ಇತ್ತೀಚಿನ ಸುದ್ದಿ
ನಾಯಕನಲ್ಲಿ ನಾಯಕತ್ವ ಗುಣ ಇರಬೇಕು; ಎನ್ನೆಸ್ಸೆಸ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸುತ್ತದೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
21/09/2023, 21:45
ಚಿತ್ರ/ವರದಿ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ನಮ್ಮ ನಡುವೆ ಅನೇಕ ಲೀಡರ್ ಗಳು ಇದ್ದಾರೆ. ಆದರೆ ನಾಯಕತ್ವ ಗುಣ ಇರುವುದಿಲ್ಲ. ನಾಯಕನಾದ ವ್ಯಕ್ತಿಯಲ್ಲಿ ನಾಯಕತ್ವ ಗುಣ ಇರಬೇಕು. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವವನ್ನು ಬೆಳೆಸುತ್ತದೆ ಎಂದು ಮಾಜಿ ಸೈನಿಕ,ರಾಜಕೀಯ ನಾಯಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಅವರು ನಗರದ ಎಸ್ ಡಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಮಂಗಳೂರು ನಗರ ಪೊಲೀಸ್ ಡಿಸಿಪಿ ದಿನೇಶ್ ಕುಮಾರ್ ಅವರು ಮಾತನಾಡಿ, ದುಶ್ಚಟಗಳಿಂದ ದೂರವಿರಿ. ನಿಮ್ಮ ಅಮೂಲ್ಯ ಕಾಲೇಜು ಜೀವನ ಹಾಳು ಮಾಡಿಕೊಳ್ಳಬೇಡಿ,ಮಾದಕ ವ್ಯಸನವನ್ನು ಮಂಗಳೂರು ನಗರ ದಿಂದ ತೊಡೆದು ಹಾಕಬೇಕು. ಮಂಗಳೂರನ್ನು ಮಾದಕ ವ್ಯಸನ ಮುಕ್ತ ಮಾಡಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಆದರೆ ನೀವು ಕೈ ಜೋಡಿಸಿದಾಗ ಮಾತ್ರ ಡ್ರಗ್ಸ್ ನ್ನು ಮಂಗಳೂರು ನಗರದಿಂದ ನಿರ್ಮೂಲನೆ ಮಾಡಬಹುದು ಎಂದರು.
ನಿಮ್ಮ ನಡುವೆ ಮಾದಕ ವ್ಯಸನಿಗಳಿದ್ದರೆ ಮಾಹಿತಿ ನೀಡಿ. ಅವರ ಜೀವನ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆಯನ್ನು ಪ್ರೊ. ಅರುಣಾ ಪಿ. ಕಾಮತ್ ವಹಿಸಿದ್ದರು.
ಹಳೆ ವಿದ್ಯಾರ್ಥಿ ಮೇಘರಾಜ್ ಎಂ.ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಜ್ಯೋತಿ, ಪ್ರವೀಣ್ ಡಿ, ವಿದ್ಯಾರ್ಥಿ ನಾಯಕರಾದ ಭವಿಷ್ ಕೆ. ಶೆಟ್ಟಿ, ವರ್ಷಿತಾ ಆಳ್ವಾ, ಕಾಲೇಜಿನ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.