10:10 PM Saturday4 - April 2026
ಬ್ರೇಕಿಂಗ್ ನ್ಯೂಸ್
ಅಡಿಕೆಯೊಳಗಿದ್ದ ಸ್ಫೋಟಕ ಸಿಡಿದು ಮಹಿಳೆಗೆ ಗಾಯ: ಅಡಿಕೆಯಲ್ಲಿ ಇದ್ದಿದ್ದಾದರೂ ಏನು..? ಪ್ರಕರಣದ ಸತ್ಯಾಂಶ… ನಂಜನಗೂಡು: ಶ್ರದ್ಧಾ ಭಕ್ತಿಯಿಂದ ನಡೆದ ಪುರಾಣ ಪ್ರಸಿದ್ಧ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ… ದ್ವೇಷ ಬಿತ್ತಬೇಡಿ, ಅಭಿವೃದ್ಧಿ ನೋಡಿ: ಉಪ ಚುನಾವಣಾ ಪ್ರಚಾರದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ Bangalore | ರಿಕ್ಕಿ ರೈ ಲ್ಯಾಂಬೋರ್ಗಿನಿ ಕಾರು ಸೀಜ್: 35 ಲಕ್ಷ ದಂಡ ರಾಜ್ಯದ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಬದಲಾವಣೆ ಸಾಧ್ಯತೆ: ಗೃಹ ಸಚಿವ ಡಾ. ಪರಮೇಶ್ವರ್ ವಾರ್ ಎಫೆಕ್ಟ್‌‌ | ಇವಿಗೆ ಹೆಚ್ಚಿದ ಡಿಮ್ಯಾಂಡ್: ತಿಂಗಳಲ್ಲಿ 29 ಸಾವಿರಕ್ಕೂ ಅಧಿಕ… ಗೋಪಾಲಪುರದ ಸಂತ ಅಂತೋಣಿ ಚರ್ಚ್ ನಲ್ಲಿ ಗುಡ್ ಫ್ರೈಡೆಯನ್ನು ಶಿಲುಬೆಟ್ಟದಲ್ಲಿ ಶ್ರದ್ದಾ ಭಕ್ತಿಯಿಂದ… ವಿರಾಜಪೇಟೆಯಲ್ಲಿ ಸಂಭ್ರಮದ ಹನುಮ ಜಯಂತಿ ಆಚರಣೆ: ಸಹಸ್ರಾರು ಸಂಖ್ಯೆಯಲ್ಲಿ ಸಮಾಗಮ ಪಾಟೀಲ್ – ಯತ್ನಾಳ್ ವಾಕ್ಸಮರ | ಒಂದು ದಿನ ಅವರೇ ಅಪ್ಪ-ಮಕ್ಕಳನ್ನು ಕೈಬಿಟ್ಟು… ದಾವಣಗೆರೆ ಉಪ ಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌

ಇತ್ತೀಚಿನ ಸುದ್ದಿ

ನಂಜನಗೂಡು: ಶ್ರದ್ಧಾ ಭಕ್ತಿಯಿಂದ ನಡೆದ ಪುರಾಣ ಪ್ರಸಿದ್ಧ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಜಾತ್ರಾ ಮಹೋತ್ಸವ

04/04/2026, 21:59

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ದೊಡ್ಡ ಜಾತ್ರೆ ಮುಗಿದ ಬೆನ್ನಲ್ಲೇ ಅದೇ ದೇವಾಲಯದ ಆಡಳಿತಕ್ಕೆ ಒಳಪಟ್ಟ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಅವರ ಜಾತ್ರಾ ಮಹೋತ್ಸವವು ಇಂದು ಬೆಳಗ್ಗೆ 7:03 ರಿಂದ 7:26 ಗಂಟೆಯೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಶ್ರೀ ಅವರ ರತಾರೋಹಣವು ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.


ಚಿನ್ನಾಭರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾದ ಶ್ರೀ ಆಂಡಾಳಮ್ಮ ಮತ್ತು ಶ್ರೀ ಅರವಿಂದ ನಾಯಕಿ ಅಮ್ಮನವರ ಸಮೇತ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಅವರ ಉತ್ಸವ ಮೂರ್ತಿಗಳನ್ನು ದೇವಾಲಯದ ಪ್ರಾಂಗಣದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ಮಂಗಳ ವಾದ್ಯಗಳೊಂದಿಗೆ ದೇವಾಲಯದ ಹಾಗೂ ರಥದ ಸುತ್ತ ಮೆರವಣಿಗೆ ತಂದ ಉತ್ಸವ ಮೂರ್ತಿಗಳನ್ನು ಬಣ್ಣ ಬಣ್ಣದ ಹೂವು ಹಾಗೂ ಬಂಟಿಂಗ್ಸ್ ಮತ್ತು ದೊಡ್ಡ ದೊಡ್ಡ ಬಾವುಟಗಳಿಂದ ಅಲಂಕರಿಸಲಾಗಿದ್ದ ದೊಡ್ಡ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮತ್ತು ಲಕ್ಷ್ಮಿಕಾಂತ ಸ್ವಾಮೀ ದೇವಾಲಯದ ಪಾರುಪತ್ತೆಗಾರ ಜಯರಾಮ್ ಸೇರಿದಂತೆ ಮತ್ತಿತರ ಪ್ರಮುಖರು ರಥಕ್ಕೆ ಪೂಜೆ ಸಲ್ಲಿಸಿ ಚಕ್ರಗಳಿಗೆ ಈಡುಗಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ವಿಪ್ರರ ವೇದಘೋಷ ಹಾಗೂ ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ಶ್ರೀ ಲಕ್ಷ್ಮಿಕಾಂತ ಸ್ವಾಮಿಯವರ ನಾಮಸ್ಮರಣೆ ಮಾಡುತ್ತಾ ರಥವನ್ನು ಎಳೆಯಲಾಯಿತು.
ರಾಜ್ಯದ ವಿವಿಧಡೆಯಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದಲ್ಲಿ ಪಾಲ್ಗೊಂಡು ಪುರುಷರು, ಮಹಿಳೆಯರು, ಯುವಕರು ಸೇರಿದಂತೆ ಮಕ್ಕಳಾದಿಯಾಗಿ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಅವರ ದರ್ಶನ ಪಡೆದು ರಥವನ್ನು ಎಳೆಯುವ ಮೂಲಕ ಹಾಗೂ ಹಣ್ಣು ಜವನ ಎಸೆದು ತಮ್ಮ ಭಕ್ತಿ ಭಾವ ಮೆರೆದರು.
ಕಳಲೆ ಗ್ರಾಮದ ರಥ ಬೀದಿಯಲ್ಲಿ ಯಾವುದೇ ಅಡೆ-ತಡೆ ಇಲ್ಲದೆ ವಿರಾಜಮಾನವಾಗಿ ಸಾಗಿದ ಶ್ರೀ ಅವರ ರಥವು ಸ್ವಸ್ಥಾನ ಸೇರಿತು. ಇದೇ ಸಂದರ್ಭ ದೇವಾಲಯ ಹಾಗೂ ಹಾಗೂ ಹೊರ ಆವರಣಗಳನ್ನು ಬಣ್ಣ ಬಣ್ಣದ ಹೂವು ಹಾಗೂ ಹಸಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಹಣ್ಣು ಕಾಯಿ, ಸಿಹಿ, ತಿಂಡಿ ತಿನಿಸು ಸ್ಟೇಷನರಿ, ಆಟಿಕೆ ಸಾಮಾನುಗಳು ಸೇರಿದಂತೆ ವಿವಿಧ ಬಗೆಯ ಅಂಗಡಿ ಮುಂಗಟ್ಟುಗಳು ಜಾತ್ರೆಗೆ ಕಳೆ ಕಟ್ಟಿದ್ದವು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು. ಬಳಿಕ ದೇವಾಲಯದ ಪಾರುಪತ್ತಿಗಾರ ಜಯರಾಮ್ ಹಾಗೂ ಗ್ರಾಮದ ಹಿರಿಯ ಸಾಹಿತಿಗಳಾದ ಕಳಲೆ ಗುರುಸ್ವಾಮಿ ಮಾತನಾಡಿ ಜಾತ್ರೆಯ ಬಗ್ಗೆ ವಿವರಿಸಿ ಕೂಡಲೇ ಸರ್ಕಾರ ಸಂಬಂಧಪಟ್ಟ ಮುಜರಾಯಿ ಇಲಾಖೆ ಮತ್ತು ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ಇಂತಹ ಪುರಾತನ ದೇವಾಲಯಗಳ ಹಾಗೂ ರಥಗಳನ್ನು ಜೀರ್ಣೋದ್ಧಾರಗೊಳಿಸಿ ಉಳಿಸಿಕೊಂಡು ಹೋಗಲು ಜಾಗೃತರಾಗಬೇಕು ಎಂದು ಹಾಳು ಹಂಪಿಯಂತಾಗುತ್ತಿರುವ ನಮ್ಮ ಗ್ರಾಮದ ಪುರಾತನ ದೇವಾಲಯ ಹಾಗೂ ರಥದ ದುರಸ್ತಿ ಬಗ್ಗೆ ಗಮನ ಹರಿಸುವಂತೆ ದೇವಾಲಯದ ಇತಿಹಾಸದ ಬಗ್ಗೆಯೂ ತಿಳಿಸಿದರು.
ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಮುಖ್ಯಾಧಿಕಾರಿ ಬಸಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಲಕ್ಷ್ಮಿಕಾಂತ ಸ್ವಾಮಿ ಟ್ರಸ್ಟ್ ನ ನರಸಿಂಹನ್, ವರದರಾಜನ್, ಮುಖಂಡರಾದ ಗುರುಮಲ್ಲಪ್ಪ, ನಂಜಮ್ಮಣಿ ಗುರುಮಲ್ಲಪ್ಪ, ಸೇರಿದಂತೆ ಗ್ರಾಮದ ಎಲ್ಲ ಬೀದಿಯ ಯಜಮಾನರುಗಳು, ಮುಖಂಡರುಗಳು, ಯುವಕರುಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು