ಇತ್ತೀಚಿನ ಸುದ್ದಿ
ನಾಯಿ ನುಂಗಿ ನರಳುತ್ತಿದ್ದ ಹೆಬ್ಬಾವಿನ ಸೆರೆ: ಉರಗ ತಜ್ಞ ಹರೀಂದ್ರ ತಂಡದ ಕಾರ್ಯಾಚರಣೆ
09/07/2023, 22:39
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹಂತುವಾನಿ ಗ್ರಾಮದಲ್ಲಿ ನಾಯಿ ನುಂಗಿ ನರಳುತ್ತಿದ್ದ ಬೃಹತ್ ಹೆಬ್ಬಾವಿನ ರಕ್ಷಣೆ ಮಾಡಲಾಗಿದೆ.
15 ಅಡಿ ಉದ್ದ, 60 ಕೆ.ಜಿ. ತೂಕವಿದ್ದ ಹೆಬ್ಬಾವು
ಹಂರುವಾನಿ ಗ್ರಾಮದ ಶ್ರೀಮತಿ ಎಂಬುವರ ಮನೆ ಪಕ್ಕದಲ್ಲಿದ್ದ ನಾಯಿಯನ್ನ ನುಂಗಿ ಸಂಚರಿಸಲಾಗದೆ ಮಲಗಿತ್ತು.
ಉರಗತಜ್ಞ ಹರೀಂದ್ರರಿಂದ ಹೆಬ್ಬಾವು ರಕ್ಷಣೆ ಮಾಡಿದ್ದರು. ಅರಣ್ಯ ಅಧಿಕಾರಿ ರಾಘವೇಂದ್ರ ಸಮ್ಮುಖದಲ್ಲಿ ಹೆಬ್ಬಾವು ರಕ್ಷಣಾ ಕಾರ್ಯ ನಡೆದಿದೆ.
ಹೆಬ್ಬಾವನ್ನು ಸೆರೆ ಹಿಡಿದ ಉರಗತಜ್ಞ ಹರೀಂದ್ರ ಕಾಡಿಗೆ ಬಿಟ್ಟಿದ್ದಾರೆ.