ಇತ್ತೀಚಿನ ಸುದ್ದಿ
ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ನಿವೃತ್ತರಾದ ಅಬ್ದುಲ್ ಖಾದರ್ ಅವರಿಗೆ ಬೀಳ್ಕೊಡುಗೆ
04/10/2023, 17:42

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಲಯ ಕಚೇರಿ ವತಿಯಿಂದ ಸಹಾಯಕ ಕಾರ್ಯ ಪಾಲಕ ಅಭಿಯಂತರರಾಗಿ ನಿವೃತ್ತಿ ಹೊಂದಿದ ಅಬ್ದುಲ್ ಖಾದರ್ ಡಿ. ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಸುರತ್ಕಲ್ ಲಯನ್ ಸೇವಾ ಮಂದಿರದಲ್ಲಿ ಏರ್ಪಡಿಸಲಾಯಿತು.
ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಲ್ಲಿ ತನ್ನ ಸೇವೆಯನ್ನು ಆರಂಭಿಸಿದ ಖಾದರ್ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ 21 ವರ್ಷ ಕರ್ತವ್ಯ ನಿರ್ವಹಿಸಿದ್ದರು.
ಒಟ್ಟು 33 ವರ್ಷಗಳ ಕಾಲ ಸುಧೀರ್ಘವಾಗಿ ಸೇವೆ ಸಲ್ಲಿಸಿದ ಸೆ. 30ರಂದು ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶ ಆನಂದ್ ಎಲ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರರು ( ಅಭಿವೃದ್ಧಿ ) ಮಹೇಶ್, ಕಾರ್ಯಪಾಲಕ ಅಭಿಯಂತರರಾದ ನರೇಶ್ ಶೆಣೈ, ಗುತ್ತಿಗೆದಾರರಾದ ಎಂ. ಜಿ. ಹುಸೇನ್ ಉಪಸ್ಥಿತರಿದ್ದರು. ಮಹಾನಗರ ಪಾಲಿಕೆಯ ಆಯುಕ್ತರು ಬೀಳ್ಕೊಡುಗೆ ಸಮಾರಂಭ ನಡೆಸಿಕೊಟ್ಟರು. ಕಾರ್ಯಪಾಲಕ ಅಭಿಯಂತರರಾದ ನರೇಶ್ ಅವರು ನೀರಿನ ಸಮಸ್ಯೆ ಹಾಗೂ ಪಚ್ಚನಾಡಿ ಬೆಂಕಿ ಅನಾಹುತದಲ್ಲಿ ಖಾದರ್ ಅವರ ಮುತುವರ್ಜಿ ವಹಿಸಿ ಎಲ್ಲವನ್ನು ಸುಸೂತ್ರವಾಗಿ ನಡೆಸಿಕೊಟ್ಟಿದ್ದನ್ನು ಸ್ಮರಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಖಾದರ್ ಅವರು ತನ್ನ ಸೇವಾ ಅವಧಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು.
ಕಾರ್ಯಕ್ರಮವನ್ನು ಯಾದವ ಹೊಸಬೆಟ್ಟು ನಿರೂಪಿಸಿ ವಂದಿಸಿದರು.