ಇತ್ತೀಚಿನ ಸುದ್ದಿ
ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ
13/01/2025, 15:24
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ವತಿಯಿಂದ ಪ್ರತಿ ವರ್ಷ ಆರಿದ್ರ ನಕ್ಷತ್ರದಲ್ಲಿ ಆಚರಿಸಿಕೊಂಡು ಬರುತ್ತಿರುವ ಅಂದಕಾಸುರ ವಧೆ ಆಚರಣೆ ನಡೆಯಿತು.
ಪಟ್ಟಣದ ರಾಕ್ಷಸಮಂಟಪ ವೃತ್ತದಲ್ಲಿ ಕಾರ್ಯಕ್ರಮ
ಆಯೋಜನೆ ಮಾಡಲಾಗಿತ್ತು.
ಅಂಧಕಾಸುರ ರಾಕ್ಷಸನನ್ನು ಹೋಲುವ ರಂಗೋಲಿ ಬಿಡಿಸಿ ಅದಕ್ಕೆ ದೇವಾಲಯದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ರಿಂದ ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕಳಶ ಪೂಜೆ ಮಾಡಿ ಜೀವಕಳೆ ತುಂಬಿ ದಿಗ್ಬಂಧನ ಹಾಕಲಾಗುತ್ತದೆ.
ನಂತರ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಿಂದ ತಾಂಡವೇಶ್ವರ ಹಾಗೂ ಪಾರ್ವತಿದೇವಿ ಉತ್ಸವ ಮೂರ್ತಿಗಳ ಆಗಮನವಾಗುತ್ತದೆ.
ಉತ್ಸವ ಮೂರ್ತಿ ಹೊತ್ತು ತಂದ ಅರ್ಚಕರಿಂದ ಅಂಧಕಾಸುರನ ರಂಗೋಲಿ ಅಳಿಸಿ ಹಾಕುವ ಕಾರ್ಯ ನಡೆಯುತ್ತದೆ
ಇದಾದ ಬಳಿಕ ಬಂದ ಪಾರ್ವತಿದೇವಿ ಉತ್ಸವ ಮೂರ್ತಿಯಿಂದ ಸಮಾಧಾನ ಪಡಿಸವ ಆಚರಣೆ ಮಾಡಲಾಗುತ್ತದೆ. ಅಲ್ಲಿಂದ ಉತ್ಸವ ಮೂರ್ತಿ ತೆರಳಿದ ನಂತರ ಆವರಣಕ್ಕೆ ನುಗ್ಗಿ ರಂಗೋಲಿ ಅಳಿಸಿ ಹಾಕಿದ ಯುವಕರ ತಂಡ.
ಅಂಧಕಾಸುರನ ರಂಗೋಲಿ ತುಳಿಯುತ್ತಾ ಕುಣಿದು ಕುಪ್ಪಳಿಸಿದ ಯುವಕರು ಹಾಗೂ ಶ್ರೀ ನಂಜುಂಡಪ್ಪನ ಭಕ್ತರು.
ಅಂತಿಮವಾಗಿ ಯಾವುದೇ ತೊಂದರೆ ಇಲ್ಲದೇ ಮುಕ್ತಾಯಗೊಂಡ ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ.
ಕಳೆದ ವರ್ಷ ಮಹಿಷಾಸುರನ ಭಾವಚಿತ್ರ ಬಿಡಿಸಿ ನಡೆಯುತ್ತಿದ್ದ ಆಚರಣೆಯಲ್ಲಿ ಕೆಲವು ದಲಿತ ಸಂಘಟನೆಗಳು ಅಡ್ಡಿಪಡಿಸಿ ಸಂಘರ್ಷಕ್ಕೆ ಕಾರಣವಾಗಿತ್ತು
ಹಾಗಾಗಿ ಈ ಬಾರಿ ಎಚ್ಚರಿಕೆಯಿಂದ ಅಂಧಕಾಸುರನ ಚಿತ್ರವನ್ನೇ ಬಿಡಿಸಿ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ನಿರ್ವಿಘ್ನವಾಗಿ ನಡೆಯಿತು. ಕಳೆದ ವರ್ಷದ ಕಹಿ ಘಟನೆಯಿಂದಾಗಿ ಈ ಬಾರಿ ಯಾವುದೇ ಆಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು.