ಇತ್ತೀಚಿನ ಸುದ್ದಿ
ಪಡೀಲ್: ಮಂಡ್ಯಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಡಿವೈಡರ್ ಹಾರಿ ಪಲ್ಟಿ; ಚಾಲಕ, ಕ್ಲಿನರ್ ಗಾಯಗಳಿಲ್ಲದೆ ಪಾರು
27/05/2021, 15:35

ವರದಿ:ಅನುಷ್ ಪಂಡಿತ್
ಮಂಗಳೂರು(reporterkarnataka news): ನವ ಮಂಗಳೂರು ಬಂದರಿನಿಂದ ಮಂಡ್ಯ ಜಿಲ್ಲೆಯ ಮದ್ದೂರಿಗೆ uಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯೊಂದು ನಗರದ ಪಡೀಲ್ ಬಳಿ ರಸ್ತೆಯ ಡಿವೈಡರ್ ಹಾರಿ ಮಗುಚಿ ಬಿದ್ದ ಘಟನೆ ಗುರುವಾರ ನಡೆದಿದೆ.
ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಈ ದುರ್ಘಟನೆ ನಡೆದಿದೆ. ಕಲ್ಲಿದ್ದಲು ತುಂಬಿದ ಲಾರಿ ಮಂಗಳೂರು ಬಂದರಿನಿಂದ ಹೊರಟು ಮಂಗಳೂರು ಹೊರವಲಯಕ್ಕೆ ತಲುಪುವ ಮುನ್ನವೇ ಪಲ್ಟಿ ಹೊಡೆದಿದೆ. ವಾಹನದ ಬ್ರೇಕ್ ಫೇಲ್ ಆಗಿರುವುದು ಅಪಘಾತಕ್ಕೆ ಕಾರಣ ತಿಳಿದು ಬಂದಿದೆ. ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲಿನರ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ರಸ್ತೆಯಲ್ಲಿ ಕಲ್ಲಿದ್ದಲು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ರಸ್ತೆಯ ಇನ್ನೊಂದು ಕಡೆಯಿಂದ ಯಾವುದೇ ವಾಹನ ಇಲ್ಲದಿರುವುದರಿಂದ ದೊಡ್ಡ ಅನಾಹುತ ನಡೆಯುವುದು ತಪ್ಪಿದೆ. ಮಂಗಳೂರು ಕಂಕನಾಡಿ ಟ್ರಾಫಿಕ್ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.