ಇತ್ತೀಚಿನ ಸುದ್ದಿ
ನವೋದಯ – ನವ್ಯ ಸಮನ್ವಯಕಾರ: ಪ್ರಸಿದ್ಧ ಕವಿ, ಸಾಹಿತಿ ಡಾ. ಚೆನ್ನವೀರ ಕಣವಿ ವಿಧಿವಶ
16/02/2022, 11:27
ಬೆಂಗಳೂರು(reporterkarnataka.com): ಹಿರಿಯ ಸಾಹಿತಿ, ಕವಿ, ನಾಡೋಜ ಪ್ರಶಸ್ತಿ ವಿಜೇತ
ಡಾ.ಚೆನ್ನವೀರ ಕಣವಿ ಅವರು ವಿಧಿವಶರಾಗಿದ್ದಾರೆ.’ಸಮನ್ವಯ ಕವಿ’ ಎಂದೇ ಹೆಸರಾಗಿದ್ದ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.