1:37 PM Wednesday22 - January 2025
ಬ್ರೇಕಿಂಗ್ ನ್ಯೂಸ್
ಸ್ಥಳ ಮಹಜರು: ಕೋಟೆಕಾರು ದರೋಡೆ ಪ್ರಕರಣದ ಆರೋಪಿ ಪರಾರಿಗೆ ಯತ್ನ; ಪೊಲೀಸರ ಗುಂಡೇಟು,… ಕೋಟೆಕಾರು ದರೋಡೆ ಪ್ರಕರಣ: ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ… ಗಾಂಧಿ ಭಾರತ ಮರು ನಿರ್ಮಾಣ ಕನ್ನಡ- ಆಂಗ್ಲ ಪುಸ್ತಕ ಬಿಡುಗಡೆ: ಬೃಹತ್ ಗಾಂಧಿ… ಕಾಂತಾರ: ಚಾಪ್ಟರ್ 1 ಸಿನಿಮಾ ತಂಡ ಷರತ್ತು ಉಲ್ಲಂಘಿಸಿದರೆ ಚಿತ್ರೀಕರಣ ಸ್ಥಗಿತ: ಅರಣ್ಯ… ನಂಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ, ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ: ಡಿಸಿಎಂ ಡಿ.ಕೆ.… ಮಹಾತ್ಮ ಗಾಂಧಿ ರಿಯಲ್ ಗಾಂಧಿ, ಸೋನಿಯಾ, ರಾಹುಲ್, ಪ್ರಿಯಾಂಕ ಅವರು ನಕಲಿ ಗಾಂಧಿಗಳು:… ಬೆಂಗಳೂರು ಐಟಿ ಹಬ್, ವ್ಯೂಹಾತ್ಮಕ ನಗರ; ಇಲ್ಲೇ ಐಕ್ಯಾಟ್ ಕೇಂದ್ರ ಖಚಿತ: ಕೇಂದ್ರ… ಮುಡಾ ಕುರಿತು ಇಡಿ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ 5ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಜನವಾದಿ ಮಹಿಳಾ… ಮಂಗಳೂರಿನ ಜನತೆಗೆ ಕಲುಷಿತ ನೀರು ಪೂರೈಕೆ: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ…

ಇತ್ತೀಚಿನ ಸುದ್ದಿ

ನಂಜನಗೂಡು ನಗರ ಸಭೆ ಆಯವ್ಯಯ ಪೂರ್ವಭಾವಿ ಸಭೆ: ದೂರ ಉಳಿದ ಸಾರ್ವಜನಿಕರು, ಸಂಘ- ಸಂಸ್ಥೆಗಳು!

22/01/2025, 13:37

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಬಹಳ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ನಂಜನಗೂಡು ನಗರವೂ ಕೂಡ ಒಂದಾಗಿದ್ದು ಪುರಸಭೆಯಿಂದ ನಗರಸಭೆಯಾಗಿ ಬಡ್ತಿ ಪಡೆದು ಸುಮಾರು ವರ್ಷಗಳೇ ಕಳೆದಿವೆ


ಪ್ರತಿ ವರ್ಷದಂತೆ 2025 -26ನೇ ಸಾಲಿನ ಆಯ ವ್ಯಯ ಪೂರ್ವಭಾವಿ ಸಭೆಯಲ್ಲಿ ನಗರದ ಅಭಿವೃದ್ಧಿಗೆ ಪೂರಕವಾಗಿ ಸಲಹೆ ಸೂಚನೆಗಳನ್ನು ತಿಳಿಸಿ ಪರಿಹಾರ ಕಲ್ಪಿಸಿಕೊಡುವ ಯಾವೊಬ್ಬ ಸಾರ್ವಜನಿಕರು ಕೂಡ ಆಯವ್ಯಯ ಪೂರ್ವಭಾವಿ ಸಭೆಗೆ ಆಗಮಿಸದೆ ಖಾಲಿ ಕುರ್ಚಿಗಳ ದರ್ಶನದಿಂದಾಗಿ ನಗರಸಭಾ ಆಡಳಿತಕ್ಕೆ ಮುಖಭಂಗವಾಗಿರುವ ಘಟನೆ ನಡೆದಿದೆ.
ನಂಜನಗೂಡು ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಪೌರಾಯುಕ್ತರಾದ ವಿಜಯ್ ನೇತೃತ್ವದಲ್ಲಿ 2025 -26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು.
ಪ್ರತಿ ವರ್ಷ ನಡೆಯುವ ಸಭೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಪರ ಸಂಘಟನೆಗಳ ಮುಖಂಡರು ಪೂರ್ವಭಾವಿ ಸಭೆಗೆ ಆಗಮಿಸಿ ಬಜೆಟ್ ನಲ್ಲಿ ಹೊಸದಾಗಿ ಸೇರಿಸಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮ, ತಮ್ಮ ಸಲಹೆ ಸೂಚನೆಗಳು ಮತ್ತು ಅಭಿಪ್ರಾಯಗಳನ್ನು ನೀಡುವುದು ವಾಡಿಕೆ. ಆದರೆ ಈ ಬಾರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಪರಿಣಾಮ ಸರ್ಕಾರ ಹಣಕಾಸಿನ ದುಸ್ಥಿತಿಯನ್ನು ಎದುರಿಸುತ್ತಿದ್ದು ಯಾವ ಅಭಿವೃದ್ಧಿ ಕೆಲಸಗಳು ನಡೆಯುವುದಿಲ್ಲ ಎಂಬ ವಿಚಾರ ಅರಿತಿರುವ ಸಾರ್ವಜನಿಕರು ಮತ್ತು ಸಂಘಟಕರುಗಳು ಪೂರ್ವಭಾವಿ ಸಭೆಗೆ ಗೈರಾಗಿರಬಹುದು ಎನ್ನಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಹಣಕಾಸಿನ ಕೊರತೆಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಮಾಹಿತಿಯನ್ನು ಅರಿತಿರುವ ನಂಜನಗೂಡಿನ ವಾಸಿಗಳು ಹಾಗೂ ಸಾರ್ವಜನಿಕರು ಪೂರ್ವಭಾವಿ ಸಭೆಗೆ ಹೋಗಿ ಸುಮ್ಮನೆ ಕಾಲಹರಣ ಮಾಡುವುದರ ಬದಲಾಗಿ ಸಭೆಗೆ ಹೋಗದಿರುವುದೇ ಮೇಲು ಎಂಬ ನಿರ್ಧಾರಕ್ಕೆ ಬಂದೋ ಅಥವಾ ನಗರ ಸಭೆಯವರ ಪ್ರಚಾರದ ಕೊರತೆಯಿಂದಲೊ ಸಾರ್ವಜನಿಕರು ಸಭೆಗೆ ಬಾರದೆ ಯಾವುದೇ ವಿಚಾರಗಳು ಸಭೆಯಲ್ಲಿ ಚರ್ಚೆಯಾಗದೆ ಕೇವಲ ಬೆರಳೆಣಿಕೆಯಷ್ಟು ಪತ್ರಕರ್ತರು, ಸಾರ್ವಜನಿಕರು ಹಾಗೂ ನಗರಸಭಾ ಸಿಬ್ಬಂದಿಗಳಿಗೆ ಅಧ್ಯಕ್ಷ ಶ್ರೀಕಂಠ ಸ್ವಾಮಿ ಹಾಗೂ ಪೌರಾಯುಕ್ತ ವಿಜಯ್ ನಂಜನಗೂಡು ನಗರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿ ಉತ್ತಮ ಬಜೆಟ್ ನೀಡುವ ಆರಿಕೆ ಮಾತುಗಳನ್ನಾಡಿ ತರಾತುರಿಯಲ್ಲಿ ಆಯ ವ್ಯಯ ಸಭೆಯನ್ನು ಮುಕ್ತಾಯಗೊಳಿಸಿದರು.
ಪೂರ್ವಾಭಾವಿ ಸಭೆಯಲ್ಲಿ ಸಾರ್ವಜನಿಕರ ಕೊರತೆಯಿಂದ ಎದ್ದು ಕಾಣುತ್ತಿದ್ದ ಖಾಲಿ ಕುರ್ಚಿಗಳ ದರ್ಶನದಿಂದಾಗಿ ನಗರಸಭಾ ಸದಸ್ಯರು ಮೌನಕ್ಕೆ ಶರಣಾಗಿದ್ದರು ಎನ್ನುವಂತಿತ್ತು.
ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ಉಪಾಧ್ಯಕ್ಷರಾದ ರೆಹನಾ ಬಾನು, ನಗರ ಸಭಾ ಪೌರಾಯುಕ್ತರಾದ ವಿಜಯ್, ಸದಸ್ಯರುಗಳಾದ ಮಹದೇವ ಪ್ರಸಾದ್, ಗಾಯತ್ರಿ ಮೋಹನ್, ಸಿದ್ದಿಕ್ಅಹ್ಮದ್, ಮಹೇಶ್ ಅತ್ತಿಕಾನೆ ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು