ಇತ್ತೀಚಿನ ಸುದ್ದಿ
ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ ಕನ್ನಡಿಗ ಯಾತ್ರಿಕ ಹೃದಯಾಘಾತಕ್ಕೆ ಬಲಿ: ಮಿರ್ಜಾಪುರ ರೈಲ್ವೆ ಸ್ಟೇಶನ್ ನಲ್ಲಿ ಸಾವು
10/06/2023, 11:54
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದಿದ್ದ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕಳಸದ ವೃದ್ಧ
ಯಾತ್ರಿಕರೊಬ್ಬರು ಹೃದಯಾಘಾತದಿಂದ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್ ನಲ್ಲಿ ಸಾವನ್ನಪ್ಪಿದ್ದಾರೆ.
ಕಳಸದಿಂದ ಸುಮೇದ್ ಶಿಖರ್ಜಿಗೆ ತೆರಳಿದ್ದ 110 ಮಂದಿ ಯಾತ್ರಿಕರ ಪೈಕಿ ಇವರೂ ಸೇರಿದ್ದಾರೆ. ಮೃತರನ್ನು ಧರ್ಮಪಾಲಯ್ಯ (72) ಎಂದು ಗುರುತಿಸಲಾಗಿದೆ. ಇವರು ಕಳಸ ತಾಲೂಕಿನ ಕಳಕೋಡು ನಿವಾಸಿಯಾಗಿದ್ದಾರೆ.
ಒಡಿಶಾ ರೈಲು ಅಪಘಾತದಲ್ಲಿ ಅದೃಷ್ಟವಶಾತ್ ಎಲ್ಲ 110 ಮಂದಿ ಕಳಸದ ಕನ್ನಡಿಗ ಯಾತ್ರಿಕರು ಪಾರಾಗಿದ್ದರು. ಆದರೆ ಇವರೆಲ್ಲ ಸುಮೇದ್ ಶಿಖರ್ಜಿಯಿಂದ ಹಿಂತಿರುಗುವಾಗ ಹೃದಯಾಘಾತಕ್ಕೀಡಾದ ಧರ್ಮಪಾಲಯ್ಯ ಅವರು ಕೊನೆಯುಸಿರೆಳೆದರು. ಮಿರ್ಜಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ
ಪರೀಕ್ಷೆಗಾಗಿ ಇರಿಸಲಾಗಿದೆ.