ಇತ್ತೀಚಿನ ಸುದ್ದಿ
ಪಾಲ್ದಾನೆ ಸೈಂಟ್ ತೆರೆಸಾ ಚರ್ಚ್: ಮಾರ್ಚ್ 5, 6 ಮತ್ತು 7ರಂದು ಮೂರು ದಿನಗಳ ಧ್ಯಾನಕೂಟ
03/03/2024, 19:50
ಮಂಗಳೂರು(reporterkarnataka.com): ನಗರದ ಪಾಲ್ದಾನೆ ಸೈಂಟ್ ತೆರೆಸಾ ಚರ್ಚ್ ನಲ್ಲಿ ಮೂರು ದಿನಗಳ ಧ್ಯಾನಕೂಟ ಮಾರ್ಚ್ 5, 6 ಮತ್ತು 7ರಂದು ನಡೆಯಲಿದೆ.
ಲೆಂಟ್ ಕಾಲದಲ್ಲಿ ನಡೆಯುವ ಈ ಧ್ಯಾನಕೂಟದಲ್ಲಿ ಖ್ಯಾತ ಪ್ರಸಂಗದಾರರಾದ ವಂ. ಫಾ. ರೋಮನ್ ಪಿಂಟೋ ಅವರು ಈ ರಿಟ್ರೀಟ್ ಅನ್ನು ನಡೆಸಲಿದ್ದಾರೆ. ಧ್ಯಾನಕೂಟವು ಸಂಜೆ 5.30 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ನಡೆಯಲಿದೆ. ಪ್ರವಚನ, ಬಲಿಪೂಜೆ, ಪವಿತ್ರ ಪ್ರಸಾದ ಆರಾಧನೆ ನಡೆಸಲಾಗುವುದು ಎಂದು ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂ. ಫಾ. ಅಲ್ಬನ್ ಡಿಸೋಜ ತಿಳಿಸಿದ್ದಾರೆ.
ಭಕ್ತವೃಂದದವರು ಈ ಧ್ಯಾನಕೂಟದ ಪ್ರಯೋಜನ ಪಡೆಯಬೇಕೆಂದು ಚರ್ಚ್ ನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ವಿನಂತಿಸಿದ್ದಾರೆ.