3:15 PM Tuesday8 - July 2025
ಬ್ರೇಕಿಂಗ್ ನ್ಯೂಸ್
ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ…

ಇತ್ತೀಚಿನ ಸುದ್ದಿ

ಪಚ್ಚನಾಡಿ ಸಂತೋಷ್ ನಗರ; 1.79 ಎಕರೆ ಜಾಗದಲ್ಲಿ ಸುಸಜ್ಜಿತ ಆಟದ ಮೈದಾನ: ಶಾಸಕ ಡಾ. ಭರತ್ ಶೆಟ್ಟಿ

31/01/2023, 11:45

ಮಂಗಳೂರು(reporterkarnataka.com):35 ಲಕ್ಷ ರೂ ವೆಚ್ಚದಲ್ಲಿ ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 19ನೇ ಪಚ್ಚನಾಡಿ ವಾರ್ಡ್ ನ ಸಂತೋಷ್ ನಗರ ಪರಿಸರದ ನಿರಾಶ್ರಿತರ ಕೇಂದ್ರ ಬಳಿ ಪ್ರಸ್ತುತ ಇರುವ ಆಟದ ಮೈದಾನವನ್ನು ಮೂಲಭೂತ ಸೌಕರ್ಯ ಉಳ್ಳ ಸುಸಜ್ಜಿತ ಕ್ರೀಂಡಾಗಣ ನಿರ್ಮಿಸಲು ಒಟ್ಟು 1ಎಕ್ರೆ 79 ಸೆಂಟ್ಸ್ ಜಾಗದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ದಿಂದ ಅಭಿವೃದ್ಧಿಗೊಳ್ಳಲಿರುವ ಯೋಜನೆಗೆ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು ಈಗಾಗಲೇ ಪಚ್ಚನಾಡಿ ವಾರ್ಡ್ ನಾದ್ಯಂತ ಒಟ್ಟು 11 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳಾಗಿದ್ದು, ಸುಮಾರು 5.30 ಕೋಟಿ ರೂ ಮೊತ್ತದ ಅಭಿವೃದ್ಹಿ ಕಾರ್ಯಗಳು ಅನುಷ್ಠಾನ ಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ 2 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ರೂಪು ರೇಷೆ ನೀಡಲಾಗಿದ್ದು, ಅತೀ ಶೀಘ್ರದಲ್ಲಿ ಕಾರ್ಯಗತ ಗೊಳಿಸುವುದಾಗಿ ತಿಳಿಸಿದರು.

ಇಲ್ಲಿನ ಸ್ಥಳೀಯರ ಬೇಡಿಕೆಯಂತೆ ಪ್ರಸ್ತುತ ಇರುವ ಆಟದ ಮೈದಾನವನ್ನು ಕಾರ್ಪೊರೇಟರ್ ರವರು ಮುತುವರ್ಜಿ ವಹಿಸಿ ಅಧಿಕೃತವಾಗಿ ಕಾಯ್ದಿರಿಸಿದ್ದು, ಇಲ್ಲಿ ಬಯಲು ರಂಗ ಮಂದಿರ, ಪೆವಿಲಿಯನ್, ಶೌ
ಚಾಲಯ, ಸುತ್ತಲೂ LED ದೀಪ, ಪಿಚ್ ನಿರ್ಮಾಣ, ವಾಲಿಬಾಲ್ ಕೋರ್ಟ್, ಶೆಟಲ್ ಕೋರ್ಟ್, ಆವರಣ ಗೋಡೆ ಇನ್ನಿತರ ಮೂಲಭೂತ ಸೌಕರ್ಯ ಉಳ್ಳ ಕ್ರೀಡಾಂಗಣ 35 ಲಕ್ಷ ರೂ ಅನುದಾನದಲ್ಲಿ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಿ ಹೈ ಮಾಸ್ಟ್, ಫ್ಲಡ್ ಲೈಟ್ ದೀಪ ಅಳವಡಿಸಿ, ಸುತ್ತಲೂ ವಾಕಿಂಗ್ ಟ್ರಾಕ್ ಇನ್ನಿತರ ಸೌಕರ್ಯಗಳನ್ನೂ ಕಲ್ಪಿಸುವುದಾಗಿ ತಿಳಿಸಿದರು.
ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೋಂದೆಲ್, ಮಂಡಲ ಉಪಾಧ್ಯಕ್ಷೆ ಅಮೃತ್ ಲಾಲ್ ಡಿಸೋಜ, ಮಂಡಲ ಹಿಂದುಳಿದ ಮೋರ್ಚಾ ಖಜಾಂಚಿ ವಿಜಯ ಕುಮಾರ್ ಅಮೀನ್, ಮಂಡಲ ಸದಸ್ಯೆ ಲತಾ ರೈ, ಪಚ್ಚನಾಡಿ ಬಿಜೆಪಿ ಮಹಿಳಾ ಪ್ರಮುಖ್ ಇಂದಿರಾ ಸುವರ್ಣ,
ಬೂತ್ ಸಂಖ್ಯೆ 143 ಸಂತೋಷ್ ನಗರ ಇದರ ಅಧ್ಯಕ್ಷ ಜಯಪ್ರಕಾಶ್, ನಿಕಟ ಪೂರ್ವ ಬಿಜೆಪಿ ವಾರ್ಡ್ ಅಧ್ಯಕ್ಷ ನವೀನ್ ಶೆಟ್ಟಿ , ಶಕ್ತಿ ಕೇಂದ್ರ ಪ್ರಮುಖರು, ಮಂಡಲ ಮುಖಂಡರು, ಪ್ರಮುಖರಾದ ಸಂದೇಶ್ ಪೂಜಾರಿ, ಮಹೇಶ್ ಕುಲಾಲ್, ರತೀಶ್, ವಿನೋದ್ ದೇವಾಡಿಗ, ಸಂದೀಪ್, ವಿಜಯ ಶೆಟ್ಟಿ, ಗಣೇಶ್ ಕುಲಾಲ್, ಹರೀಶ್ , ಗೌತಮ್ ಬಂಗೇರ, ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು