ಇತ್ತೀಚಿನ ಸುದ್ದಿ
ನ್ಯಾಷನಲ್ ಕಬ್ಬಡಿ ಆಟಗಾರ ವಿನೋದ್ ರಾಜ್ ಅರಸ್ ನೇಣಿಗೆ ಶರಣು: ಮದುವೆಯಾಗಿ ತಿಂಗಳು ಉರುಳುವ ಮುನ್ನವೇ ಆತ್ಮಹತ್ಯೆ
06/02/2024, 12:51
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ನ್ಯಾಷನಲ್ ಕಬ್ಬಡಿ ಆಟಗಾರ ವಿನೋದ್ ರಾಜ್ ಅರಸ್ ಅವರು ನೇಣಿಗೆ ಶರಣಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಮದುವೆಯಾಗಿ ತಿಂಗಳು ಉರುಳುವ ಮುನ್ನವೇ ಪತ್ನಿ ಬಿಟ್ಟು ಹೋದ ಹಿನ್ನೆಲೆಯಲ್ಲಿ ನೊಂದು ವಿನೋದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿನೋದ್ ರಾಜ್ ಅರಸ್ ಅವರು ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ರಾತ್ರಿ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ವಿನೋದ್ ಅವರ ವಿವಾಹ 2023 ಡಿ.10ರಂದು ನಡೆದಿತ್ತು. ಡಿ.31ಕ್ಕೆ ಪತಿ ಬೇಡ ಎಂದು ಪತ್ನಿ ಬಿಟ್ಟು ಹೋಗಿದ್ದರು. ಅಂದೇ ವಿವಾದ ಮಹಿಳಾ ಪೊಲೀಸ್ ಠಾಣಾ ಮೆಟ್ಟೀಲೇರಿತ್ತು. ವಿನೋದ್ ಅವರು ಎರಡು ವರ್ಷ ಪ್ರೀತಿಸಿ ಪ್ರೇಮ ವಿವಾಹವಾಗಿದ್ದರು.