2:46 AM Friday4 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ನಸೀಬ್ ಏರೆಗುಂಡು ಏರೆಗಿಜ್ಜಿ’ ತುಳು ಸಿನಿಮಾ ಬಿಡುಗಡೆ: ಕೊಂಕಣಿಯಿಂದ ಪ್ರಥಮ ಬಾರಿಗೆ ಡಬ್ಬಿಂಗ್

04/09/2021, 18:32

ಮಂಗಳೂರು(reporterkarnataka.com) : ಕ್ಯಾಮ್ ಫಿಲ್ಮ್ ಅರ್ಪಿಸುವ ಪ್ರೆಸ್ಟನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ತಯಾರಾದ ಹೆನ್ರಿ ಡಿ ಸಿಲ್ವ ನಿರ್ಮಿಸಿದ ಹ್ಯಾರಿ ಫೆರ್ನಾಂಡಿಸ್ ನಿರ್ದೇಶಿಸಿದ ನಶೀಬಾಚೊ ಖೆಳ್ ಕೊಂಕಣಿ ಚಲನಚಿತ್ರವು ಈಗ ‘ನಸೀಬ್ ಏರೆಗುಂಡು ಏರೆಗಿಜ್ಜಿ ಹೆಸರಿನಲ್ಲಿ ತುಳು ಸಿನಿಮಾ ಆಗಿ ಡಬ್ಬಿಂಗ್ ಆಗಿದೆ.  ಈ ತುಳು ಸಿನಿಮಾ ಸೆಪ್ಟೆಂಬರ್ ೮ ರಂದು ಗಿ೪ ಸ್ಟ್ರೀಮ್‌ನಲ್ಲಿ ಬಿಡುಗಡೆಗೊಳ್ಳಲಿದೆ.

ಸಿನಿಮಾದ ನಿರ್ಮಾಪಕ ಹೆನ್ರಿ ಡಿ ಸಿಲ್ವ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕೊಂಕಣಿ ಭಾಷೆಯಲ್ಲಿ ತಯಾರಾದ ಸಿನಿಮಾವೊಂದು ತುಳು ಭಾಷೆಗೆ ಡಬ್ಬಿಂಗ್ ಮಾಡಲಾದ ಪ್ರಪ್ರಥಮ ಸಿನಿಮಾ ಇದಾಗಿದೆ.

ಸುಮಾರು ೩೫ ವರ್ಷಗಳ ಹಿಂದೆ ಹೆನ್ರಿ ಡಿ ಸಿಲ್ವರವರು ರಚಿಸಿದ ‘ಕಾಜಾರಾಚೆ ಉತಾರ್  ಎಂಬ ನಾಟಕದ ಮೂಲ ಕಥೆಯನ್ನಾಧರಿಸಿ  ಮತ್ತು ಇದನ್ನು ಆಧುನಿಕತೆಗನುಗುಣವಾಗಿ ಚಲನಚಿತ್ರವಾಗಿ ತೆರೆಗೆ ಬಂದಿದೆ. ದೇವರು  ಪ್ರತಿಯೊಬ್ಬನಿಗೂ ಅವನ ಬದುಕಿಗಾಗಿ ವಿವಿಧ ಕಲೆಗಳನ್ನು ನೀಡಿರುತ್ತಾನೆ. ಆದರೆ ಅದನ್ನು  ಕಾರ್ಯರೂಪಕ್ಕೆ  ತರುವುದು ನಮ್ಮೆಲ್ಲರ ಹೊಣೆಯಾಗಿದೆ. ಒಂದು ಬಡ ಕುಟುಂಬದಲ್ಲಿ ಜನಿಸಿದ ಹುಡುಗ ಕಷ್ಟಪಟ್ಟು ಕಲಿತು ಉನ್ನತ ಹುದ್ದೆಯಲ್ಲಿದ್ದು ಶ್ರೀಮಂತರ ಮನೆಯ ಹುಡುಗಿಯನ್ನು ಮದುವೆಯಾಗುತ್ತಾನೋ  ಅಥವಾ ತನ್ನ ತಾಯಿ ಸಾಕಿದ ಮಗಳನ್ನೇ ಮದುವೆಯಾಗುತ್ತಾನೋ ಎನ್ನುವುದು ಇದರಲ್ಲಿರುವ ಕಥೆಯಾದರೆ ಇದರ ಒಳಗಿನ ಗುಟ್ಟು ಬೇರೆಯೇ ಇರುತ್ತದೆ.

ಹ್ಯಾರಿ ಫೆರ್ನಾಂಡಿಸ್ ನಿರ್ದೇಶಿಸಿದ ಈ ಚಲನ ಚಿತ್ರಕ್ಕೆ ಶಕ್ತಿ ನಗರದ ಕಲಾಂಗಣ, ಬಲ್ಮಠ, ಬೊಂದೇಲ್, ಉಡುಪಿ ಜಿಲ್ಲೆಯ ಬಾರ್ಕೂರ್, ಸಾಸ್ತಾನದಲ್ಲಿ ಚಿತ್ರೀಕರಣಗೊಂಡಿದೆ. ಉತ್ತಮ ಹಾಸ್ಯ ಮತ್ತು ಉತ್ತಮ ಕಥಾ ಹಂದರವನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಎಲ್ಬೆನ್ ಮಸ್ಕರೇನಸ್ , ಎಸ್ತೇರ್ ನೊರೊನ್ಹಾ, ರಂಜಿತ ಊವಿಸ್ ಸಾಸ್ತಾನ, ಪ್ರಿನ್ಸ್ ಜಾಕೋಬ್ ಗೋವಾ, ಸ್ಟೇನಿ ಅಲ್ಬಾಂಸ್, ಸುಜಾತ ಅಂದ್ರಾದೆ, ಗ್ಯಾಲ್ವಿನ್ ಫೆರ್ನಾಂಡಿಸ್ ಮೊದಲಾದವರಿದ್ದಾರೆ. 

ಈ ಸಿನಿಮಾ ಕೊಂಕಣಿಯಲ್ಲಿ ೨೦೧೬ ರಲ್ಲಿ ನಶೀಬಾಚೊ ಖೆಳ್  ಎಂಬುದಾಗಿ ಕೊಂಕಣಿಯಲ್ಲಿ ತೆರೆ ಕಂಡಿದೆ. ಸುಮಾರು ೨ ಲಕ್ಷ  ಕೊಂಕಣಿಗರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಕೆನಡಾ, ಅಮೇರಿಕಾ, ಆಸ್ಟೇಲಿಯಾ, ಲಂಡನ್, ಇಸ್ರೇಲ್ ಮೊದಲಾದ ದೇಶಗಳಲ್ಲಿ ಸಿನಿಮಾ ತೆರೆ ಕಂಡಿದೆ. ಈಗ ತುಳುವಿಗೆ ಈ ಸಿನಿಮಾ ಡಬ್ ಆಗಿ ನಸೀಬ್ ಏರೆಗುಂಡು ಏರೆಗಿಜ್ಜಿ ಹೆಸರಿನಲ್ಲಿ ತೆರೆಕಾಣುತ್ತಿದೆ. 

ಪತ್ರಿಕಾಗೋಷ್ಠಿಯಲ್ಲಿ ಜ್ವಾನ್ ಎಂ. ಪೆರ್ಮನ್ನೂರು, ಲಕ್ಷ್ಮಣ್ ಕುಂದರ್, ಕ್ಯಾನೂಟ್ ಪಿಂಟೊ ಉಪಸ್ಥಿತರಿದ್ದರು.

                                               

ಇತ್ತೀಚಿನ ಸುದ್ದಿ

ಜಾಹೀರಾತು