ಇತ್ತೀಚಿನ ಸುದ್ದಿ
OLYMPICS | ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಶುಭಾರಂಭ : ಇಸ್ರೇಲ್ ವಿರುದ್ಧ ಭರ್ಜರಿ ಜಯ
25/07/2021, 10:11

ReporterKarnataka.com
ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಸ್ರೇಲ್‌ನ ಕ್ಸೆನಿಯಾ ಪೋಲಿಕಾರ್ಪೋವಾ ಅವರನ್ನು ಮೊದಲ ಸುತ್ತಿನಲ್ಲಿ 21-7, 21-10 ಸೆಟ್ ಗಳಿಂದ ಪರಾಭವಗೊಳಿಸಿದ್ದಾರೆ.
ವಿಶ್ವದ 7ನೇ ರ್ಯಾಂಕ್ ಆಟಗಾರ್ತಿ 26 ವರ್ಷದ ಪಿ ವಿ ಸಿಂಧು ಅವರು ಮಹಿಳೆಯರ ಸಿಂಗಲ್ಸ್ ಗ್ರೂಪ್ ಜೆ ಪಂದ್ಯದಲ್ಲಿ 58ನೇ ರ್ಯಾಂಕಿನ ಪೊಲಿಕರ್ಪೊವಾ ಅವರನ್ನು ಆರಂಭಿಕ ಪಂದ್ಯದಲ್ಲಿ 21-7, 21-10 ಸೆಟ್ ಗಳಿಂದ ಸುಲಭವಾಗಿ ಗೆದ್ದಿದ್ದಾರೆ.
ಮುಂದಿನ ಸುತ್ತಿನಲ್ಲಿ ಪಿ ವಿ ಸಿಂಧು ಹಾಂಕಾಂಗ್ ನ ವಿಶ್ವದ 34ನೇ ಶ್ರೇಯಾಂಕಿತೆ ಚೆಯುಂಗ್ ನ್ಗಾನ್ ಯಿ ಅವರನ್ನು ಎದುರಿಸಲಿದ್ದಾರೆ.
ನಿನ್ನೆ ನಡೆದ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗ್ರೂಪ್ ಎ ಪಂದ್ಯದಲ್ಲಿ ಚೀನಾದ ಯಾಗ್ ಲೀ ಮತ್ತು ಚಿ ಲಿನ್ ವಾಂಗ್ ಅವರನ್ನು ಸೋಲಿಸಿದ್ದಾರೆ.