9:07 PM Friday23 - January 2026
ಬ್ರೇಕಿಂಗ್ ನ್ಯೂಸ್
ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು

ಇತ್ತೀಚಿನ ಸುದ್ದಿ

ನೀರುಮಾರ್ಗ: ಮೊಡಂಕಾಪು ಕಾರ್ಮೆಲ್ ಕಾಲೇಜಿನ 7 ದಿನಗಳ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

17/01/2023, 21:27

ಚಿತ್ರ/ವರದಿ :ಅನುಷ್ ಪಂಡಿತ್ ಮಂಗಳೂರು
ಬಂಟ್ವಾಳ(reporterkarnataka.com): ಮೊಡಂಕಾಪು ಕಾರ್ಮೆಲ್ ಕಾಲೇಜು ಇದರ 7 ದಿನಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೀರುಮಾರ್ಗ ಸಂತ ಲಿಗೋರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.


ಶಿಬಿರವನ್ನು ಮಂಗಳೂರು ಸಿಟಿ ಟ್ರಾಫಿಕ್ ಎಸಿಪಿ ಗೀತಾ ಕುಲಕರ್ಣಿ ಉದ್ಘಾಟಿದರು.

ಅವರು ಮಾತನಾಡಿ ಈ 7 ದಿನಗಳ ರಾ. ಸೆ. ಯೋ ಶಿಬಿರದಲ್ಲಿ ಶಿಬಿರಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಉದ್ಯೋಗ ಆರಿಸು ವಂತೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ಮಂಗಳೂರಿನ ಜನತೆ ಬುದ್ದಿವಂತರು, ಅತೀ ವಿನಯ ಉಳ್ಳವರು ಸಂಬಂಧಗಳಿಗೆ ಬೆಲೆ ಕೊಡುವಂತವರು ಇಷ್ಟೆಲ್ಲ ಗುಣವನ್ನು ಬೆಳೆಸಿಕೊಂಡವರು ಸರ್ಕಾರಿ ನೌಕರಿಯಲ್ಲಿ ಮಾತ್ರ ಹಿಂದೇಟು ಹಾಕುತ್ತಿದ್ದಾರೆ, ಪೊಲೀಸ್ ಇಲಾಖೆ ಹಾಗೂ ಇನ್ನಿತರ ಇಲಾಖೆಗಳಿಗೆ ಸೇರಿ ತಮ್ಮ ಸೇವೆಯನ್ನು ಸಮಾಜಕ್ಕೆ ನೀಡಿ, ರಾಸೆಯೋ ಸೇವಾ ಯೋಜನೆಯಿಂದಲೇ ಶಿಸ್ತು ಸಮಯ ಪಾಲನೆ ಬೆಳಿಸಿಕೊಂಡು ಪೊಲೀಸ್ ಇಲಾಖೆಗೆ ಸೇರಿ ಎಂದು ಅವರು ಕರೆ ನೀಡಿದರು.
ಪ್ರತಿನಿತ್ಯ ಪತ್ರಿಕೆ ಓದುವ ಹವ್ಯಾಸ ರೂಡಿಸಿಕೊಳ್ಳಿ. ಅನೇಕ ಉದ್ಯೋಗ ಮಾಹಿತಿ ದೊರೆಯುತ್ತದೆ. ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮ ಪಾಲಿಸಿ ನಿಮ್ಮ ಅಮೂಲ್ಯ ಜೀವವನ್ನು, ಉತ್ತಮ ಆರೋಗ್ಯ ಗುಣಮಟ್ಟ ಕಾಪಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ನೀರುಮಾರ್ಗ ಶ್ರಮಿಕ ಸಂತ ಜೋಸೆಫರ ದೇವಾಲಯದ ಧರ್ಮಗಳು ರೇ. ಫಾ. ಅನಿಲ್ ಕೆನ್ಯೂಟ್ ಡಿಮೇಲ್ಲೋ ಶಿಬಿರಾರ್ಥಿಗಳಿಗೆ ಆಶೀವಾಚನ ನೀಡಿದರು.

ಸಿಸ್ಟರ್. ಡಾ. ಲತಾ ಫೆರ್ನಾಂಡಿಸ್ ಎ. ಸಿ. ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಶಿಬಿರದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳಿಸಿ, ನಿಮ್ಮಲ್ಲಿರುವ ಕೌಶಲ್ಯಗಳನ್ನು ಹೊರತನ್ನಿ ಎಂದರು.
ಹಣದ ಶ್ರೀಮಂತಿಕೆ ಶಾಶ್ವತವಲ್ಲ ಪ್ರತಿಭೆಯ ಶ್ರೀಮಂತಿಕೆ ಶಾಶ್ವತ. ಶಿಬಿರದ ಸದುಪಯೋಗಪಡೆದು ಕೊಳ್ಳಿ ಎಂದು ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಧನವಂತಿ ವೇಣುಗೋಪಾಲ್, ಸಂತ ಲೆಗೋರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮೋಲಿ ಎಫ್ ಕ್ರ್ಯಾಸ್ತ, ಅಡ್ಯಾರ್ ಪದವು ದಾರು ಸ್ಸಲಾಂ ಮದ್ರಸ ಮುಖ್ಯೋಪಾಧ್ಯಾಯ ಅಬ್ದುಲ್ ಸತ್ತಾರ್ ಸಖಾಫಿ, ಶ್ರಮಿಕ ಸಂತ ಜೋಸೆಫರ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಪ್ರಾನ್ಸಿಸ್ ಗೊನ್ಸಾಲ್ವಿಸ್, ಅಡ್ಯಾರ್ ಪದವು ಹೋಲಿ ಕ್ರಾಸ್ ಕಾನ್ವೆಂಟ್ ಸುಪಿರಿಯರ್ ವಂ.ಭ.ಸುಜಾತ, ಡೆಸಾ, ಯೋಜನಾಧಿಕಾರಿ ಕೀರ್ತನ್ ಜಿ.ನಾಯ್ಕ್, ಸಹ ಯೋಜನಾಧಿಕಾರಿ ವಿಜೇತ
ಕುಲಾಲ್ ಹಾಗೂ ಶಿಕ್ಷಕವೃಂದ, ಸ್ವಯಂ ಸೇವಕ, ಸೇವಕಿ ನಾಯಕರುಗಳಾದ ಅಕ್ಷಿತ್ ಪೂಜಾರಿ, ಆಸಿಯಾ ಉಪಸ್ಥಿತರಿದ್ದರು.


ಸ್ವಯಂ ಸೇವಕಿಯರಿಂದ ಸ್ವಾಗತ ನೃತ್ಯ ಹಾಗೂ ಪ್ರಾರ್ಥನಾ ಗೀತೆ ಮೊಳಗಿತು.

ಇತ್ತೀಚಿನ ಸುದ್ದಿ

ಜಾಹೀರಾತು