ಇತ್ತೀಚಿನ ಸುದ್ದಿ
ನಿಲ್ಲಿಸಿದ್ದ ಮಿನಿ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಗೂಡ್ಸ್ ಲಾರಿ ಡಿಕ್ಕಿ: ಎರಡೂ ವಾಹನಗಳು ಜಖಂ
20/10/2023, 14:43
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಸ್ತೆ ಬದಿ ನಿಲ್ಲಿಸಿದ್ದ ಮಿನಿ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ
ಗೂಡ್ಸ್ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಗೂಡ್ಸ್ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ ಬಣಕಲ್ ನಲ್ಲಿ ನಡೆದಿದೆ.
ನಿದ್ರೆ ಬರುತ್ತಿದ್ದೆ ಅಂತಾ ರಸ್ತೆ ಬದಿಗೆ ನಿಲ್ಲಿಸಿ ಚಾಲಕ ಮಿನಿ ಗೂಡ್ಸ್ ನಲ್ಲೇ ಮಲಗಿದ್ದರು. ಈ ಸಂದರ್ಭದಲ್ಲಿ ಅಶೋಕ್ ಲೈಲ್ಯಾಂಡ್ ಲಾರಿ ಚಾಲಕ ವೇಗವಾಗಿ ಬಂದು ನಿದ್ರೆಯಲ್ಲಿ ಹಿಂಬದಿಗೆ ಹೊಡೆದ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಫುಲ್ ಜಖಂಗೊಂಡಿವೆ.
ಬೆಂಗಳೂರಿನಿಂದ ಮಂಗಳೂರಿಗೆ ಪ್ರೊಫೆಷನಲ್ ಕೋರಿಯರ್ ತೆಗೆದುಕೊಂಡು ಹೋಗುತ್ತಿದ್ದ ಲಾರಿ ಬೇಲೂರಿನಿಂದ ಮೂಡಬಿದ್ರೆಗೆ ಫೀಡ್ಸ್ ಲೋಡಾಗಿದ್ದ ಗೂಡ್ಸ್ ಮಿನಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.