ಇತ್ತೀಚಿನ ಸುದ್ದಿ
ನ್ಯೂ ಬೆರ್ರಿ ಎನ್ ಕ್ಲೇವ್: ಪ್ರಸಿದ್ಧ ಕಟ್ಟಡ ನಿರ್ಮಾಣ ಸಂಸ್ಥೆ ‘ನಿಧಿಲ್ಯಾಂಡ್’ ಸಂಸ್ಥೆಯ ನೂತನ ಕಚೇರಿ ಉದ್ಘಾಟನೆ
24/01/2023, 11:04

ಮಂಗಳೂರು(reporterkarnataka.com): ನಗರದ ಪ್ರಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆ ನಿಧಿಲ್ಯಾಂಡ್ ಇದರ ನೂತನ ಕಚೇರಿ ಬಿಜೈ, ಕುಂಟಿಕಾನ ಬಳಿ ಇರುವ, ನ್ಯೂ ಬೆರ್ರಿ ಎನ್‌ಕ್ಲೇವ್ ನ 5ನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತು.
ದೀಪ ಪ್ರಜ್ವಲನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ವೈ.ಭರತ್ ಶೆಟ್ಟಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಗೃಹ ನಿರ್ಮಾಣ, ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ಕೆಲವೊಂದು ಸಮಸ್ಯೆ ಗಳಿವೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಈಗಾಗಲೇ ಸಿಂಗಲ್ ವಿಂಡೋ ಸಿಸ್ಟಮ್ ಅನ್ನು ಜಾರಿಗೆ ತಂದು ಅವುಗಳ ಮೂಲಕ ಸಮಸ್ಯೆ ಪರಿಹರಿಸುವ ಕೆಲವು ಮಹತ್ವದ ನಿರ್ಧಾರ ಗಳನ್ನು ತೆಗೆದುಕೊಂಡಿದೆ. ಮುಂದಕ್ಕೆ ಇನ್ನಷ್ಟು ಉತ್ತಮ ರೀತಿಯಲ್ಲಿ ಸಹಾಯ ಮಾಡಲಿದೆ ಎಂದರು.
ನಿಧಿ ಲ್ಯಾಂಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕೆ . ಸನಿಲ್ ಅವರು ಅತಿಥಿಗಳನ್ನು ಸ್ವಾಗತಿಸುತ್ತಾ, ತಮ್ಮ ಸಂಸ್ಥೆ ಬೆಳೆದು ಬಂದ ಬಗ್ಗೆ ವಿವರಿಸುತ್ತಾ ಕಳೆದ 10 ವರ್ಷಗಳಿಂದ ಸುಮಾರು 10 ಬಹು ಮಹಡಿಗಳ ಕಟ್ಟಡಗಳ ನಿರ್ಮಾಣ ಮಾಡಿದೆ. ಇದರಲ್ಲಿ ನನ್ನ ಪಾತ್ರ ಕಡಿಮೆ ಇದ್ದು ನನ್ನ ಸಹೋದ್ಯೋಗಿಗಳ ಪಾತ್ರವೇ ಅಧಿಕ. ಅವರ ಪರಿಶ್ರಮದಿಂದ ಸಂಸ್ಥೆ ಈ ಹಂತಕ್ಕೆ ಬೆಳೆದಿದೆ ಎಂದರು.
ಸಮಾರಂಭದಲ್ಲಿ ಅತಿಥಿಗಳಾಗಿ ಮಂಗಳೂರು ಬ್ರಹ್ಮ ಕುಮಾರಿ ಸಂಸ್ಥೆಯ ಮುಖ್ಯಸ್ಥರಾದ ರಾಜಯೋಗಿನಿ ಬಿ.ಕೆ. ವಿಶ್ವೇಶ್ವರಿಜಿ ಅವರು ಸಾನಿಧ್ಯವನ್ನು ವಹಿಸಿದ್ದು, ಮಾಜಿ ಶಾಸಕ ಜೆ. ಆರ್.ಲೋಬೋ, ಪ್ರೇಮಾನಂದ ಶೆಟ್ಟಿ(ಮಾಜಿ ಮಹಾ ಪೌರರು), ರವಿಶಂಕರ್ ಮಿಜಾರ್, (ಅದ್ಯಕ್ಷರು, ಮೂಡ), ಮಾಜಿ ಕಾರ್ಪೊರೇಟರ್ ಲ್ಯಾನ್ಸ್ ಲಾಟ್ ಪಿಂಟೊ, ಸಿ. ಎ.ಶಾಂತಾರಾಮ ಶೆಟ್ಟಿ, ಪ್ರಕಾಶ್ ಇಲಂತಿಲ (ಸಿಇಒ ಹೊಸದಿಗಂತ), ಕ್ರೆಡೈ ಅಧ್ಯಕ್ಷ ಪುಷ್ಪರಾಜ ಜೈನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.