ಇತ್ತೀಚಿನ ಸುದ್ದಿ
ಪಡು ಬೊಂಡಂತಿಲ: ‘ನಮ್ಮ ನಡೆ ಪೊಳಲಿ ಅಮ್ಮನೆಡೆ’ ಕಾರ್ಯಕ್ರಮ ಯಶಸ್ವಿ; ಅಭಿನಂದನಾ ಕಾರ್ಯಕ್ರಮ
28/11/2022, 18:30

ಸುರತ್ಕಲ್ (reporterkarnataka.com):ಕೇಸರಿ ಫ್ರೆಂಡ್ಸ್ ಪಡುಕಾಪೆಟ್ಟು, ಸಂಘ ಹಾಗೂ ಎಲ್ಲಾ ಸಂಸ್ಥೆಗಳ ಕೂಡುವಿಕೆಯಲ್ಲಿ ಭಾನುವಾರ ಪೊಳಲಿ ದೇವಸ್ಥಾನಕ್ಕೆ ನಡೆದ
‘ನಮ್ಮ ನಡೆ ಪೊಳಲಿ ಅಮ್ಮನೆಡೆ” ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಪ್ರಮುಖರಿಗೆ ಭಾನುವಾರ ಪಡು ಬೊಂಡಂತಿಲ ಪಾಂಡುರಂಗ ಭಜನಾ ಮಂದಿರದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಪಾದಯಾತ್ರೆಯಲ್ಲಿ ಭಾಗವಹಿಸಿ ಪೂರ್ಣ ಸಹಕಾರ ನೀಡಿದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರಿಗೆ ಹಾಗೂ ಪಾಂಡುರಂಗ ಭಜನಾ ಮಂದಿರದ ಅರ್ಚಕರಾದ ಪಂಡರಿಷ್ ಅವರು ಮಕ್ಕಳಿಗೆ ಭಜನೆ ಕಲಿಸಿ ಧಾರ್ಮಿಕ ಶಿಕ್ಷಣ ನೀಡಿ ಪಾದಯಾತ್ರೆ ಉದ್ದಕ್ಕೂ ತಮ್ಮ ತಂಡದೊಂದಿಗೆ ಭಜನೆ ಮಾಡಿದ್ದಕ್ಕಾಗಿ ವಿಶೇಷವಾಗಿ ಅಭಿನಂದಿಸಲಾಯಿತು.
ಸಭೆಯಲ್ಲಿ ಲೋಕನಾಥ್ ಕೋರೆಟ್ಟು ಕಾಪೆಟ್ಟು ಪಾಂಡುರಂಗ ಭಜನ ಮಂದಿರದ ಅಧ್ಯಕ್ಷರು, ರಾಮ ಪೂಜಾರಿ ಪೆಲತಕಟ್ಟೆ, ನಾಗೇಶ್ ಕಾಪೆಟ್ಟು ಮಾಜಿ ಅಧ್ಯಕ್ಷರು ಪಾಂಡುರಂಗ ಭಜನ ಮಂದಿರ, ನಾರಾಯಣ ಕುಲಾಲ್ ಗೌರವಾಧ್ಯಕ್ಷರು ಹಾಗೂ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.