1:54 PM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಒಗ್ಗಟ್ಟಿನ ಕೊರತೆಯಿಂದ ರಾಜಕಾರಣ ದಲಿತರ ಕೈ ಜಾರುತ್ತಿದೆ: ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್

06/09/2022, 18:51

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ರಾಜ್ಯದ 150 ವಿಧಾನ ಸಭಾ ಕ್ಷೇತ್ರಗಳಲ್ಲಿ ದಲಿತರೇ ನಿರ್ಣಾಯಕರಾಗಿದ್ದರೂ , ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕಾರಣ ದಲಿತ ಕೈ ಜಾರುತ್ತಿದೆಯೆಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ವಿಷಾದಿಸಿದರು.

ನಗರದ ಗಲ್‌ಪೇಟೆಯಲ್ಲಿ ದಲಿತ ಸಮುದಾಯದ ಖಾಸಗಿ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದ 150 ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತರು ಒಗ್ಗಟ್ಟಾಗಿ ಮತ ಚಲಾಯಿಸಿದರೆ ರಾಜಕೀಯಕೀಲಿ ಕೈ ಹಿಡಿಯಲು ಸಾಧ್ಯವಾಗುತ್ತದೆ , ದಲಿತರು ಒಂದಾಗಬೇಕಿದೆ ಎಂದರು.

ಹಳ್ಳಿ ಮತ್ತು ಕೇರಿಗಳು ಒಂದಾಗುವವರೆವಿಗೂ ಸಮಾನತೆಯ ಹೋರಾಟ ಮುಂದುವರೆಸಬೇಕೆಂದು ಪ್ರತಿಪಾದಿಸಿದ ಅವರು , ಹಲವು ಹೋರಾಟಗಳಿಗೆ ನಾಂದಿ ಹಾಡಿರುವ ಕೋಲಾರ ಜಿಲ್ಲೆಯಿಂದಲೇ ಈ ಹೋರಾಟವನ್ನು ತಾವೇ ಮುಂದೆ ನಿಂತು ಮುನ್ನಡೆಸುವುದಾಗಿ ಘೋಷಿಸಿದರು.

ಕೋಲಾರದಲ್ಲಿ ತಮ್ಮ ತಂದೆ ಆರಂಭಿಸಿದ ಸಿದ್ದಾರ್ಥ ಪ್ರೌಢಶಾಲೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ತಾವು ಕೋಲಾರಕ್ಕೆ ಆಗಮಿಸಿದ್ದು , ಸಿದ್ದಾರ್ಥಪ್ರೌಢಶಾಲೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು . 

ಮಾಜಿ ಸ್ಪೀಕರ್ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಮಾತನಾಡಿ , ಸ್ವಾತಂತ್ರ್ಯ ಅಮೃತ ಮಹೋತ್ಸವ ಭಾಷಣದಲ್ಲಿ ತಮಗೆ ಮಹಿಳೆಯರ ಮೇಲೆ ಗೌರವವಿದೆಯೆಂದು ಹೇಳಿದ ಮೋದಿಯವರು , ತಮ್ಮದೇ ಗುಜರಾತ್ ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ನೆಪದಲ್ಲಿ ಬಿಡುಗಡೆ ಮಾಡಿ ಅವರನ್ನು ಅಭೂತ ಪೂರ್ವವಾಗಿ ಸ್ವಾಗತಿಸಿದ್ದಾರೆ. ಇಂತವರಿಗೆ ಮಹಿಳೆ ಮತ್ತು ಸಮಾನತೆಯ ಹಕ್ಕುಗಳನ್ನು ನೀಡಿರುವ ಸಂವಿಧಾನದ ಮೇಲೆ ಹೇಗೆ ಗೌರವ ಇರಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಾಸ್ತಾವಿಕವಾಗಿ ಹಿರಿಯ ದಲಿತ ಮುಖಂಡ ಸಿ.ಎಂ. ಮುನಿಯಪ್ಪ ಮಾತನಾಡಿ , ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದಲಿತರು ಹಂಗಿನ ರಾಜಕಾರಣ ಮಾಡಬೇಕಾಗಿದೆ , ಸ್ವತಂತ್ರವಾಗಿ ಪ೦ಗಡಗಳ ಮಾತನಾಡುವ ಹಕ್ಕು ಇಲ್ಲವಾಗಿದೆ . 

ಒಳಕಿತ್ತಾಡ ಬಿಟ್ಟು ಒಂದಾಗದಿದ್ದರೆ ಸ್ವಾಭಿಮಾನದ ರಾಜಕಾರಣ ಸಾಧ್ಯವಾಗುವುದಿಲ್ಲ , ಅಪಾಯದಲ್ಲಿರುವ ಸಂವಿಧಾನ ವನ್ನು ಸಂರಕ್ಷಿಸಲು ಸಾಧ್ಯವಿಲ್ಲವೆಂದು ಟೀಕಿಸಿದರು . 

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ದಲಿತ ಮುಖಂಡರು ಸಂಘಟನೆಗಳ ಪರವಾಗಿ ಜಿ. ಪರಮೇಶ್ವರ್‌ರನ್ನು ಸನ್ಮಾನಿಸಲಾಯಿತು .

ವೇದಿಕೆಯಲ್ಲಿ ಶಾಸಕರಾದ ಕೆ.ವೈ. ನಂಜೇಗೌಡ , ಎಸ್.ಎನ್ . ನಾರಾಯಣಸ್ವಾಮಿ , ನಜೀರ್‌ ಅಹಮದ್‌ , ಮುಖಂಡರಾದ ಚಂದನಗೌಡ , ಮುನಿಆಂಜಿನಪ್ಪ , ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ , ಶ್ರೀಕೃಷ್ಣ , ಎನ್.ಮುನಿಸ್ವಾಮಿ , ಗೊಲ್ಲ ಹಳ್ಳಿ ಶಿವಪ್ರಸಾದ್‌ , ಟಿ.ವಿಜಯಕುಮಾರ್ , ತಿಮೃಯ್ಯ , ಬೆಳಗಾನಹಳ್ಳಿ ಮುನಿವೆಂಕಟಪ್ಪ ಹಾಗು ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು