ಇತ್ತೀಚಿನ ಸುದ್ದಿ
ಪಡುಪೆರಾರ ಗ್ರಾಮ ಪಂಚಾಯತ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ
11/01/2023, 21:28

ಮಂಗಳೂರು(reporterkarnataka.com):1.78 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಶಾಸಕ ಡಾ. ವೈ ಭರತ್ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಅಮಿತಾ ಶೆಟ್ಟಿ, ಪಂಚಾಯತ್ ಸದಸ್ಯರಾದ ವಿದ್ಯಾ ಜೋಗಿ, ಯಶವಂತ್ ಪೂಜಾರಿ, ಸೀತಾರಾಮ ಗೌಡ, ವಿನೋದ್, ಮೀನಾಕ್ಷಿ, ಅರುಣ್, ವನಿತಾ, ಗಣೇಶ್ ಮುರ, ಯುವ ಮೋರ್ಚಾ ಪ್ರಮುಖ್ ಯೋಗೀಶ್ ಆಳ್ವ, ಮೂಡುಪೆರಾರ ಶಕ್ತಿ ಕೇಂದ್ರ ಪ್ರಮುಖರಾದ ಗುರುಪ್ರಸಾದ್ ಪಡುಪೆರಾರ, ಶಕ್ತಿ ಕೇಂದ್ರ ಪ್ರಮುಖ್ ಶೇಖರ್, ಸಹ ಪ್ರಮುಖ್ ಹರಿಪ್ರಸಾದ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಕಾಶಿನಾಥ್ ಕಾಮತ್, ಎಡಪದವು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಅನಿಲ್ ಕುಮಾರ್ ಹಾಗೂ ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.