ಇತ್ತೀಚಿನ ಸುದ್ದಿ
ನಂಜನಗೂಡು: ಖತರ್ನಾಕ್ ಕಳ್ಳನ ಕೈಚಳಕ; ಮನೆ ಬಾಗಿಲು ಮೀಟಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳವು
15/01/2024, 23:30

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಖತರ್ನಾಕ್ ಕಳ್ಳನೊಬ್ಬ ಮನೆ ಬಾಗಿಲು ಮೀಟಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕದ್ದೋಯ್ದಿರುವ ಘಟನೆ ನಂಜನಗೂಡು ಪಟ್ಟಣದ ಕೆಂಪೇಗೌಡ ಲೇಔಟ್ ನಲ್ಲಿ ನಡೆದಿದೆ.
ನಂಜನಗೂಡಿನ ಹೆಸರಾಂತ ಸುರುಚಿ ಉಪ್ಪಿನಕಾಯಿ ಮಾಲೀಕ ವಿಶ್ವಚೇತನ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.
ಪಟ್ಟಣದ ಕೆಂಪೇಗೌಡ ಬಡಾವಣಿಯ 3ನೇ ಕ್ರಾಸ್ ನಲ್ಲಿ ವಿಶ್ವಚೇತನ್ ಹಾಗೂ ಕುಟುಂಬ ದವರು ಬಾಡಿಗೆಗೆ ಮನೆ ಪಡೆದಿದ್ದರು. ವಾರಾಂತ್ಯ ಮಕ್ಕಳಿಗೆ ಶಾಲಾ ರಜೆ ಇದ್ದ ಕಾರಣ ಮನೆಗೆ ಬೀಗ ಹಾಕಿ ತಮ್ಮ ಫ್ಯಾಕ್ಟರಿ ಮನೆಗೆ ಹೋಗಿದ್ದರು ಎನ್ನಲಾಗಿದೆ.
ಹಾಗಾಗಿ ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿರುವ ಕಳ್ಳ ತನ್ನ ಕೈ ಚಳಕ ತೋರಿ ಮನೆ ಬಾಗಿಲು ಮೀಟಿ ಒಳನುಗ್ಗಿ ಬೀರುವಿನಲ್ಲಿದ್ದ ಸುಮಾರು 200 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುತ್ತಾನೆ.
ವಿಷಯ ತಿಳಿದು ಪಟ್ಟಣ ಠಾಣ ಇನ್ಸ್ಪೆಕ್ಟರ್ ಬಸವರಾಜು ಪಿಎಸ್ಐ ಶಿವಣ್ಣ ಸೇರಿದಂತೆ ಸಿಬ್ಬಂದಿಗಳು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ
ಮಾಲೀಕ ವಿಶ್ವಚೇತನ್ ಮಾತನಾಡಿ ಕಳ್ಳತನದ ಘಟನೆಯ ಬಗ್ಗೆ ವಿವರಿಸಿದರು.