ್ನೇಹಿಯನ್ನಾಗಿಸಲು ಹೊಸದಾಗಿ ಸಿದ್ಧಪಡಿಸಲಾಗಿರುವ ಮೊಬೈಲ್ ಆಪ್ ಮತ್ತು ಆನ್‍ಲೈನ್ ತಂತ್ರಾಂಶವನ್ನು ನಾಗರಿಕರ ಉಪಯೋಗಕ್ಕಾಗಿ ಹಾಗೂ ಪಾಲಿಕೆಯಲ್ಲಿ ಈಗಾಗಲೇ ಬಳಕೆಯಲ್ಲಿರುವ ಕಾಗದ ರಹಿತ ಕಚೇರಿ (ಪೇಪರ್ ಲೆಸ್ ಆಫೀಸ್) ವ್ಯವಸ್ಥೆಯ ನಾಗರೀಕರ ಇಂಟರ್‍ಪೇಸ್ ತಂತ್ರಾಂಶಕ್ಕೆ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಜಂಟಿಯಾಗಿ ಚಾಲನೆ ನೀಡಿದರು.
ಉಪಮೇಯರ್ ಸುಮಂಗಳಾ ರಾವ್, ಆಯುಕ್ತರಾದ ಅಕ್ಷಯ್ ಶ್ರೀಧರ್ ಹಾಗೂ ಕಾರ್ಪೋರೇಟರ್ ಗಳು ಉಪಸ್ಥಿತರಿದ್ದರು.