5:26 AM Saturday4 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ನಟನೆ, ಗಾಯನ, ನೃತ್ಯದಲ್ಲಿ ಎತ್ತಿದ ಕೈ: ತುಳು ಕುವರಿ 11ರ ಹರೆಯದ ತೀರ್ಥ ಪೊಳಲಿ ಹುಲಿ ಕುಣಿತಕ್ಕೂ ಸೈ!

24/06/2021, 07:24

ಲತಾ ಎ. ಕಲ್ಲಡ್ಕ ಮಂಗಳೂರು

info.reporterkarnataka@gmail.com

ಆಕೆಗಿನ್ನೂ ಬರೇ 11ರ ಹರೆಯ. ಅರಳು ಹುರಿದಂತೆ ಮಾತನಾಡುವ ವಾಕ್ಚತುರ್ಯ. ನಟನೆ, ನೃತ್ಯ, ಗಾಯನ, ಛದ್ಮವೇಷ, ಏಕಪಾತ್ರ ಅಭಿನಯ, ಇಷ್ಟೇ ಅಲ್ಲದೆ ತುಳುನಾಡಿನ ಹೆಮ್ಮೆಯ ಹುಲಿ ಕಣಿತ… ಹೀಗೆ ಎಲ್ಲದರಲ್ಲೂ ಆಕೆ ಸೈ.


ಇವಳು ಬೇರೆ ಯಾರೂ ಅಲ್ಲ, ಮಂಗಳೂರು ಮತ್ತು ಬಂಟ್ವಾಳ ತಾಲೂಕಿಗೆ ಹೊಂದಿಕೊಂಡಿರುವ ಪೊಳಲಿಯ ಅಡ್ಡೂರು ಗ್ರಾಮದ ಪೊನ್ನೆಲದ ಪುತ್ರಿ ತೀರ್ಥ ಪೊಳಲಿ. 

ಈಕೆ ಪೊನ್ನೆಲದ ಕೃಷ್ಣ ಅಮೀನ್ ಹಾಗೂ ಪ್ರೇಮಾ ದಂಪತಿಯ ಮುದ್ದಿನ ಮಗಳು. ಗಂಜಿಮಠದ ರಾಜ್ ಅಕಾಡೆಮಿ ಸ್ಕೂಲ್ ನ 6ನೇ ತರಗತಿ ವಿದ್ಯಾರ್ಥಿನಿ.

‘ಪನೋಡ ಬೊಡ್ಚ’ ತುಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಈ ಪುಟ್ಟ ತಾರೆ, ತನ್ನ ಅಭಿನಯದ ಮೂಲಕ ತುಳುವರ ಮನ ಗೆದ್ದಿದ್ದಾಳೆ. ಸರಕಾರಿ ಪ್ರಾಥಮಿಕ ಶಾಲೆ ಕರಂಬಾರ್ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾಳೆ. ಯಕ್ಷಗಾನ, ನಾಟಕ, ರೂಪಕ, ಗೀತಗಾಯನ ಎಲ್ಲದರಲ್ಲೂ ತೀರ್ಥ ತನ್ನ ಕೈಚಳಕ ಪ್ರದರ್ಶಿಸುತ್ತಾಳೆ. ಕಾರ್ಯಕ್ರಮಗಳಲ್ಲಿ ಒಳ್ಳೆಯ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾಳೆ. ಹೆಸರಿನ ಮುಂದೆ ವಿಜೆ ಅಂತ ಹಾಕಿಸಿಕೊಳ್ಳಬೇಕೆಂಬ ಆಕೆಯ ಕನಸು ಕೂಡ ನನಸಾಗಿದೆ. ಖಾಸಗಿ ವಾಹಿನಿಯೊಂದರಲ್ಲಿ ‘ವೀಕೆಂಡ್ ವಿತ್ ಮಿ’ ಎಂಬ ಕಾರ್ಯಕ್ರಮವನ್ನು ಕೂಡ ನಡೆಸಿಕೊಡುತ್ತಿದ್ದಳು. ತುಳು ಸಭೆ – ಸಮಾರಂಭವನ್ನು ಚೆನ್ನಾಗಿ ನಿರೂಪಣೆ ಮಾಡುವ ಅದ್ಭುತ ಶಕ್ತಿ ಆಕೆಯಲ್ಲಿದೆ. ಮುಂಬೈಯಲ್ಲಿ ತೀರ್ಥಳ ಕಾರ್ಯಕ್ರಮಕ್ಕೆ ಅಪಾರ ಜನಮನ್ನಣೆ ದೊರೆತಿದೆ.

ಪ್ರತಿಭೆಗೆ ತಕ್ಕಂತೆ ನಾನಾ ಪ್ರಶಸ್ತಿಗಳು ತೀರ್ಥಳನ್ನು ಅರಸಿ ಬಂದಿವೆ.
ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ, ತುಳು ಕುವರಿ, ಸೌರಭ ರತ್ನ, ಕೊಂಡಾಟದ ಬಾಲೆ ಮುಂತಾದ ಪ್ರಶಸ್ತಿಗಳು ಬಂದಿವೆ. ಮಂಗಳೂರು ಆಕಾಶವಾಣಿ, ಉಡುಪಿಯ ಸ್ಪಂದನಾ ಟಿವಿ, ನಮ್ಮ ಕುಡ್ಲ ವಾಹಿನಿಯಲ್ಲಿ ಅತಿಥಿ ಕಲಾವಿದೆಯಾಗಿ ಭಾಗವಹಿಸಿದ್ದಾಳೆ. ಬಹುಮುಖ ಪ್ರತಿಭೆಯ ತೀರ್ಥಳಿಗೆ ಈ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಭವಿಷ್ಯದಲ್ಲಿ ಪೈಲಟ್ ಆಗುವ ಕನಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು