ಇತ್ತೀಚಿನ ಸುದ್ದಿ
ನಿಪ್ಪಾಣಿ: ಸ್ವಚ್ಛ ಭಾರತ, ಸ್ವಸ್ಥ ಭಾರತ’ ಕಾರ್ಯಕ್ರಮ; ಶೌಚಾಲಯ ಸ್ವಚ್ಛ ಮಾಡುವ ವಾಹನಕ್ಕೆ ಚಾಲನೆ
02/10/2022, 23:57
ಬೆಳಗಾವಿ(reporterkarnataka.com): ನಿಪ್ಪಾಣಿ ನಗರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾದ “ಸ್ವಚ್ಛ ಸಂಯುಕ್ತ ಭಾರತ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಂತರ ನಗರಸಭೆ ವತಿಯಿಂದ 15ನೇ ಹಣಕಾಸು ಯೋಜನೆಯಡಿ 31 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ಸ್ವಚ್ಚ ಮಾಡುವ ನೂತನ ವಾಹನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಇದೇ ವೇಳೆ ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಿ, ಪ್ರತಿಜ್ಞಾ ವಿಧಿಗೆ ಸಹಿ ಹಾಕಿದರು.
ಮಹಾತ್ಮ ಗಾಂಧೀಜಿ ಅವರ ಆಶಯ ಹಾಗೂ ಪ್ರಧಾನಿ ಮೋದಿಜಿ ಅವರ ಸಂಕಲ್ಪದಂತೆ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಬರುತ್ತಿದ್ದು, ಇನ್ನು ಮುಂದೆಯೂ ನಗರದ ಸ್ವಚ್ಚತೆಯನ್ನು ಕಾಪಾಡಬೇಕು. ಒಣ ಕಸ, ಹಸಿ ಕಸ ಮತ್ತು ಹಾನಿಕಾರಕ ಕಸಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ, ಕಸ ವಿಲೇವಾರಿ ಕೆಲಸವನ್ನು ಇನ್ನೂ ಸರಳವಾಗಿಸಲು ನೆರವಾಗೋಣ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.