ಇತ್ತೀಚಿನ ಸುದ್ದಿ
ಪಾಳೇಗಾರರ ಕಾಲದ ಬಸಪ್ಪ ನಾಯಕನಾಳಿದ ವೀರನ ದುರ್ಗಕ್ಕೆ ದಾರಿ ಯಾವುದಯ್ಯ? : ಅಧಿಕಾರಸ್ಥರ ನಿರ್ಲಕ್ಷ್ಯಕ್ಕೆ ಕೋಟೆ ತತ್ತರ
15/02/2022, 19:15
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಕೂಡ್ಲಿಗಿ ಸುಂದರ ಬೆಟ್ಟದ ಇಳಿಜಾರು, ಝರಿ ಝರಿ ನೀರು, ವಿಸ್ಮಯ ಮೂಡಿಸುವ ಬತ್ತೇರಿಗಳು, ಒನಕೆ ಕಿಂಡಿ, 15 ಅಡಿ ಎತ್ತರದ ಗುಪ್ತದ್ವಾರ, ನಿನ್ನೆ ಮೊನ್ನೆ ತಾನೆ ಕಟ್ಟಿದ್ದಾರೆ ಎನ್ನುವಂತಿರುವ ಸುಂದರ ಕಲ್ಲಿನ ಕೋಟೆಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸದೇ ಇರುದು. ಚಿತ್ರದುರ್ಗದ ಕಲ್ಲಿನ ಕೋಟೆಯನ್ನೇ ನಾಚಿಸುವಂತಿರುವ ಪಾಳೇಗಾರ ವಂಶಸ್ಥರು ಆಳಿದ ಕೋಟೆಯೊಂದು ರಕ್ಷಣೆ ಇಲ್ಲದೇ ನೋಡು ನೋಡುತ್ತಿದ್ದಂತೆಯೇ ಎಲ್ಲರ ಕಣ್ಮುಂದೆಯೇ ಹಾಳಾಗುತ್ತಿರುವುದು ಮಾತ್ರ ದುದೈ೯ವವಾಗಿದೆ.
ಕೂಡ್ಲಿಗಿ ಪಟ್ಟಣದಿಂದ 7 ಕಿ.ಮೀ. ದೂರದಲ್ಲಿರುವ ವೀರನ ದುಗ೯ ಎನ್ನುವ ಹಾಳುಬಿದ್ದ ಪಾಳೇಗಾರರ ಕೋಟೆ ಎತ್ತರದ ಬೆಟ್ಟಗಳ ಸಾಲಿನಲ್ಲಿ ಈಗಲೂ ಕಂಗೊಳಿಸುತ್ತಿದ್ದು ಇಂದು ಈ ಬೆಟ್ಟದ ಕೆಳಗಡೆ ಬೀರಲಗುಡ್ಡ ಎಂಬ ಹೆಸರಿನಿಂದ ಸುಂದರ ಗ್ರಾಮವೂ ಇದೆ. ವಿಪಯಾ೯ಸವೆಂದರೆ ಈ ಬೀರಲಗುಡ್ಡ ಗ್ರಾಮಕ್ಕೆ ವೀರನ ದುಗ೯ದ ಪಾಳೇಪಟ್ಟಿನ ದುಗ೯ತಿಯೇ ಬಂದಿದ್ದು ಐತಿಹಾಸಿಕ ವೀರನದುಗ೯ ಪಾಳೇಗಾರರು ಆಳಿದ ಬೀಡು, ಈ ಬೆಟ್ಟದ ತುದಿಯಲ್ಲಿರುವ ಈಗಿನ ಬೀರಲಗುಡ್ಡ ಗ್ರಾಮ ಎರಡು ಅವಜ್ಞೆಗೆ ಒಳಗಾಗಿದ್ದು ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಈ ಕಡೆ ಮುಖ ಮಾಡದೇ ಇರುವುದು ಮಾತ್ರ ಸ್ಥಳೀಯರಿಗೆ ನಿರಾಸೆಮೂಡಿಸಿದೆ. ಈ ಬೆಟ್ಟದ ಹತ್ತಿರಕ್ಕೆ ರಸ್ತೆಗಳಿದ್ದರೂ ಸಾರಿಗೆ ವ್ಯವಸ್ಥೆ ಇಲ್ಲದಿರುವುದೇ ಐತಿಹಾಸಿಕ ಸ್ಥಳ ಮುಖ್ಯವಾಹಿನಿಯಿಂದ ದೂರ ಉಳಿದಿದೆ. ಈ ಸುಂದರ ಕೋಟೆಯನ್ನು ನೋಡಬೇಕೆಂದರೆ ಕೂಡ್ಲಿಗಿಯಿಂದ ಮೊರಬನಹಳ್ಳಿ ಮೂಲಕ ಬೀರಲಗುಡ್ಡ ಗ್ರಾಮಕ್ಕೆ ಬರಬೇಕು.
ಅಲ್ಲಿಂದ ಈ ವೀರನದುಗ೯ ಬೆಟ್ಟ ಹತ್ತಿ ಸುಂದರ ಪ್ರಕೖತಿ ವಿಸ್ಮಯ ತಾಣಗಳ ಸೌಂದರ್ಯವನ್ನು ಸವಿಯಬಹುದು. ಆದರೆ ಬೀರಲಗುಡ್ಡ ಗ್ರಾಮಕ್ಕೆ ಪ್ರವಾಸಿಗರು ಬರಲು ಸೂಕ್ತ ಬಸ್ ಸೌಲಭ್ಯ ಇಲ್ಲ ಈಗಾಗಿ ತಮ್ಮ ವಾಹನಗಳ ಮೂಲಕ ಬರಬಹುದು, ಗುಂಪು ಗುಂಪಾಗಿ ಬಂದರೆ ಕ್ಷೇಮ.
ಬೆಟ್ಟದ ತುದಿಗೆ ಹೋಗಲು 7 ಮಹದ್ವಾರ: ವೀರನದುಗ೯ ಬೆಟ್ಟದ ತುತ್ತ ತುದಿ ತಲುಪಬೇಕೆಂದರೇ 7 ಮಹಾದ್ವಾರಗಳನ್ನು ದಾಟಲೇ ಬೇಕು. ಪ್ರತಿ ಹಂತದಲ್ಲೂ ಒಂದೊಂದು ಬತೇರಿಯನ್ನು ಕಾಣಬಹುದಾಗಿದ್ದು, ಆದರೆ ಈಗ ಈ ಬತೇರಿಗಳ ಕಲ್ಲುಗಳನ್ನು ದುಷ್ಕಮಿ೯ಗಳು ಮನೆಯ ಕಲ್ಲುಗಳನ್ನಾಗಿ ಬಳಸುತ್ತಿದ್ದಾರೆ. ಬೆಟ್ಟದ ಮೇಲೆ ಹೋಗಲು ಇಲ್ಲಿಯ ಪ್ರಧಾನ ಮಾಗ೯ವನ್ನು ಒನಕೆ ಕಿಂಡಿ ಎಂದು ಕರೆಯಲಾಗುತ್ತಿದ್ದು, ಈ ಕಿಂಡಿಯಿಂದ ಮೇಲೇರಿದರೆ ಹಾಳುಬಿದ್ದ ಬತೇರಿಗಳ ನಗ್ನ ದಶ೯ನವಾಗುತ್ತದೆ, ಈ ಬೆಟ್ಟದ ಪೂವ೯ಕ್ಕೆ ಪಾಳೇಗಾರರು ಆಳ್ವಿಕೆ ಮಾಡಿದ ಬಗ್ಗೆ ಕಡತಗಳು, ನಗ, ನಾಣ್ಯ, ಇತ್ಯಾದಿಗಳನ್ನು ಇಟ್ಟು ಎರಕ ಒಯ್ಯಲಾಗಿದೆ. ಬೆಟ್ಟದ ಕೆಳಗಡೆ ಶ್ರೀ ಕೊಟ್ಟೂರೇಶ್ವರ ಮಠವಿದ್ದು ಗಭ೯ಗೖಹ, ಸುಕನಾಸಿ, ನವರಂಗ, ಮುಖಮಂಟಪಗಳಿವೆ, ಆದರೆ ಈಗಲ್ಲಿ ಮೂತಿ೯ ಇಲ್ಲ, ಪಂಚಗಣಾಧೀಶ್ವರ ರಲ್ಲಿ ಒಬ್ಬರಾದ ಕೊಟ್ಟೂರೇಶ್ವರ ಈ ಮಾಗ೯ದಲ್ಲಿ ಹೋಗಿದ್ದಾಗ ಇಲ್ಲಿ ತಂಗಿದ್ದ ನೆನಪಿಗಾಗಿ ಇಲ್ಲಿ ಮಠ ನಿಮಿ೯ಸಲಾಗಿದೆ ಎಂದು ತಿಳಿದು ಬರುತ್ತದೆ.
ಶಿಕ್ಷೆಯ ಸ್ಥಳ: ಪಾಳೇಗಾರರ ಕಾಲದಲ್ಲಿ ಬೆಟ್ಟದ ತುದಿಯಲ್ಲಿಯೂ ಮನೆಗಳಿದ್ದ ಕುರುಹುಗಳಿದ್ದು ಆ ಕಾಲದಲ್ಲಿ ಅಲ್ಲಿನ ಹೆಂಗಸರು ತಪ್ಪು ಮಾಡಿದರೆ ಬೆಟ್ಟದ ತುದಿಯಲ್ಲಿರುವ ಎತ್ತರವಾದ ಹೆಬ್ಬಂಡೆ ಮೇಲೆ ಏಣಿ ಹಾಕಿ ಹತ್ತಿಸಿ ಏಣಿಯನ್ನು ತೆಗೆಯುತ್ತಿದ್ದರಂತೆ. ಇದು ಆಗ ಹೆಣ್ಣುಮಕ್ಕಳಿಗೆ ನೀಡುತ್ತಿದ್ದ ಶಿಕ್ಷೆಯಾಗಿತ್ತು ಎಂದು ಬೀರಲಗುಡ್ಡ ಗ್ರಾಮದ ಮಾರಪ್ಪ ಹೆಬ್ಬಂಡೆಯ ಇತಿಹಾಸವನ್ನು ಹೇಳುತ್ತಾರೆ. ಪಾಳೇಗಾರರ ಕಾಲದಲ್ಲಿ ಹರಪನಹಳ್ಳಿ, ಜಮ೯ಲಿ ಪಾಳೇಗಾರರು ವೀರನದುಗ೯ದಲ್ಲಿ ಧವಸ, ಧಾನ್ಯ,ನಗ,ನಾಣ್ಯಗಳನ್ನು ಸಂಗ್ರಹಿಸಿ ಇಡುತ್ತಿದ್ದರು. ಇಲ್ಲಿದ್ದ ಕೊತ್ವಾಲರು ಇಲ್ಲಿಯ ಸಂಗ್ರಹವಸ್ತುಗಳನ್ನು ಕಾಪಾಡುತ್ತಿದ್ದರೆನ್ನಲಾಗುತ್ತಿದೆ, ಈಗಾಗಿಯೇ ಈ ಕೋಟೆಗೆ ಹೋಗಲು ಒಬ್ಬೊಬ್ಬರೇ ಹೋಗುವಂತ ಕಿರಿದಾದ ಕಿಷ್ಕಿಂಧೆ ದಾರಿಗಳಿವೆ,
ಅವನತಿ; ತಾಲೂಕಿನಲ್ಲಿ ಗುಡೇಕೋಟೆ, ಜಮ೯ಲಿ, ವೀರನದುಗ೯ ಈಗೇ ಮೂರು ಪಾಳೇಗಾರರು ಕೋಟೆ ಕಟ್ಟಿ ಆಳಿದ್ದರೂ ಗುಡೇಕೋಟೆ ಹಾಗೂ ಜಮ೯ಲಿ ಪಾಳೇಗಾರರ ಬಗ್ಗೆ ಸಾಕಷ್ಟು ಇತಿಹಾಸ ಈಗ ಲಭ್ಯವಿದೆ ಆದರೆ ವೀರನದುಗ೯ದ ಬಗ್ಗೆ ಹೆಚ್ಚಿನ ಇತಿಹಾಸ ದೊರೆಯುತ್ತಿಲ್ಲ, ಇಲ್ಲಿ ಬಸಪ್ಪನಾಯಕ ಎಂಬ ದೊರೆ ಆಳುತ್ತಿದ್ದ ಎನ್ನಲಾಗಿದ್ದು ಈ ಕೋಟೆಗೆ ಟಿಪ್ಪುಸುಲ್ತಾನ್ ಮುತ್ತಿಗೆ ಹಾಕಿದಾಗ ಅಪಾರ ಸಾವು,ನೋವು ಸಂಭವಿಸಿದಾಗ ವೀರನದ ದುಗ೯ ಅವನತಿ ಕಂಡಿತು ಎಂದು ತಿಳಿದು ಬರುತ್ತದೆ ಈಬಗ್ಗೆ ಇತಿಹಾಸಕಾಕರು ಹೆಚ್ಚಿನ ಸಂಶೋಧನೆ ಮಾಡಿದಾಗ ವೀರನದುಗ೯ದ ಮತ್ತಷ್ಟು ರೋಚಕ ಇತಿಹಾಸ ಬೆಳಕಿಗೆ ಬರುತ್ತದೆ ಇದಕ್ಕೂ ಮೊದಲು ಈ ಬೆಟ್ಟದಲ್ಲಿ ಅಕ್ರಮವಾಗಿ ಕಲ್ಲು,ಬಂಡೆ ಸೀಳುವವರನ್ನು ನಿಲ್ಲಿಸಿ ಈ ಸುಂದರ ಐತಿಹಾಸಿಕ, ಪ್ರಕೖತಿಯ ತಾಣವನ್ನು ರಕ್ಷಿಸಬೇಕಿದೆ.
ದೂರದ ಇತಿಹಾಸವನ್ನು ಪ್ರೇಕ್ಷಣಿಯ ಸ್ಥಳವನ್ನು ನೋಡುವ ನಾವು ನಮ್ಮ ಪಕ್ಕದಲ್ಲಿಯೇ ಇರುವ ಕೂಡ್ಲಿಗಿಯಿಂದ ಕೂಗಿದರೆ ಕೇಳಿಸುವಷ್ಟು ಹತ್ತಿರವಿರುವ ವಣ೯ಮಯ ಗಿರಿ,ಶಿಖರದಲ್ಲಿ ಕಂಗೊಳಿಸುವ ವೀರನ ದುಗ೯ ಇತಿಹಾಸ ಸವಿಯಲು ಆಗುತ್ತಿಲ್ಲ, ಪಾಳೇಗಾರರ ಇತಿಹಾಸ ಸಾರುವ ಕೋಟೆ,ಕೊತ್ತಲು, ಬತೇರಿಗಳು, ಶಾನಗಳು, ವಿಸ್ಮಯ ಮೂಡಿಸುವ ಒನಕಿ ಕಿಂಡಿ, ಗುಪ್ತದ್ವಾರ ಮುಂತಾದ ಸ್ಥಳಗಳಿದ್ದು ಈ ಇತಿಹಾಸವನ್ನು ಪರಿಚಯ ಮಾಡಿಕೊಡುವ ಗೋಜಿಗೆ ಯಾರೂ ಹೋಗದಿರುವುದು ದುರಂತ.
– ಬೀರಲಗುಡ್ಡ ಗ್ರಾಮದ ಈರಣ್ಣ
ನಮ್ಮ ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಇಂದಿನ ಮಕ್ಕಳಿಗೆ ಸ್ಥಳೀಯವಾದ ಇತಿಹಾಸ ಪರಿಚಯ ಮಾಡಿಕೊಟ್ಟರೆ ಮಕ್ಕಳು ಇತಿಹಾಸ ಅಂದರೆ ಈಗಿರುತ್ತದೇ ಎಂದು ನಿಜವಾದ ಜ್ಞಾನ ದೊರೆಯುತ್ತದೆ ಸುಂದರ ಐತಿಹಾಸಿಕ ತಾಣಗಳನ್ನು ವೀಕ್ಷಿಸಿದಂತಾಗುತ್ತದೆ. ತಾಲೂಕು ಆಡಳಿತ, ಜನಪ್ರತಿನಿಧಿಗಳು ಈ ಬೆಟ್ಟ ವೀಕ್ಷಿಸಲು ಹೋಗುವವರಿಗೆ ರಸ್ತೆ,ಹಾಗೂ ಬಸ್ ಸೌಲಭ್ಯಗಳನ್ನು ಕಲ್ಪಿಸಿದರೆ ಮಾತ್ರ ವೀರನ ದುಗ೯ದ ಇತಿಹಾಸ ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯ.
– ಮಂಜುನಾಥ ಮಯೂರ, ಕೂಡ್ಲಿಗಿಯ ಇತಿಹಾಸ ಪ್ರೇಮಿ