4:26 PM Monday9 - February 2026
ಬ್ರೇಕಿಂಗ್ ನ್ಯೂಸ್
ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ*

ಇತ್ತೀಚಿನ ಸುದ್ದಿ

ನಂಜನಗೂಡು: ಕೆಐಎಡಿಬಿಗೆ ಭೂಮಿ ನೀಡಿ ಉದ್ಯೋಗ ಸಿಗದ ರೈತ ಆತ್ಮಹತ್ಯೆ; ಜಿಲ್ಲಾಡಳಿತ ವೈಫಲ್ಯದಿಂದ ಕುಟುಂಬ ಅನಾಥ

20/11/2023, 16:52

ಮೋಹನ್ ನಂಜನಗೂಡು ಮೈಸೂರು

info.reeporterkarnataka@gmail.com

ಕೈಗರಿಕಾ ಪ್ರದೇಶಕ್ಕಾಗಿ ರೈತರಿಂದ ಭೂಮಿ ಪಡೆದುಕೊಂಡು ಉದ್ಯೋಗ ನೀಡದೆ ವಂಚನೆ ಮಾಡಿರುವ ಹಿನ್ನಲೆ.ಡೆಟ್ ನೋಟ್ ಬರೆದಿಟ್ಟು ರೈತ ಯುವಕ ಆತ್ಮಹತ್ಯೆ‌ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಯುವಕ ಸಿದ್ದರಾಜು(35) ಎಂಬುವವರೆ ಮೃತ ದುರ್ದೈವಿ.


ಅಡಕನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸೇರಿದ ಮೃತ ಸಿದ್ದರಾಜು ಅವರ ಪಿತ್ರಾರ್ಜಿತ ಆಸ್ತಿಯನ್ನು ಕೆಐಎಡಿಬಿ ವಶಪಡಿಸಿಕೊಂಡು ಅದನ್ನು
ಪಾರ್ಲೆ ಆಗ್ರೋ ಇಂಡಸ್ಟ್ರೀಸ್ ಕಂಪನಿಗೆ ಹಂಚಿಕೆ ಮಾಡಿತ್ತು.
ಆದರೆ ಕೆಐಎಡಿಬಿ ಪ್ರಕಾರ ಭೂಮಿ ಕಳೆದುಕೊಂಡ ರೈತ ಅಥವಾ ರೈತ ಮಕ್ಕಳಿಗೆ ಉದ್ಯೋಗ ನೀಡಬೇಕು ಎಂಬ ನಿಯಮವಿದ್ದರೂ ಮೃತ ರೈತನ ಕುಟುಂಬಕ್ಕೆ ಕೆಐಎಡಿಬಿ ಯಾಗಲಿ ಅಥವ ರೈತರ ಜಮೀನಿನಲ್ಲಿ ಕಾರ್ಖಾನೆ ನಡೆಸುತ್ತಿರುವ ಪಾರ್ಲೆ ಆಗ್ರೋ ಇಂಡಸ್ಟ್ರೀಸ್ ಕಂಪನಿ ಯಾಗಲಿ ಮಾನವೀಯತೆ ದೃಷ್ಟಿಯಿಂದಲಾದರು ಉದ್ಯೋಗ ನೀಡದೆ ಇರುವುದು ಘಟನೆಗೆ ಕಾರಣವೆನ್ನಲಾಗಿದೆ.
ಭೂಮಿ ಕಳೆದುಕೊಂಡ ರೈತ ಮಕ್ಕಳಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಕಾರ್ಖಾನೆ ಮುಂದೆ ಹಸಿರು ಸೇನೆ ಹಾಗೂ ರೈತ ಸಂಘಟನೆ ಗಳು ಕಳೆದ 45 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಗಳನ್ನು ಸಹ ಹಮ್ಮಿಕೊಂಡಿದ್ದವು. ಆದರೂ ಉದ್ಯೋಗ ನೀಡದ ಕೆಐಎಡಿಬಿ ಹಾಗೂ ಕಾರ್ಖಾನೆಯಿಂದ ಮನನೊಂದ ರೈತ ಸಿದ್ದರಾಜು ಡೆಟ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ‌.
ಮೃತನ ಪತ್ನಿ ರಕ್ಷಿತಾ ನೀಡಿರುವ ದೂರಿನ ಮೇರೆಗೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರಿಗೆ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆ.
ಘಟನೆಯ ಬಗ್ಗೆ ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಕೆಐಎಡಿಬಿ ಹಾಗೂ ಕಾರ್ಖಾನೆ ಯವರ ರೈತ ವಿರೋಧಿ ನೀತಿಯನ್ನು ಖಂಡಿಸಿ ಮೃತನ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು