ಇತ್ತೀಚಿನ ಸುದ್ದಿ
ಓಬಳಾಪುರ: ಸರಕಾರ ನಿರ್ಮಿಸಿದ ಚೆಕ್ ಡ್ಯಾಂ ಒಡೆದು ಅಕ್ರಮ ಮರಳು ಸಾಗಣಿಕೆ; ಗ್ರಾಮಸ್ಥರಿಂದ ಆರೋಪ
09/10/2021, 21:52
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ತಾಲೂಕು ಹುರುಳಿಹಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಳಾಪುರ ಗ್ರಾಮದ ಹೊರವಲಯದಲ್ಲಿ ಹಳ್ಳದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಒಡೆದು ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.
ಗ್ರಾಮದ ವ್ಯಕ್ತಿಯೊಬ್ಬರು ಚೆಕ್ ಡ್ಯಾಂ ಕೆಡವಿ ಅದರಡಿಯಲ್ಲಿರುವ ಮರಳನ್ನು ಅಕ್ರಮವಾಗಿ ಬಗೆಯಲಾಗುತ್ತಿದ್ದು, ಮರಳನ್ನು ತಮ್ಮ ಕಾಮಗಾರಿಗೆ ಬಳಸುತ್ತಿದ್ದಾರೆಂದು ಓಬಳಾಪುರ ಗ್ರಾಮ ಸೇರಿದಂತೆ ಕೆಲ ಗ್ರಾಮಸ್ಥರು ದೂರಿದ್ದಾರೆ.
ಸರ್ಕಾರ ನಿರ್ಮಿಸಿರುವ ವೆಕ್ ಡ್ಯಾಂ ಅನ್ನು ಕೆಡವಿರೋದೇ ಕಾನೂನು ಬಾಹಿರವಾಗಿದ್ದು, ಹಳ್ಳದಲ್ಲಿರುವ ಮರಳನ್ನು ಯಾವುದೇ ಪರವಾನಗಿ ಇಲ್ಲದೇ ಸಾಗಿಸಲಾಗುತ್ತಿದೆ ಎಂದು ಹೊಸಹಳ್ಳಿ ಹೋಬಳಿಯ ಕೆಲ ಸಂಘಟನೆಗಳ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಂದಾಯ ಇಲಾಖಾಧಿಕಾರಿಗಳು ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಸ್ಥಳ ಪರಿಶೀಲಸಬೇಕಿದೆ. ಸರ್ಕಾರ ನಿರ್ಮಿಸಿರುವ ಚೆಕ್ ಡ್ಯಾಂ ಧ್ವಂಸಗೊಳಿಸಲಾಗಿದೆ ಹಾಗೂ ಕೆಲ ದಿಬಗಳಿಂದ ನಿರಂತರ, ಪ್ರತಿ ದಿನ ಹತ್ತಾರು ಟ್ರಾಕ್ಟ್ರ್ ನಷ್ಟು ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದ್ದು, ಸಂಬಂಧಿಸಿದಂತೆ ತಾಪಂ ಕಾರ್ಯನಿರ್ಹಣಾಧಿಕಾರಿ ಹಾಗೂ ಕಂದಾಯ ಇಲಾಖಾಧಿಕಾರಿ ಶೀಘ್ರವೇ ಸ್ಥಳ ಪರಿಶೀಲಿಸಬೇಕಿದೆ. ಅಕ್ರಮ ಜರುಗಿಸಿರುವ ವಿರುದ್ಧ ಸೂಕ್ತ ಶಿಸ್ಥು ಕ್ರಮ ಜರುಗಿಸಬೇಕೆಂದು, ಓಬಳಾಪುರ ಗ್ರಾಮದವರು ಮತ್ತು ಕೆಲ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.