ಇತ್ತೀಚಿನ ಸುದ್ದಿ
ನವೆಂಬರ್ 25: ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ವರ್ಷಾವಧಿ ಕೋಲ
22/11/2022, 20:42

ಬಂಟ್ವಾಳ(reporterkarnataka.com): ಇಲ್ಲಿಗೆ ಸಮೀಪದ ಕಾರಣೀಕ ಕ್ಷೇತ್ರವಾದ ಶ್ರೀ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲ ಉತ್ಸವವು ನವೆಂಬರ್ 25ರಂದು ರಾತ್ರಿ 10 ಗಂಟೆಗೆ ಜರುಗಲಿದೆ.
25ರಂದು ಬೆಳಗ್ಗೆ 9ರಿಂದ ನವ ಕಲಶ ಪ್ರಧಾನ ಮತ್ತು 12 ತೆಂಗಿನಕಾಯಿ ಗಣಹೋಮ ಜರುಗಲಿದೆ. ಬೆಳಗ್ಗೆ 11ರಿಂದ ನಾಗತಂಬಿಲ, ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.30ರಿಂದ ಭಜನಾ ಕಾರ್ಯಕ್ರಮ ಮೇಳೈಸಲಿದೆ. 24ರಂದು ರಾತ್ರಿ 7 ಗಂಟೆಗೆ ಲೇಲೆ ಪಾಡಡೆ ತುಳು ನಾಟಕ ನಡೆಯಲಿದೆ. 25ರಂದು ರಾತ್ರಿ 7 ಗಂಟೆಗೆ ಭರತನಾಟ್ಯ ಮತ್ತು ನೃತ್ಯ ವೈಭವ ಹಾಗೂ ಗೀತ ಸಾಹಿತ್ಯ ಸಂಭ್ರಮ ಜರುಗಲಿದೆ.