ಇತ್ತೀಚಿನ ಸುದ್ದಿ
ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ
11/09/2024, 19:11
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಶಿರಮಳ್ಳಿ ಗ್ರಾಮದಲ್ಲಿ ಉಪ್ಪಾರ ಭಗೀರಥ ಸಮುದಾಯ ಭವನ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕ ದರ್ಶನ್ ದ್ರುವ ನಾರಾಯಣ್ ಇಂದು ಭೂಮಿ ಪೂಜೆ ನೆರವೇರಿಸಿದರು.
ಗ್ರಾಮದ ಉಪ್ಪಾರ ಭಗೀರಥ ಸಮುದಾಯ ಭವನಕ್ಕೆ ಮುಂದುವರಿದ ಕಾಮಗಾರಿಗಾಗಿ 5 ಲಕ್ಷ ಹಾಗೂ ಕನಕ ಸಮುದಾಯ ಭವನದ ನೂತನ ಕಟ್ಟಡಕ್ಕೆ 5 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಗ್ರಾಮಕ್ಕೆ ಬಂದ ಶಾಸಕರು ಮತ್ತು ಮಾಜಿ ಶಾಸಕರಿಗೆ ಗ್ರಾಮಸ್ಥರು ಮಾಲಾರ್ಪಣೆ ಮಾಡಿ ಗೌರವಿಸಿದರು. ಭೂಮಿ ಪೂಜೆ ನೆರವೇರಿಸಿ ಶಾಸಕ ದರ್ಶನ್ ದ್ರುವನಾರಾಯಣ್ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ನಿಮಗೆ ಕೊಟ್ಟ ಮಾತಿನಂತೆ ಇಂದು ನಿಮ್ಮ ಗ್ರಾಮದಲ್ಲಿ ಎರಡೂ ಸಮುದಾಯದ ಭವನನಗಳಿಗೆ ಹಣ ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದೆ ಇದಕ್ಕೆ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡುತ್ತೇನೆ. ತಮ್ಮೆಲ್ಲರ ಸಹಕಾರ ಮುಂದೆಯೂ ಹೀಗೆ ಇರಲಿ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಸ್ವಾಮಿ, ಬ್ಲಾಕ್ ಅಧ್ಯಕ್ಷರುಗಳಾದ ಕುರಟ್ಟಿ ಮಹೇಶ್, ಶ್ರೀಕಂಠ ನಾಯಕ ಶಂಕರ್ ಮುಖಂಡರಾದ ಮಾರುತಿ ರಾಜು ಸ್ವಾಮಿ ಗೌಡ, ಪುಟ್ಟಸ್ವಾಮಿಗೌಡ,ಬೆಳ್ಳಶೆಟ್ಟಿ, ಶಿವಣ್ಣ ಶೆಟ್ಟಿ,ಮೊಳ್ಳೇಗೌಡ, ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.