ಇತ್ತೀಚಿನ ಸುದ್ದಿ
ಪಾನಮತ್ತಳಾಗಿದ್ದ ಯುವತಿಯ ಅತ್ಯಾಚಾರಗೈದ ಕ್ಯಾಬ್ ಚಾಲಕನ ಬಂಧನ: ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ
23/09/2021, 19:58

ಬೆಂಗಳೂರು(reporterkarnataka.com): ರಾತ್ರಿ ಪಾರ್ಟಿಯಲ್ಲಿ ಪಾನಮತ್ತಳಾಗಿದ್ದ ಯುವತಿ ಮೇಲೆ ಅತ್ಯಾಚಾರ ನಡೆಸಿದ ಕ್ಯಾಬ್ ಚಾಲಕನನ್ನು 24 ತಾಸು ಕಳೆಯುವುದರೊಳಗೆ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ರಾತ್ರಿ ಪಾರ್ಟಿ ಮುಗಿಸಿಕೊಂಡು ಮಲ್ಲೇಶ್‌ಪಾಳ್ಯದ ಮನೆಗೆ ಹೋಗಲು ಯುವತಿ ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಚಾಲಕ ದೇವರಾಜ್ ಎಂಬಾತ ಯುವತಿ ಪಾನಮತ್ತಳಾಗಿರುವುದನ್ನು ಗಮನಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗದೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಚಾಲಕ ದೇವರಾಜ್ ಎಂಬಾತನನ್ನು ಜೀವನ್ ಭೀಮಾನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ಜೀವನ್‌ಭಿಮಾ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.