12:47 AM Friday23 - May 2025
ಬ್ರೇಕಿಂಗ್ ನ್ಯೂಸ್
Bangalore | ಗಾರ್ಡನ್ ಸಿಟಿ ವಿಶ್ವವಿದ್ಯಾಲಯ: ಸಾಧಕರಿಗೆ 14ನೇ ಜಿಸಿಯು ಪುರಸ್ಕಾರ Mangaluru | ಮದುವೆ ಸಂಬಂಧದ ಬಗ್ಗೆ ಮನಸ್ತಾಪ ; ಚಿಕ್ಕಪ್ಪನನ್ನೆ ಕೊಂದ ಮುಸ್ತಾಫ Bangalore | ಯಜಮಾನಿಯರಿಂದ “ಗೃಹಲಕ್ಷ್ಮೀ ಸಂಘ” ರಚನೆಗೆ ಕಾರ್ಯಯೋಜನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಗಳೂರಿನಲ್ಲಾದ ಮಳೆ ಹಾನಿಗೆ 25,000 ರೂ. ನಿಂದ 1 ಲಕ್ಷ ರೂ. ವರೆಗೆ… Karnataka Police | ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಎಂ.ಎ. ಸಲೀಂ ನೇಮಕ ಭಾವೈಕ್ಯದ ಪ್ರತೀಕ ಎಂದೇ ಪ್ರಸಿದ್ಧರಾದ ಬ್ಯಾಷ್ಠಿಸ್ಟ್ ಡಿ’ಕುನ್ಹಾ ಇನ್ನಿಲ್ಲ: ನಾಳೆ ಬೆಂದೂರುನಲ್ಲಿ ಅಂತ್ಯಕ್ರಿಯೆ ಮೂಡಿಗೆರೆ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿ ದಾಳಿ; ಇಬ್ಬರಿಗೆ ಗಂಭೀರ ಗಾಯ ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ: ಮಡಿದವರ ಆತ್ಮಕ್ಕೆ ಚಿರಶಾಂತಿ ಕೋರಿ ಮೇ… ರಾಜ್ಯದಿಂದ ಆಂಧ್ರಪ್ರದೇಶಕ್ಕೆ ಕುಮ್ಮಿ ಆನೆಗಳ ಹಸ್ತಾಂತರ: ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್… 1,600 ಕೋಟಿ ರೂ. ಕಾಮಗಾರಿ ರದ್ದು ಮಾಡದಿದ್ದರೆ ಬೆಂಗಳೂರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ:…

ಇತ್ತೀಚಿನ ಸುದ್ದಿ

New Delhi | ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ: ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿ

23/05/2025, 18:13

✅ *ರಾಮನಗರ ಹೆಸರು ಬದಲಿಸಿದ್ದಕ್ಕೆ ಹೆಚ್.ಡಿ.ಕುಮಾರಸ್ವಾಮಿ ಕೆಂಡ*

✅ *ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರಾ?*

✅ *ಮುಂದೆ ಎಲ್ಲವೂ ಬದಲಾಗುತ್ತೆ, ಹೆಸರೂ ಬದಲಾಗುತ್ತದೆ ಎಂದ ಕೇಂದ್ರ ಸಚಿವರು*

✅ *ಹೆಸರು ಬದಲಿಸಿದವರ ಭೂಮಿಗೆ ಬೆಲೆ ಏರಬಹುದು! ಅದಕ್ಕೆ ಹೆಸರು ಬದಲಿಸಿದ್ದಾರೆ*

✅ *ಕೆಂಗಲ್ ಅವರ ಹೆಸರು ಇಟ್ಟಿದ್ದಿದ್ದರೆ ಅಭಿನಂದಿಸುತ್ತಿದ್ದೆ; ಅವರ ಹೆಸರಿಟ್ಟರೆ ಇವರ ಭೂಮಿಗೆ ಬೆಲೆ ಬರಲ್ಲ!*

ನವದೆಹಲಿ(reporterkarnataka.com): ಐತಿಹಾಸಿಕ ಮಹತ್ವ ಹೊಂದಿರುವ ರಾಮನಗರ ಹೆಸರನ್ನು ಕಿತ್ತುಹಾಕಿ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ ಎಂದು ಕಿಡಿಕಾರಿರುವ ಅವರು; ಮುಂದೆ ಪರಿಸ್ಥಿತಿ ಬದಲಾಗಲಿದೆ. ಆಗ ಇವರು ಇಟ್ಟಿರುವ ಹೆಸರೂ ಬದಲಾಗಲಿದೆ ಎಂದು ಕೇಂದ್ರ ಸಚಿವರು ಎಚ್ಚರಿಕೆ ನೀಡಿದರು.
ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು ಅವರು. 2007ರಲ್ಲಿ ನಾನು ತೀರ್ಮಾನ ಮಾಡುವಾಗ ಆಗ ವಿರೋಧ ಮಾಡಬಹುದಾಗಿತ್ತು ಆಗ ಮಾಡಲಿಲ್ಲ. ಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ರಾಮನಗರ ಕೊಟ್ಟಿದೆ. ಇಡೀ ಜಗತ್ತೇ ನಿಬ್ಬೆರಗಾಗುವ ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ್ದರು. ನೆಹರು ಅವರಿಗೆ ಸಡ್ಡು ಹೊಡೆದು ರಾಜಕೀಯ ಮಾಡಿದ್ದರು. ಅಂತಹ ಮಹನೀಯರ ಹೆಸರನ್ನಾದರೂ ಜಿಲ್ಲೆಗೆ ಇಡಬಹುದಿತ್ತು. ಅವರ ಹೆಸರು ಇಟ್ಟಿದ್ದಿದ್ದರೆ ನಾನು ಅಭಿನಂದಿಸುತ್ತಿದ್ದೆ. ಕೆಂಗಲ್ ಅವರ ಹೆಸರಿಟ್ಟರೆ ಇವರ ಭೂಮಿಗಳಿಗೆ ಬೆಲೆ ಬರುವುದಿಲ್ಲವಲ್ಲ? ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ರಾಮನಗರ ಹೆಸರನ್ನು ತೆಗೆದುಹಾಕಿ ಬೆಂಗಳೂರು ದಕ್ಷಿಣ ಎಂದು ಹೆಸರು ಇಟ್ಟುಕೊಂಡಿರುವುದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಭೂಮಿಗಳ ಬೆಲೆಯನ್ನು ಏರಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ಅವರು ಏತಕ್ಕಾಗಿ ಜಿಲ್ಲೆಯ ಹೆಸರು ಬದಲಿಸಿದ್ದಾರೆ? ಅದರ ಹಿಂದಿನ ದುರುದ್ದೇಶ ಏನಿದೆ? ಎಂಬುದು ಗೊತ್ತಿದೆ. ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗ ಅದಕ್ಕೆ ತಿರುಗಿಸಿ ಉತ್ತರ ಕೊಡಬೇಕೋ ಆಗ ಕೊಡುತ್ತೇನೆ ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.
ಇಂತಹ ರಾಜಕಾರಣಕ್ಕೆ ನಾನು ಸೊಪ್ಪು ಹಾಕುವುದಿಲ್ಲ. ಇವರು ಕೇಂದ್ರ ಗೃಹ ಸಚಿವರಿಗೆ ಹೆಸರು ಬದಲಾವಣೆ ರಾಜ್ಯ ಸರ್ಕಾರ ಪ್ರಸ್ತಾಪ ಕಳಿಸಿದ್ದು, ಅದು ತಿರಸ್ಕೃತವಾಗಿದ್ದು ನನಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

✅ *ಇವರು ಮಾಡಿದ್ದು ಮುಂದೆ ಬದಲಾಗಲಿದೆ:*

ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ? ಇವರು ಮಾಡಿದ್ದು ಮುಂದೆ ಬದಲಾಗಲಿದೆ. ಅದೂ ನನಗೆ ಗೊತ್ತಿದೆ. ಹೇಳಿ ಕೇಳಿ ಈ ವ್ಯಕ್ತಿ ರಿಯಲ್ ಎಸ್ಟೇಟ್ ವ್ಯಾಪಾರಿ. ಏನೆಲ್ಲಾ ತಂತ್ರಗಾರಿಕೆ ಹೂಡಿದರೆ ತಮ್ಮ ಜಮೀನುಗಳಿಗೆ ಬೆಲೆ ಬರುತ್ತಿದೆ ಎನ್ನವುದು ಅವರಿಗೆ ಗೊತ್ತಿದೆ. ರಾಮನಗರ ಜಿಲ್ಲೆಯಾದಾಗಲೇ ರೈತರ ಭೂಮಿಗೆ ಬೆಲೆ ಬಂದಿರಲಿಲ್ಲವೇ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.
ನನ್ನ ಜಮೀನಿಗೆ ಬೆಲೆ ಬರುತ್ತದೆ ಎಂದು ಅವರು ಹೇಳಿದ್ದಾರೆ. ಆ ಜಮೀನನ್ನು ಕೂಡ ಕಿತ್ತುಕೊಳ್ಳಲು ಕುತಂತ್ರ ಮಾಡಿದ್ದಾರೆ ಇವರು. 40 ವರ್ಷಗಳ ಹಿಂದೆ ಖರೀದಿ ಮಾಡಿದ ಜಮೀನಿಗೆ ಎಸ್ಐಟಿ ಅಂತ ರಚನೆ ಮಾಡಿಕೊಂಡು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನನಗೆ ಕಿರುಕುಳ ಕೊಡುತ್ತಿದ್ದಾರೆ. ಇದರ ವಿರುದ್ಧ ನಾನೂ ಕಾನೂನು ಹೋರಾಟ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವರು ಹೇಳ್ದರು.
ಇವರು ನನ್ನ ವಿರುದ್ಧ ಕಿರುಕುಳ, ಕುತಂತ್ರ ಮಾಡುತ್ತಿದ್ದಾರೆ. ಹೀಗೆಯೇ ಅವರು ಮಾಡುತ್ತಿರಲಿ, ಇವರು ಲೂಟಿ ಹೊಡೆದಿರುವ ಶೇ.50ರಷ್ಟು ಸರ್ಕಾರಿ ಭೂಮಿಗಳಿವೆ. ಇವರು ಏನೆಲ್ಲಾ ಅನ್ಯಾಯ, ಅಕ್ರಮ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಶಾಂತಿನಗರದ ದಲಿತರ ಜಾಗ ನುಂಗಿದ್ದು ಯಾರು? ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ನೀಡಲಾದ ಜಾಗ ನುಂಗಿದ್ದು ಯಾರು? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

✅ *ದಲಿತರ ಭೂಮಿ ಕಬಳಿಸಿದವರನ್ನು ಸಿದ್ದರಾಮಯ್ಯ ಜತೆಯಲ್ಲಿ ಇಟ್ಟುಕೊಂಡಿದ್ದಾರೆ?:*

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವಂದ್ವ ನೀತಿ ಬಗ್ಗೆ ಕಿಡಿಕಾರಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಸಿದ್ದಾರಾಮಯ್ಯ ಅವರು ತಾವು ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ದುರಂತವೆಂದರೆ, ದಲಿತರ ಭೂಮಿ ಕಬಳಿಸಿದವರನ್ನೇ ತಮ್ಮ ಜತೆಯಲ್ಲಿ ಇಟ್ಟುಕೊಂಡಿದ್ದಾರೆ! ಈಗ ನೋಡಿದರೆ ಅವರು ಮುಖ್ಯಮಂತ್ರಿ ಆಗಬೇಕು ಎಂದು ಹೊರಟಿದ್ದಾರೆ. ಇದು ಈ ಸರ್ಕಾರದಲ್ಲಿ ನಡೆಯುತ್ತಿರುವ ದಲಿತ ವಿರೋಧಿ ನೀತಿ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು