5:46 AM Wednesday23 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ನಂಜನಗೂಡು: ಅರಣ್ಯ ಇಲಾಖೆ ಷರತ್ತಿಗೆ ಸಿಡಿದೆದ್ದ ಮಹದೇಶ್ವರ ಸ್ವಾಮಿ ಭಕ್ತರು; ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ; ದರುಶನವಿಲ್ಲದೆ ಹಿಂದಿರುಗಿದ ಭಕ್ತಜನ

02/01/2024, 14:57

ಅನಾದಿಕೃತ ರೆಸಾರ್ಟ್, ಐಷಾರಾಮಿ ಹೋಟೆಲ್ ಮೋಜು ಮಸ್ತಿಗೆ ಅವಕಾಶ ಕಲ್ಪಿಸಿಕೊಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳು ನೂರಾರು ವರ್ಷಗಳ ಇತಿಹಾಸವಿರುವ ಧಾರ್ಮಿಕ ಸೇವೆಗೆ ಬ್ರೇಕ್ ಹಾಕಲು ಮುಂದು

ಜಿಲ್ಲಾಧಿಕಾರಿಗಳೇ ಅರಣ್ಯ ಇಲಾಖೆ ಅಧಿಕಾರಿಗಳ ಪ್ರತಿಷ್ಠೆಯ ನಿರ್ಬಂಧಕ್ಕೆ ಕ್ರಮ ಏನು..!?

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಅರಣ್ಯಾಧಿಕಾರಿಗಳ ಷರತ್ತಿನಿಂದಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಶ್ರೀ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಭಕ್ತರ ಭಾವನೆಗೆ ಧಕ್ಕೆಯಾಗಿ ದೇವರ ದರ್ಶನ ಸಿಗದೆ ನಿರಾಸೆಯಿಂದ ಹಿಂದಿರುಗಿದ ಘಟನೆ ಬೇಲದ ಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಜರುಗಿದೆ.
ಅಧಿಕಾರಿಗಳ ಕಿರೀಕ್ ನಿಂದ ಸಾವಿರಾರು ಭಕ್ತರು ದೇವರ ದರುಶನದಿಂದ ವಂಚಿತರಾಗಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ವೇಳೆ ದೇವರ ದರುಶನದಿಂದ ವಂಚಿತರಾದ ಭಕ್ತರು ಅರಣ್ಯ ಇಲಾಖೆ ಷರತ್ತಿಗೆ ಆಕ್ರೋಷ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿರುವ ಬಂಡಿಪುರ ರಾಷ್ಟ್ರೀಯ ಉದ್ಯಾನವನದ
ವ್ಯಾಪ್ತಿಯಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪವಾಡ ಸದೃಶಗಳಿಗೆ ಸಾಕ್ಷಿಯಾದ ಶ್ರೀ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯವೂ ಇದೆ.
ದೇವರಿಗೆ ನಿರಂತರವಾಗಿ ಹರಕೆ ಹೊತ್ತು ಧಾರ್ಮಿಕ ಸಂಪ್ರದಾಯಗಳನ್ನ ಆಚರಿಸಿಕೊಂಡು ಬರುತ್ತಿದ್ದ ಭಕ್ತರಿಗೆ ಹೊಸವರ್ಷ ದಿನ ಅರಣ್ಯ ಇಲಾಖೆ ವಿಧಿಸಿರುವ ಷರತ್ತುಗಳು ದೇವರ ದರುಶನಕ್ಕೆ ಅಡ್ಡಿಯಾಗಿದೆ.
ಸೋಮವಾರ,ಶುಕ್ರವಾರ ಹಾಗೂ ಅಮಾವಾಸ್ಯೆ ದಿನಗಳಲ್ಲಿ ಮಾತ್ರ ದೇವಾಲಯಕ್ಕೆ ಪ್ರವೇಶ , ಖಾಸಗಿ ವಾಹನಗಳಿಗೆ ಪ್ರವೇಶ ನಿಷೇಧ ಹಾಗೂ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸಮಯ ನಿಗದಿ ಎಂಬ ಷರತ್ತುಗಳನ್ನ ಅರಣ್ಯ ಇಲಾಖೆ ವಿಧಿಸಿದೆ.
ಈ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳಲ್ಲಿ ಬಂದ ಭಕ್ತರನ್ನ ಗೇಟ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗಳು ತಡೆದಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಸಮಯ ನಿಗದಿ ಪಡಿಸಿರುವುದು ಭಕ್ತರನ್ನ ಕೆರಳಿಸಿದೆ. ನೂರಾರು ವರ್ಷಗಳ ಇತಿಹಾಸವಿರುವ ಪ್ರಸಿದ್ಧ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದೆ ಇಂತಹ ದೇವಾಲಯಕ್ಕೆ ಇಂತಹ ಪ್ರತಿಷ್ಠೆಯ ನಿರ್ಬಂಧಗಳನ್ನು ವಿಧಿಸಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ ಎಂದು ರೈತ ಸಂಘದ ನೂರಾರು ಮುಖಂಡರು ಮಹಿಳಾ ಭಕ್ತರು ಅರಣ್ಯಾಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು
ನೀವು ವಿಧಿಸಿರುವ ನಿರ್ಬಂಧ ಸಮರ್ಪಕವಾಗಿಲ್ಲವೆಂದು ಆರೋಪಿಸಿ ಅರಣ್ಯ ಅಧಿಕಾರಿಗಳು ಮತ್ತು ಭಕ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಮಹದೇಶ್ವರ ಸ್ವಾಮಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ,ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಉಳಿದ ಧಾರ್ಮಿಕ ಕ್ಷೇತ್ರಗಳು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಒಳಪಟ್ಟಿದ್ದರೂ.
ಅಲ್ಲಿಗೆ ಯಾವುದೇ ನಿಬಂಧನೆಗಳನ್ನ ಹೇರದ ಅರಣ್ಯ ಇಲಾಖೆ ಕೇವಲ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಏಕೆ ? ಎಂಬ ಪ್ರಶ್ನೆ ಭಕ್ತರದ್ದಾಗಿದೆ.
ಕಾಡಿನೊಳಗೆ ರೆಸಾರ್ಟ್, ಹೋಟೆಲ್ ಗಳನ್ನು ತರೆದು ಮುಕ್ತವಾಗಿ ಓಡಾಡಲು ಅನುಮತಿ ನೀಡಿರುವ ಅರಣ್ಯ ಇಲಾಖೆ ಭಕ್ತರಿಗೆ ಯಾಕೆ ಷರತ್ತು ವಿಧಿಸುತ್ತಿದೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಈ ದೇವಾಲಯ ಮುಜರಾಯಿ ಇಲಾಖೆಗೆ ಒಳಪಡುತ್ತದೆ.
ಅರಣ್ಯಾಧಿಕಾರಿಗಳ ಈ ಷರತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿಲ್ಲವೆಂಬ ಆರೋಪವಿದೆ.ಬೆಳಿಗ್ಗೆ 10 ಗಂಟೆ ನಂತರ ಪ್ರವೇಶ ಕಲ್ಪಿಸಿದರೆ ಭಕ್ತರಿಗೆ ಅನಾನುಕೂಲ ಎಂದು ತಿಳಿದಿದ್ದರೂ ಅರಣ್ಯ ಇಲಾಖೆ ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿದೆ.
ಸಾಕಷ್ಟು ಸಮಯ ಅರಣ್ಯಾಧಿಕಾರಿಗಳು
ಹಾಗೂ ಭಕ್ತರ ನಡುವೆ ತೀವ್ರ ವಾಗ್ವಾದ ನಡೆದ ಪರಿಣಾಮ ಬೇಸತ್ತ ಸಾವಿರಾರು ಭಕ್ತರು ವಾಪಸ್ ತೆರಳಿದ್ದಾರೆ.
ಸರ್ಕಾರಿ ಬಸ್ ನಲ್ಲಿ ತೆರಳಿದ ಭಕ್ತರಿಗೆ ಮಾತ್ರ ದರುಶನ ಭಾಗ್ಯ ದೊರೆತಿದೆ.ಈ ದೇವಾಲಯಕ್ಕೆ ಪ್ರವೇಶದ ಸಮಯವನ್ನ ಬದಲಿಸಿ ಅನುಕೂಲ ಮಾಡಬೇಕೆಂದು ಭಕ್ತರು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಮೈಸೂರು ಜಿಲ್ಲಾಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು