ಇತ್ತೀಚಿನ ಸುದ್ದಿ
ಎನ್ ಸಿಸಿ: ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿನಿ ಗೌತಮಿ ಪೂಜಾರಿ ರಾಷ್ಟ್ರಮಟ್ಟದಲ್ಲಿ ಸಾಧನೆ
09/08/2023, 16:27
ಮಂಗಳೂರು(reporterkarnataka.com): ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ದ್ವಿತೀಯ ಕಲಾ ಪದವಿಯ ವಿದ್ಯಾರ್ಥಿನಿ, ಎನ್.ಸಿ.ಸಿ ಭೂದಳದ ಗೌತಮಿ ಪೂಜಾರಿ ಕೇರಳದ ತಿರುವನಂತಪುರದಲ್ಲಿ ಜುಲೈ 1ರಿಂದ 15 ರವರೆಗೆ ನಡೆದ ಅಖಿಲ ಭಾರತ ಮಟ್ಟದ ಕ್ರೀಡಾ ಶೂಟಿಂಗ್ ಸ್ಪರ್ಧೆಯಲ್ಲಿ ಎನ್.ಸಿ.ಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದಾರೆ.
ಇವರು ಪ್ರತಿನಿಧಿಸಿದ ನಿರ್ದೇಶನಾಲಯವು ಇಂಟರ್ ಡೈರಕ್ಟರೇಟ್ ಸ್ಪೋರ್ಟ್ಸ್ ಶೂಟಿಂಗ್ ಕಾಂಪಿಟೀಶನ್ (IDSSC- 2023) ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ವಿಜೇತ ತಂಡವನ್ನು ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಇತ್ತೀಚೆಗೆ ರಾಜಭವನದಲ್ಲಿ ಅಭಿನಂದಿಸಿದರು. ಕಾಲೇಜಿನ ಕೀರ್ತಿಪತಾಕೆಯನ್ನು ಎತ್ತರಕ್ಕೇರಿಸಿದ ವಿದ್ಯಾರ್ಥಿನಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.