ಇತ್ತೀಚಿನ ಸುದ್ದಿ
ನಾಗಮಂಗಲದಲ್ಲಿ ಇಂದಿರಾ ಕ್ಯಾಂಟೀನ್ ಗೆ ಚಾಲನೆ: ಸಂಕಷ್ಟ ಕಾಲದಲ್ಲಿ ಬಡವರ ಪಾಲಿಗೆ ಸಂಜೀವಿನಿ
24/05/2021, 17:40
ನಾಗಮಂಗಲ(reporterkarnataka news):ನಾಗಮಂಗಲ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿದ್ದ ಇಂದಿರಾ ಕ್ಯಾಂಟೀನ್ ಗೆ ಸೋಮವಾರ ಅಧಿಕೃತವಾಗಿ ಚಾಲನೆ ದೊರೆಯಿತು.
ತಾಲ್ಲೂಕಿನಲ್ಲಿ ಸಾರ್ವಜನಿಕ ಆಸ್ಪತ್ರೆಯ ಒಳಗೆ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಹಾಗೂ ಶಾಸಕ ಸುರೇಶ್ ಗೌಡ ಅವರು ಉದ್ಘಾಟಿಸಿ ಶುಭ ಕೋರಿದರು.
ತಾಲ್ಲೂಕಿನಲ್ಲಿ ಸಂಕಷ್ಟ ಕಾಲದಲ್ಲಿ ಇಂದಿರಾ ಕ್ಯಾಂಟೀನ್ ಸಂಜೀವಿನಿಯಾಗಿ ರಾಗಿರುವುದು ಸಂತೋಷದಾಯಕವಾಗಿದೆ. ಈಗಿನ ಸಂದರ್ಭದಲ್ಲಿ ಕ್ಯಾಂಟೀನ್ ನಲ್ಲಿ ಎಲ್ಲರಿಗೂ ಉಚಿತವಾಗಿ ಬೆಳಿಗ್ಗೆ ಮದ್ಯಾಹ್ನ ಹಾಗೂ ರಾತ್ರಿ ಊಟವನ್ನು ನೀಡಲಾಗುವುದು. ಇದನ್ನು ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು.
ಪುರಸಭೆ ಅಧ್ಯಕ್ಷ ರಾದ ಆಶಾ ವಿಜಯ ಕುಮಾರ್, ಉಪಾಧ್ಯಕ್ಷ ಜಾಫರ್, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೇಶ್ ತಾಲೂಕು ವೈದ್ಯರು, ತಹಶೀಲ್ದಾರ್ ಕುಂಞಿ ಅಹ್ಮದ್, ಪುರಸಭೆ ಸದಸ್ಯರು ಭಾಗವಹಿಸಿದ್ದರು.
ವಿಧಾನಪರಿಷತ್ ಸದಸ್ಯ ರಾದ ಅಪ್ಪಾಜಿ ಗೌಡರು ತಡವಾಗಿ ಬಂದರೂ ಕ್ಯಾಂಟೀನ್ ಉಧ್ಘಾಟನೆಯಲ್ಲಿ ಸೇರಿ ಆಹಾರ ಪಟ್ಟಣ ವಿತರಿಸಿದರು.