10:44 AM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ನವೆಂಬರ್ 8: ಪ್ರವಾದಿ ಆದರ್ಶ ಕುರಿತು ಮಂಗಳೂರು ಪುರಭವನದಲ್ಲಿ ಸಾರ್ವಜನಿಕ ಸಮಾವೇಶ

06/11/2024, 20:52

ಮಂಗಳೂರು(reporterkarnataka.com): ಪ್ರವಾದಿ ಮುಹಮ್ಮದ್(ಸ)ರು ಜನಿಸಿದ ತಿಂಗಳ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರದ ಟೌನ್ ಹಾಲ್‌ನಲ್ಲಿ ನವೆಂಬರ್ 8 ಶುಕ್ರವಾರ ಸಂಜೆ 6.40ಕ್ಕೆ ಸಾರ್ವಜನಿಕ ಸಭೆಯ ಆಯೋಜಿಸಿದೆ. ಪ್ರವಾದಿ ಮುಹಮ್ಮದ್(ಸ) ಪರಿಚಯಿಸಿದ ಆದರ್ಶ ಸಮಾಜ ಮತ್ತು ಇಂದಿನ ಸವಾಲು ಎಂಬುದು ಕಾರ್ಯಕ್ರಮ ಮುಖ್ಯ ಧೈಯ. ಒಂದು ಆದರ್ಶ ಸಮಾಜವನ್ನು ಕಟ್ಟುವ ದಿಶೆಯಲ್ಲಿ ಮಾಡಲಾವ ಅವಲೋಕನ ಈ ಸಭೆ. ಪ್ರವಾದಿ ಮುಹಮ್ಮದ್(ಸ) ಜನಿಸಿದ ತಿಂಗಳು ಎಂಬ ನೆಲೆಯಲ್ಲಿ ಅವರು ಪರಿಚಯಿ- ಸಾಮಾಜಿಕ ಮೌಲ್ಯಗಳು, ತತ್ವಗಳನ್ನು ಚರ್ಚೆಗೊಡ್ಡುವುದೂ ಈ ಕಾರ್ಯಕ್ರಮದಲ್ಲಿ ನಡೆಯಲಿದೆ. ಹಾಗೆ ಇವತ್ತಿನ ದಿನಗಳಲ್ಲಿ ಉತ್ತಮ ಮೌಲ್ಯಾಧಾರಿತ ಸಮಾಜದ ರಚನೆಗೆ ಎದುರಾಗುತ್ತಿರುವ ಸವಾಲುಗಳೇನು ಎಂಬ ವಿಶ್ಲೇಷಣೆಯೂ ನಡೆಯಿದೆ. ಇದರಲ್ಲಿ ಲೆಫ್ಟಿನೆಂಟ್ ಭವ್ಯಾ ನರಸಿಂಹಮೂರ್ತಿ ಅವರು ಭಾಗವಹಿಸಲಿದ್ದಾರೆ. ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾ ಪುತ್ತಿಗೆ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಭಾಗವಹಿಸಲಿದ್ದ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಇಸ್ಟಾಕ್ ಪುತ್ತೂರು ಅವರೂ ಮಾತನಾಡಲಿದ ಸರ್ವ ಧರ್ಮೀಯರನ್ನೂ ಜಮಾಅತೆ ಇಸ್ಲಾಮೀ ಹಿಂದ್ ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತದೆ.
ಜಮಾಅತೆ ಇಸ್ಲಾಮೀ ಹಿಂದ್ ಕಳೆದ 8 ದಶಕಗಳಿಂದ ಈ ದೇಶದಲ್ಲಿ ಚಟುವಟಿಕೆಯಲ್ಲಿದ್ದು, ಧಾವಿಸ ಶೈಕ್ಷಣಿಕ, ಸಾಮಾಜಿಕ ರಂಗಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇಸ್ಲಾಮಿನ ಮೌಲ್ಯಗಳನ್ನು ಜನ ತಿಳಿಸುವುದು, ದೇಶದ ಶಾಂತಿ, ಸುಭದ್ರತೆ ಮತ್ತು ಒಳಿತಿಗಾಗಿ ಶ್ರಮಿಸುವುದನ್ನು ಮಾಡುತ್ತಾ ಬಂದಿದೆ. ದೇ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇದರ ಘಟಕವಿದ್ದು, ದೆಹಲಿಯಲ್ಲಿ ಕೇಂದ್ರೀಯ ಕಚೇರಿಯಿದೆ. ಡಾ| ಬೆಳಗ ಮುಹಮ್ಮದ್ ಸಾದ್ ರಾಜ್ಯಾಧ್ಯಕ್ಷರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು