1:31 AM Monday16 - February 2026
ಬ್ರೇಕಿಂಗ್ ನ್ಯೂಸ್
ಪ್ರೇಮಿಗಳ ದಿನಾಚರಣೆಯ ಎಫೆಕ್ಟ್ ?: ಪ್ರೇಮ ನಿವೇದನೆ ಒಪ್ಪಿಕೊಳ್ಳದ ಯುವತಿಗೆ ಬಿಯರ್ ಬಾಟ್ಲಿಯಿಂದ… ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ: 3 ಮಂದಿ ಆರೋಪಿಗಳಿಗೆ ಗಲ್ಲು ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ: ವಿಶೇಷ ಪೂಜೆ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ… ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ… ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್ ಕೊಡಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್: ಮಡಿಕೇರಿ ಸಮೀಪ ರೆಸಾರ್ಟ್ ಉದ್ಘಾಟನೆ ಸೋಮವಾರಪೇಟೆ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು,…

ಇತ್ತೀಚಿನ ಸುದ್ದಿ

ಇಂದು ‘ರಾಷ್ಟ್ರೀಯ ಪ್ರವಾಸೋದ್ಯಮ ದಿನ’:ಪ್ರವಾಸ ಅಂದ್ರೆ ಬರೇ ಮೋಜು ಮಸ್ತಿಯೇ? ಅಲ್ಲ, ಶಾಂತಿ ಅಭಿಯಾನವೇ ?

25/01/2022, 09:48

ಪ್ರವಾಸ ಎಂದ ತಕ್ಷಣ ಎಲ್ಲರ ಮೈ ಮನ ಅರಳುವುದು, ಪುಳಕಿತಗೊಳ್ಳುವುದು. ಉಲ್ಲಾಸಭರಿತವಾಗುವುದು. ಪ್ರವಾಸ ಎಂದರೆ ಯಾರಿಗೆ ತಾನೇ  ಇಷ್ಟ ಇಲ್ಲ ಹೇಳಿ..?

ಪ್ರವಾಸಕ್ಕೆ ಹೊರಡುವ ಹತ್ತು ದಿನ ಮೊದಲೇ ಹಲವಾರು ವಿಷಯಗಳು, ಘಟನೆಗಳು, ಕಲ್ಪನೆಗಳು, ಯೋಚನೆಗಳು ಮನದಲ್ಲಿ ಹಾದು ಹೋಗುತ್ತದೆ . ಪ್ರವಾಸಕ್ಕೆ ಹೋಗುವ ಹಿಂದಿನ ದಿನ ನಿದ್ದೆಯೇ ಬಾರದೇ ಯಾವಾಗ ಬೆಳಗಾಗುತ್ತದೆ ಎಂದು ಕಾಯುವ ತವಕ ಎಲ್ಲರಲ್ಲೂ ಕಂಡು ಬರುತ್ತದೆ.

ಕಥೆ ಪುಸ್ತಕ, ಚಿತ್ರಗಳಲ್ಲಿ, ಪಾಠ ಪುಸ್ತಕಗಳಲ್ಲಿ ನೋಡಿದಂತಹ, ಕೇಳಿದಂತಹ ವಿಚಾರಗಳನ್ನು ಸ್ಥಳಗಳನ್ನು ಕಣ್ಣಾರೆ ನೋಡಿ ಅನುಭವಿಸಿದಾಗ ಉಂಟಾಗುವ ಆನಂದ ಹೇಳಲು ಅಸಾಧ್ಯ..

“ದೇಶ ಸುತ್ತಿ ನೋಡು ಕೋಶ ಓದಿ ನೋಡು ” ಎಂಬ ಮಾತಿನಂತೆ ಪುಸ್ತಕ ಓದುವುದರಿಂದ ಸಿಗುವ ಜ್ಞಾನಕ್ಕಿಂತ ಪ್ರವಾಸದಿಂದ ಪ್ರತ್ಯಕ್ಷ ಕಂಡಾಗ ಸಿಗುವ ಅನುಭವ ಇನ್ನೂ ಹೆಚ್ಚು.

ಸಂಘಜೀವಿಯಾದ ಮಾನವನಿಗೆ ತನ್ನ ದಿನನಿತ್ಯದ ಕೆಲಸ, ಜಂಜಾಟದಿಂದ ಸ್ವಲ್ಪಮಟ್ಟಿಗೆ ದೂರವಿದ್ದು ಮನಸ್ಸನ್ನು ಉಲ್ಲಾಸ ಗೊಳಿಸಲು ಪ್ರವಾಸ ಅತಿ ಅಗತ್ಯ ಶಾಲಾ ಮಕ್ಕಳು ನಾಲ್ಕು ಗೋಡೆಯ ನಡುವೆ ಪಡೆಯುವ ಶಿಕ್ಷಣದ ಜೊತೆಗೆ , ಅವರ ಜ್ಞಾನ ಬಲ ಮನೋಬಲವನ್ನು ವೃದ್ಧಿಸಲು, ಕಲಿಕೆಗೆ ಪೂರಕವಾದಂತಹ ವಾತಾವರಣವನ್ನು ಸೃಷ್ಟಿಸಲು ಪ್ರವಾಸ ಅತ್ಯಂತ ಸಹಕಾರಿ ಆಗಿರುತ್ತದೆ.

ಪ್ರವಾಸ ಎಂದರೆ ಕೇವಲ ಸುತ್ತಾಟ ಮೋಜು ಅಲ್ಲ.. ಪ್ರವಾಸದಿಂದ ಮಾನಸಿಕ ನೆಮ್ಮದಿ, ಜ್ಞಾನಾಭಿವೃದ್ಧಿ ಯಾಗುತ್ತದೆ. ಕಲೆ-ಸಂಸ್ಕೃತಿ, ಆಚಾರ-ವಿಚಾರ, ವೈವಿಧ್ಯತೆಗಳನ್ನು ವಿನಿಮಯ ಮಾಡಿಕೊಳ್ಳಲು ಉತ್ತಮ ಮಾರ್ಗ ವೂ ಆಗಿದೆ. ಮಾನಸಿಕ ನೆಮ್ಮದಿ , ಸಹಕಾರ ಮನೋಭಾವನೆ ,ಉಲ್ಲಾಸ ,ಒತ್ತಡ ನಿವಾರಣೆ , ಸಂತೋಷವನ್ನು ಪ್ರವಾಸದ ಅನುಭವ ನೀಡುತ್ತದೆ.. ಸಂಘಟನಾ ಕೌಶಲ ,ಹೊಂದಾಣಿಕೆ, ಧೈರ್ಯ,ಕಲಿಕೆಯಲ್ಲಿ ಆಸಕ್ತಿಯೂ ಪ್ರವಾಸದಿಂದ ಉಂಟಾಗುತ್ತದೆ.

ಭಾರತ ದೇಶವು ಹಲವಾರು ಪ್ರವಾಸಿ ತಾಣಗಳ ತವರೂರಾಗಿದೆ. ಜಲಪಾತಗಳು, ಶಿಲ್ಪಕಲೆ, ಧಾರ್ಮಿಕ-ಸಾಂಸ್ಕೃತಿಕ ಸಿರಿವಂತಿಕೆಗೆ ನೆಲೆಬೀಡಾದ ಅನೇಕ ಸ್ಥಳಗಳು  ಪ್ರವಾಸಿಗರನ್ನು  ಕೈಬೀಸಿ ಕರೆಯುತ್ತಿದೆ..

ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸೋದ್ಯಮವೆಂಬ ಸೇವಾ ವಲಯ ಕಾರ್ಯೋನ್ಮುಖವಾಗಿದೆ. ಪ್ರವಾಸೋದ್ಯಮವು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಲವಾರು ಮಂದಿಗೆ ಉದ್ಯೋಗವನ್ನು ಸೃಷ್ಟಿಸಿದೆ.

ಬೇರೆ ಬೇರೆ ಸಂಸ್ಕೃತಿ ಭಾಷೆ ಧರ್ಮಗಳ ಜನರನ್ನು ಒಟ್ಟುಗೂಡಿಸುವ ವೇದಿಕೆಯಾಗಿರುವ ಕಾರಣ ಪ್ರವಾಸೋದ್ಯಮವನ್ನು “ಶಾಂತಿ ಅಭಿಯಾನ” ಎಂದು ಹೇಳಲಾಗುತ್ತದೆ. ಭಾರತದಲ್ಲಿ ವಿವಿಧ ಪ್ರವಾಸೋದ್ಯಮ ಚಟುವಟಿಕೆಗಳ ಬಗ್ಗೆ  ಜನರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿವರ್ಷ ಜನವರಿ 25ನ್ನು  “ರಾಷ್ಟ್ರೀಯ ಪ್ರವಾಸೋದ್ಯಮ ದಿನ”ವನ್ನಾಗಿ ಆಚರಿಸಲಾಗುತ್ತದೆ.

ಇತ್ತೀಚೆಗೆ ಕೊರೋನಾ ದಿಂದಾಗಿ ಜನರು ಪ್ರವಾಸ ಹೋಗುವುದು ಸ್ವಲ್ಪಮಟ್ಟಿಗೆ ಕಡಿಮೆಯಾಗಿರುವ ಕಾರಣ ಪ್ರವಾಸೋದ್ಯಮವೂ ಆರ್ಥಿಕ ಕುಸಿತವನ್ನು ಕಂಡಿರುವುದು ಸತ್ಯ. ಏನೇ ಇರಲಿ ಮಾನವನಿಗೆ ತನ್ನ ದಿನನಿತ್ಯದ ಒತ್ತಡಗಳನ್ನು ದೂರ ಮಾಡಿ ಮನೋಲ್ಲಾಸ, ಹೊಸ ಚೈತನ್ಯವನ್ನು ಮೂಡಿಸಲು ಪ್ರವಾಸವು ಉತ್ತಮವಾದ ಮಾರ್ಗವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು