ಇತ್ತೀಚಿನ ಸುದ್ದಿ
ಪಕ್ಷ ತೊರೆದವರು ಪ್ರಧಾನಿ ಮೋದಿಗಾಗಿ ಮತ್ತೆ ವಾಪಸ್ ಬನ್ನಿ: ಶೆಟ್ಟರ್, ಸವದಿಗೆ ಕೇಂದ್ರ ಸಚಿವೆ ಕರಂದ್ಲಾಜೆ ಪರೋಕ್ಷ ಆಹ್ವಾನ
19/08/2023, 17:20
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಯಾರೇ ಬಿಜೆಪಿ ಬಿಟ್ಟಿದ್ದರೂ ಪ್ರಧಾನಿ ನರೇಂದ್ರ ಮೋದಿಗಾಗಿ ಅವರಿಗೆ ಪಕ್ಷದಲ್ಲಿ ಮತ್ತೆ ಸ್ವಾಗತವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೆ ಆಹ್ವಾನ ನೀಡಿದ್ದಾರೆ.
ಪಕ್ಷ ಬಿಟ್ಟೋದವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ಮೋದಿಯಂತ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ. ದೇಶದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಇಂಡಿಯ ಹಾಗೂ ಹುಡುಕಿದರೂ ಯಾವ ಪಾರ್ಟಿಯಲ್ಲೂ ಸಿಗಲ್ಲ ಎಂದು ಕರಂದ್ಲಾಜೆ ಅವರು aksಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.
ಯಾರೇ ಪಕ್ಷ ಬಿಟ್ಟಿದ್ದರೂ ಪ್ರಧಾನಿ ಮೋದಿಗಾಗಿ ಅವರು ವಾಪಸ್ ಬರಲು ಸ್ವಾಗತವಿದೆ ಅನ್ನೋದು ನನ್ನ ಪ್ರಾರ್ಥನೆ. ನಮ್ಮ ದೇಶದ ನಾಯಕನನ್ನು ಇಂದು ಪ್ರಪಂಚ ಒಪ್ಪುತ್ತಿದೆ. ಅವರನ್ನ
ಮತ್ತೆ ಪಿಎಂ ಮಾಡಲು ಯಾರೇ ಪಾರ್ಟಿ ಬಿಟ್ಟಿದರೂ ವಾಪಸ್ ಬರಲು ವಿನಂತಿ. ಮೋದಿಗಾಗಿ, ದೇಶಕ್ಕಾಗಿ, ಮುಂದಿನ ಪೀಳಿಗೆಗಾಗಿ ಬರಬೇಕಿದೆ. ವಿಶ್ವದಲ್ಲಿ ಶಾಂತಿ ನೆಲೆಸುವ ಸಲುವಾಗಿ ಬರಬೇಕಿದೆ.
ಎಲ್ಲರೂ ಒಗ್ಗೂಡಿ ಬಿಜೆಪಿ-ದೇಶವನ್ನ ಕಟ್ಟಬೇಕಿದೆ
ಎಂದು ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.