ಇತ್ತೀಚಿನ ಸುದ್ದಿ
ನಂಜನಗೂಡು: 2 ಕೋಟಿ ರೂ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ
19/06/2024, 20:36
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಸುಮಾರು 2 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳಿಗೆ ನಂಜನಗೂಡಿನ ಶಾಸಕ ದರ್ಶನ್ ದ್ರುವನಾರಾಯಣ್ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಂಜನಗೂಡು ಪಟ್ಟಣದ ಕಪಿಲಾ ನದಿ ತೀರದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ 50 ಮೀಟರ್ ಸೋಪಾನಕಟ್ಟೆ ಹಾಗೂ 50 ಮೀಟರ್ ತಡೆಗೋಡೆ ಕಾಮಗಾರಿ ಅಲ್ಲದೆ ಹುಲ್ಲಹಳ್ಳಿ ಕಪಿಲಾ ನದಿ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ 80 ಮೀಟರ್ ಸೋಪಾನಕಟ್ಟೆ ಹಾಗೂ 10 ಮೀಟರ್ ತಡೆಗೋಡೆ ಕಾಮಗಾರಿಗಳಿಗೆ ಶಾಸಕ ದರ್ಶನ್ ಭೂಮಿ ಪೂಜೆ ನೆರವೇರಿಸಿದರು.
ನಂಜನಗೂಡು ತಾಲೂಕಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಬಿಡುಗಡೆಯಾಗಿರುವ 5 ಕೋಟಿ ರೂಪಾಯಿ ಅನುದಾನದಡಿ ಕಾಮಗಾರಿಗೆ ಚಾಲನೆ ನೀಡಿದರು. ಗುದ್ದಲಿ ಪೂಜೆ ನೆರವೇರಿಸಿ ಶಾಸಕ ದರ್ಶನ್ ದೃವ ನಾರಾಯಣ್ ಮಾತನಾಡಿ ಸಣ್ಣ ನೀರಾವರಿ ಇಲಾಖೆ ಸಚಿವರಾದ ಬೋಸ್ ರಾಜ್ ಅವರು ನಮ್ಮ ನಂಜನಗೂಡಿಗೆ ಐದು ಕೋಟಿ ಅನುದಾನ ನೀಡಿದ್ದಾರೆ. ಅದರಲ್ಲಿ ಈ ಎರಡೂ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅನುದಾನ ನೀಡಿದ ಸಚಿವರಿಗೂ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೂ ನಂಜನಗೂಡು ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸುತ್ತಾ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಇದೇ ಸಂದರ್ಭ ಅಯ್ಯಪ್ಪ ಸ್ವಾಮಿ ದೇಗುಲದ ಗುರುಸ್ವಾಮಿಗಳಾದ ಪಿ. ದೇವರಾಜ್ ಮಾತನಾಡಿ ಶಾಸಕರು ತಮ್ಮ ತಂದೆಯವರಂತೆ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಅವರು ಕೊಟ್ಟ ಮಾತಿನಂತೆ ಭಕ್ತರ ಅನುಕೂಲಕ್ಕಾಗಿ ಮೊದಲ ಹಂತದಲ್ಲಿ ದೇವಾಲಯದ ಬಳಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಶಾಲೆಗೆ ನೀಡಿದ್ದಾರೆ ಎಂದು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಶಾಲುಹೊದಿಸಿ ಮಾಲಾಪಣೆ ಮಾಡಿ ಅಭಿನಂದಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಮುಖಂಡರಾದ ಶಿವನಂಜನಾಯಕ, ಮಾರುತಿ, ಅಭಿನಂದನ್ ಮಾದಪ್ಪ, ವಕೀಲ ನಾಗರಾಜಯ್ಯ ಮಂಜುನಾಥ್, ಚಂದ್ರು, ಗಾಯತ್ರಿ ಮೋಹನ್ ಸೇರಿದಂತೆ ಹಲವು ನಗರಸಭಾ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.