ಇತ್ತೀಚಿನ ಸುದ್ದಿ
ಕೂಡ್ಲಿಗಿ ತಲುಪಿದ ಸನ್ನತಿ ಪಂಚಶೀಲ ಬೌದ್ಧ ಪಾದಯಾತ್ರಿಕರು: ಸನ್ನತಿಯಿಂದ ಬೆಂಗಳೂರಿಗೆ
26/12/2024, 18:41
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಶ್ವಶಾಂತಿಗಾಗಿ ಹಾಗೂ ಸನ್ನತಿಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ಮತ್ತು ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳಾದ ಬೌದ್ಧ ಧಾರ್ಮಿಕ ಕೇಂದ್ರ, ಸನ್ನತಿಯ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ ನೀಡಬೇಕು. ಹಾಗೂ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸನ್ನತಿಯಿಂದ, ಬೆಂಗಳೂರಿನ ವಿಧಾನಸೌಧ ದವರೆಗೆ ‘ಸನ್ನತಿ ಪಂಚಶೀಲ ಪಾದ ಯಾತ್ರೆ’ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ಕಳೆದ ನವೆಂಬರ್ 15ರಂದು ಸನ್ನತಿಯಿಂದ ಆರಂಭಗೊಂಡಿದ್ದು, 2025ರ ಜನವರಿ 24ರವರೆಗೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯು ಬೀದರ್ ಆಣದೂರಿನ, ವರಜ್ಯೋತಿ ಭಂತೇಜಿ ಯವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಸನ್ನತಿಯಿಂದ ಬೆಂಗಳೂರಿಗೆ ಪಾದಯಾತ್ರೆ ತೆರಳಲಿದ್ದು, 70 ದಿನಗಳು ನಿರಂತರವಾಗಿ ಸಂಚರಿಸಿ
ಒಟ್ಟು 1.000 ಕಿಮೀ ಕ್ರಮಿಸುವ ಪಾದಯಾತ್ರೆ ಇದಾಗಿದೆ. ಸನ್ನತಿಯಿಂದ ಆರಂಭಗೊಂಡ ಪಾದಯಾತ್ರೆ ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಸಾಗಿ. ಅಂತಿಮವಾಗಿ 2025ರ ಜನವರಿ 24ರಂದು, ಬೆಂಗಳೂರಿನ ಪ್ರೀಡಂ ಪಾರ್ಕ್ ತಲುಪಲಿದೆ. ಪಾದಯಾತ್ರಿಗಳಾದ 50 ಬೌದ್ಧ ಸನ್ಯಾಸಿಗಳು ಹಾಗೂ 500 ಬೌದ್ಧ ಅನುಯಾಯಿಗಳು. ಶಾಂತಿಯುತ ಪ್ರತಿಭಟನೆ ನಡೆಸಿ, ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಮನವಿ ಮಾಡಲಿದ್ದಾರೆ. ತಮ್ಮ ಹಕ್ಕೊತ್ತಾಯ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೀಡಲಿದ್ದು, ಈ ಮೂಲಕ ತಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
*ಕೂಡ್ಲಿಗಿ ದಲಿತ ಮುಖಂಡರಿಂದ ಆತಿಥ್ಯ:* ಹೊಸಪೇಟೆಯಿಂದ ಆಗಮಿಸಿದ ಬೌದ್ಧ ಪಾದಯಾತ್ರಿಗಳ ದಂಡು, ಡಿ 23ರಂದು ರಾತ್ರಿ ಕೂಡ್ಲಿಗಿ ಪಟ್ಟಣನ್ನು ತಲುಪಿತ್ತು. ದಲಿತ ಮುಖಂಡ ಎಸ್.ದುರುಗೇಶ ನೇತೃತ್ವದ ಪಟ್ಟಣದ ದಲಿತ ಮುಖಂಡರ ತಂಡವು, ಪದಾ ಯಾತ್ರಿಕರನ್ನು ಬಹು ಉತ್ಸುಕತೆಯಿಂದ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ದಲಿತ ಯುವ ಮುಖಂಡರಾದ ಎಸ್.ದುರುಗೇಶ ಸೇರಿದಂತೆ, ಮಾಜಿ ಸೈನಿಕ ಎಚ್. ರಮೇಶ್. ವಕೀಲರಾದ ಡಿ.ಎಚ್.ದುರ್ಗೇಶ್, ಉಪನ್ಯಾಸಕರಾದ ಎಸ್. ಚಾರೇಶ್ ರವರು ಸರತಿಯಂತೆ. 2500 ವರ್ಷಗಳ ಹಿಂದಿನ ಗೌತಮ ಬುದ್ಧರ ಅಸ್ತಿಗಳನ್ನೊಳಗೊಂಡ ಬುದ್ಧರ ಕಳಸವನ್ನು, ಶ್ರದ್ಧೆ ಭಕ್ತಿಯಿಂದ ತಮ್ಮ ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾದರು.
ತಮಟೆ ವಾದ್ಯ ವೃಂಧದೊಂದಿಗಿನ ಮೆರವಣಿಗೆ ಮೂಲಕ ಪಾದಯಾತ್ರಿಕರನ್ನು, ಡಾ. ಬಿ.ಆರ್.ಅಂಬೇಡ್ಕರ್ ನಗರಕ್ಕೆ ಕರೆದೊಯ್ಯುದರು. ಅಲ್ಲಿ ಅವರೆಲ್ಲರನ್ನು ಸಕಲ ಗೌರವ ಆಧಾರಾತಿಥ್ಯಗಳಿಂದ ಸತ್ಕರಿಸಿದರು. ಅವರನ್ನೊಳಗೊಂಡಂತೆ ಜಾಗ್ರತೆ ಕಾರ್ಯಕ್ರಮ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ತಮ್ಮ ಪಾದಯಾತ್ರೆಯ ಧ್ಯೇಯೋದ್ಧೇಶಗಳ ಬಗ್ಗೆ ವಿವರಿಸಿದರು, ಮತ್ತು ಭೀಮರಾವ್ ಅವರ. “ಜಾತಿ ಮುಕ್ತ ಸದೃಢ ದೇಶ ನಿರ್ಮಾಣ” ದ ಕನಸು ನನಸಾಗಿಸುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು, ಮತ್ತು ಅದನ್ನು ಸಕಾರಗೊಳಿಸಲು ಸರ್ವರೂ ಶ್ರಮಿಸೋಣವೆಂದು ನರೆದವರಿಗೆ ಕರೆ ನೀಡಿದರು. ನಂತರ ಅವರು ರಾತ್ರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ವಿಶ್ರಾಂತಿ ಪಡೆದು ತಂಗಿದ್ದರು. ಡಿ24ರಂದು ಬೆಳಿಗ್ಗೆ ಅವರು, ಎಂದಿನಂತೆ ತಮ್ಮ ಪಾದಯಾತ್ರೆಯನ್ನು ಚಿತ್ರದುರ್ಗದೆಡೆಗೆ ಮುಂದು ವರೆಸಿದರು. ಪಟ್ಟಣದ ದಲಿತ ಮುಖಂಡರು, ಪಾದಯಾತ್ರಿಕರಿಗೆ ನಮನಗಳನ್ನು ಸಲ್ಲಿಸಿ ಸಂಪ್ರಾಯಿಕವಾಗಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಎಸ್.ದುರುಗೇಶ ಸೇರಿದಂತೆ, ಹೆಗ್ಡಾಳ್ ಮಹೇಶ್, ಪರಶುರಾಮ್, ಬಿ ಶಿವರಾಜ್, ಚಲುವಾದಿ ಮಾರಪ್ಪ, ಬಿ.ಮಹೇಶ್, ಚಲವಾದಿ ಮಂಜುನಾಥ್. ಅಂಬೇಡ್ಕರ್ ನಗರದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.