ಇತ್ತೀಚಿನ ಸುದ್ದಿ
ನಿಷೇಧಾಜ್ಞೆ ಜಾರಿ: ಮಡಿಕೇರಿ ಚಲೋ ಮುಂದೂಡಿಕೆ; ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ರು ಗೊತ್ತೇ?
23/08/2022, 19:43
ಬೆಂಗಳೂರು(reporterkarnataka.com): ಮಡಿಕೇರಿಯಲ್ಲಿ 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ವಿಧಿಸಿರುವ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು ಕಾಂಗ್ರೆಸ್ ಆಯೋಜಿಸಿದ ಮಡಿಕೇರಿ ಚಲೋ ಪ್ರತಿಭಟನೆಯನ್ನು ಮುಂದೂಡಲಾಗಿದೆ.
ಮುಂದಿನ ದಿನಗಳಲ್ಲಿ ಹೋರಾಟದ ನಿಧಾ೯ರವನ್ನು ಪ್ರಕಟಿಸುವುದಾಗಿ ಕಾಂಗ್ರೆಸ್ ತಿಳಿಸಿದೆ.
ಮಾಜಿ ಸಿಎಂ ಹಾಗೂ ಪ್ರತಿಪಕ್ಷದ ನಾಯಕನಾಗಿ ಕಾನೂನಿಗೆ ಗೌರವ ನೀಡಿ ಪ್ರತಿಭಟನೆ ಮಾಡದೇ ಇರಲು ನಿರ್ಧರಿಸಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತನ್ನ ನಿರ್ಧಾರ ಪ್ರಕಟಿಸಿದ್ದಾರೆ.
ಅತಿವೖಷ್ಟಿಯಿಂದ ತತ್ತರಿಸಿದ್ದ ಕೊಡಗಿನಲ್ಲಿ ಪರಿಸ್ಥಿತಿ ಅವಲೋಕಿಸಲು ನಾನು ತೆರಳಿದ್ದೆ. ಮಳೆಹಾನಿ ಸಂತ್ರಸ್ತರಿಗೆ ಸಕಾ೯ರ ಸೂಕ್ತ ವ್ಯವಸ್ಥೆಯನ್ನು ಇಂದಿಗೂ ಕಲ್ಪಿಸಿಲ್ಲ. ಪರಿಹಾರ ಕೂಡ ನೀಡಿಲ್ಲ. ಚೆಕ್ ಕೂಡ ಅಮಾನ್ಯಗೊಂಡಿದೆ.
ಮಡಿಕೇರಿಯಲ್ಲಿ ಡಿಸಿ ಕಚೇರಿಗೆ 7.50 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿಮಿ೯ಸಲಾಗಿದ್ದು ಅದೇ ಬಿದ್ದುಹೋಗುತ್ತಿದೆ. ಕಳಪೆ ಕಾಮಗಾರಿ ಮುಚ್ಚಿಹಾಕುವ ಪ್ರಯತ್ನ ಬಿಜೆಪಿಯಿಂದ ನಡೆದಿದೆ.
ಈ ಸಂದಭ೯ ತಿತಿಮತಿಯಲ್ಲಿ ಬಿಜೆಪಿಯವರು 15- 20 ಮಂದಿ ಕಪ್ಪುಬಾವುಟ ಪ್ರದಶಿ೯ಸಿದರು.
ಪೊಲೀಸರು ಆ ಸಂದಭ೯ ನಿಷ್ಕ್ರಿಯರಾಗಿದ್ದರು.ಪ್ರತಿಭಟನಾನಿರತರನ್ನು ಪೊಲೀಸರು ತಡೆಯುವ ಪ್ರಯತ್ನವನ್ನೇ ಪೊಲೀಸರು ಮಾಡಲಿಲ್ಲ. ಸಿದ್ದರಾಮಯ್ಯ ಆರೋಪಿಸಿದರು.
ಕಾಂಗ್ರೆಸ್ ಕಾಯ೯ಕತ೯ರ ಮೇಲೆ ಲಾಠಿ ಚಾಜ್೯ ಮಾಡಲಾಯಿತೇ ವಿನಾ ಹಿಂದೂ ಸಂಘಟನೆಗಳ ಕಾಯ೯ಕತ೯ರನ್ನು ತಡೆಯುವ ಪ್ರಯತ್ನ ಪೊಲೀಸರು ಮಾಡಲಿಲ್ಲ. ಮಡಿಕೇರಿ ಸುದಶ೯ನ್ ಗೆಸ್ಟ್ ಹೌಸ್ ನಲ್ಲಿ ಊಟ ಮಾಡಿ ಕೊಡ್ಲಿಪೇಟೆಗೆ ತೆರಳುತ್ತಿರುವ ಸಂದಭ೯ ಗುಡ್ಡೆಹೊಸೂರುವಿನಲ್ಲಿ ಮತ್ತೆ ಮೊಟ್ಟೆ ಎಸೆದರು. ಎಲ್ಲ ಕಡೆ 15- 20 ಜನ ಹಿಂದೂ ಪರ ಸಂಘಟನೆಗಳವರು ಪ್ರತಿಭಟನೆ ಮಾಡಿದ್ದರು. ಪೊಲೀಸರಿಗೆ ಪ್ರತಿಭಟನೆ ಬಗ್ಗೆ ಮಾಹಿತಿ ಇತ್ತು. ಹೀಗಿದ್ದರೂ ಪೊಲೀಸ್ ವರಿಷ್ಟಾಧಿಕಾರಿ ನಿಲ೯ಕ್ಷ್ಯ ವಹಿಸಿದರು.ಪೊಲೀಸ್ ವರಿಷ್ಟಾಧಿಕಾರಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದು ರಾಜ್ಯ ಬಿಜೆಪಿ ಸಕಾ೯ರದ ಪ್ರಾಯೋಜಿತ ಪ್ರತಿಭಟನೆಯಾಗಿತ್ತು ಎಂದು ಸಿದ್ದರಾಮಯ್ಯ ದೂರಿದರು.
ಮೊಟ್ಟೆ ಎಸೆದ ಸಂಪತ್ ಆರ್ ಎಸ್ ಎಸ್ ನವನು. ಶಾಸಕ ರಂಜನ್ ಬೆಂಬಲಿಗ ಎಂಬುದು ಸ್ಪಷ್ಟ. ಮೊಟ್ಟೆ ಎಸೆಯಲೂ ಸಕಾ೯ರ ಪೂವ೯ನಿಯೋಜಿತವಾಗಿ ಯೋಜನೆ ರೂಪಿಸಿತ್ತು ಎಂಬುದೂ ಸ್ಪಷ್ಟ. ಕಳಪೆ ಕೆಲಸ ನೋಡಬಾರದು ಎಂದು ಇಂಥ ಪ್ರತಿಭಟನೆಗೆ ಬಿಜೆಪಿಯವರು ಮುಂದಾಗಿದ್ದರು ಎಂದರು.
ನನ್ನ ವಚ೯ಸ್ಸು ಕುಂದಿಸಲು ಬಿಜೆಪಿ ಸಂಚು ಮಾಡಿದೆ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನೋಡಿ ಬಿಜೆಪಿಯವರಿಗೆ ಹೊಟ್ಟೆಯುರಿಯಾಗಿದೆ. 2019 ರಲ್ಲಿ ನಾನು ಕೊಡಗಿಗೆ ಎರಡು ಬಾರಿ ಹೋದಾಗ ಇಲ್ಲದ ಪ್ರತಿಭಟನೆ ಈ ಬಾರಿ ಯಾಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಜನರ ಪರವಾಗಿ, ಸಕಾ೯ರದ ವಿರುದ್ದವಾಗಿ ಪ್ರತಿಭಟನೆ ಮಾಡಲು ಆ.26 ರಂದು ಶುಕ್ರವಾರ ಮುಂದಾಗಿದ್ದೆವು. ಕೊಡಗಿಗೆ ಬರಲಿ, ನೋಡಿಕೊಳ್ಳುತ್ತೇವೆ ಎಂದು ಕೆ.ಜಿ.ಬೋಪಯ್ಯ ಬೆದರಿಕೆ ಹಾಕಿದ್ದಾರೆ. ನಾವು ಸ್ವಾತಂತ್ರ್ಯ ಭಾರತದಲ್ಲಿ ಇಲ್ಲವೇ ಸಿದ್ದರಾಮಯ್ಯ ಕೇಳಿದರು.
ನನಗೇ ಸವಾಲು ಹಾಕುತ್ತೀರಾ? ರೆಡ್ಡಿ ಬ್ರದರ್ಸ್ ಸವಾಲು ಹಾಕಿ ನಂತರ ಏನಾಗಿತ್ತು ತಿಳಿದುಕೊಳ್ಳಿ.
ನಮ್ಮ ಪ್ರತಿಭಟನೆ ವಿರುದ್ದವಾಗಿ ಅದೇ ದಿನ ಬಿಜೆಪಿ ಜನಜಾಗ್ರತಿ ಸಮಾವೇಶ ಮಾಡಿದ್ದಾರೆ. ಆದರೆ ಇದು ದ್ವೇಷದ ಸಮಾವೇಶ – ಕಾಂಗ್ರೆಸ್ ಸಮಾವೇಶಕ್ಕೆ ಹೆದರಿ ಬಿಜೆಪಿ ಸಮಾವೇಶ ಆಯೋಜನೆ ಮಾಡಿದೆ.
ಕಾಂಗ್ರೆಸ್ ಪ್ರತಿಭಟನೆ ನಮ್ಮ ಹಕ್ಕಾಗಿತ್ತು. ಮೊಟ್ಟೆ ಎಸೆಯುವುದು, ಕಪ್ಪು ಬಾವುಟ ತೋರಿಸುವುದಕ್ಕೆ ಯಾವುದೇ ಕಾರಣ ಇರಲಿಲ್ಲ. ವಿಪಕ್ಷ ನಾಯಕನಾಗಿ ಸದ್ಯಕ್ಕೆ ನಾನು ಪ್ರತಿಭಟನೆ ಮಾಡಲಾರೆ. ಮುಂದಿನ ದಿನಗಳಲ್ಲಿ ಸೂಕ್ತ ನಿಧಾ೯ರ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.