ಇತ್ತೀಚಿನ ಸುದ್ದಿ
ಓದುವ ಛಲಕ್ಕೆ ದೊರೆತ ಮನ್ನಣೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ದೇವೇಂದ್ರಮ್ಮಗೆ ಗೌರವ ಡಾಕ್ಟರೇಟ್
08/11/2023, 20:51

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ರಾಯಚೂರು
info.reporterkarnataka@gmail.com
ರಾಯಚೂರು ಮಸ್ಕಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ದೇವೇಂದ್ರಮ್ಮ ಅವರಿಗೆ ಇಂಟರ್ ನ್ಯಾಷನಲ್
ಹ್ಯೂಮನ್ ಡೆವಲಪ್ ಮೆಂಟ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದೆ.
ದೇವೇಂದ್ರಮ್ಮ ಮೊದಲು ನಿರ್ವಾಹಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 13- 14 ತಾಸು ಡ್ಯೂಟಿ ಮಾಡಿಯೂ ಓದು ಬರಹದಲ್ಲಿ ಆಸಕ್ತಿ ಉಳಿಸಿಕೊಂಡಿದ್ದರು. ಕಲಿಯುವ ತನ್ನ ಬಯಕೆಯನ್ನು ಸಂಸ್ಥೆಯ ಮೇಲಾಧಿಕಾರಿಗಳಲ್ಲಿ ಹೇಳಿಕೊಂಡಿದ್ದರು.
ಕರ್ತವ್ಯಕ್ಕೆ ಅಡ್ಡಿಯಾಗದಂತೆ ಓದ ಮುಂದುವರಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ
ನಿಗಮದ ಡಿಫೋ ಮ್ಯಾನೇಜರ್ ಡಿಟಿಓ, ಡಿಸಿ, ಬಿಟಿಎಂ ಹಾಗೂ ಎಂಡಿ ಅವರಿಗೆ ವಂದನೆ ಸಲ್ಲಿಸುತ್ತಾರೆ.
ನನ್ನ ಕರ್ತವ್ಯದ ಜೊತೆಗೆ ಬಿಎ ಪದವಿ ಎಂಎ ಸ್ನಾತಕೋತ್ತರ ಓದಲು ಅವಕಾಶ ನೀಡಿ ಪ್ರೋತ್ಸಾಹ ಮೇಲಾಧಿಕಾರಿಗಳಿಗೆ ಹಾಗೂ ಎಲ್ಲ ಸಿಬ್ಬಂದಿಗಳಿಗೆ ಅವರು ವಂದನೆ ಸಲ್ಲಿಸುತ್ತಾರೆ.
ಹಾಗೆ ಅಖಿಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಯಲ್ಲಿ ಮಹಿಳಾ ಪದಾಧಿಕಾರಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.